ಕಲಾವಿದರ ಸಂಘದಲ್ಲಿ ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ-ಹವನ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.
ಬೆಂಗಳೂರು (ಆ.14): ಕಲಾವಿದರ ಸಂಘದಲ್ಲಿ ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ-ಹವನ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ. ನಾಗಾರಾಧನೆ ಪೂಜೆ ನೇರವೇರಿಸಿ ಮಾತನಾಡಿದ ವಾಸುದೇವ್ ಭಟ್, ಪ್ರಸ್ತುತ ವಿದ್ಯಮಾನದಲ್ಲಿ ಯಾವುದೇ ತೊಂದರೆ ಇಲ್ಲ. ಮನುಷ್ಯ ಅನ್ನೋದು ಜ್ಞಾನ, ವಿದ್ಯೆ, ಬುದ್ದಿ,ಕಾಮ- ಕ್ರೋಧ, ಮಧ- ಮತ್ಸರ ಸಾಮಾನ್ಯ. ಒಬ್ಬರದ್ದು ಮನಸ್ಸು ಒಂದೊಂದು ರೀತಿ ಇರಬಹುದು. ಹಾಗಾಗೀ ದೇವರು ಎಲ್ಲರನ್ನು ಒಗ್ಗೂಡಿಸುವ ವಿಚಾರವಾಗಿ ಆಶೀರ್ವಚನ್ನ ನೀಡಬಹುದು.
ಅದನ್ನು ಹೊರತುಪಡಿಸಿ ಬೇರೆ ಯಾವ ಸೂಚನೆಯನ್ನು ಕೊಟ್ಟಿರಲಿಕ್ಕಿಲ್ಲ. ಇವತ್ತು ಮಾಡಿರುವ ಪ್ರಾಯಶ್ಚಿತ್ತ ದಿಂದ ಕನ್ನಡ ಚಿತ್ರೋದ್ಯಮ ಲೋಕದಲ್ಲಿ ಒಳ್ಳೆಯ ಸೂಚನೆ. ಬರುವ ದಿನಗಳಲ್ಲಿ ಒಳ್ಳೆ ಒಳ್ಳೆಯ ಧರ್ಮಕಾರ್ಯಗಳು ನಡೆಯಬೇಕು. ಚಿತ್ರೋದ್ಯಮ ಅಂದ್ರೆ ಮಹಾಕಾಳಿ, ಮಹಾ ಸರಸ್ವತಿ ಅಂತಹ ತ್ರಿಪುರ ಸುಂದರಿ ರಾಜರಾಜೇಶ್ವರಿ ಇರುವ ಸ್ಥಳ. ಈ ಸ್ಥಳ ದೇವಾಲಯ ಎಷ್ಟು ಪಾವಿತ್ರತೆಯೋ, ಅಷ್ಟು ಪಾವಿತ್ರತೆ ಈ ಜಾಗಕ್ಕೆ ಇರುತ್ತೆ. ಹಾಗಾಗೀ ಈ ರೀತಿಯ ಧರ್ಮ ಕಾರ್ಯಗಳು ನಡೆಯುತ್ತಿರಬೇಕು ಅಂತ ದೇವರು ಸೂಚನೆ ಕೊಟ್ಟಿರಬಹುದು. ಬಹುಶಃ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ, ಉತ್ತಮ ಅನುಗ್ರಹ ಬಂದಿದೆ ಅಂತ ಅನಿಸುತ್ತಿದೆ.
ನಾಗರಾಧನೆ ಯಾಕೆ ಮಾಡಿಸಲಾಗುತ್ತೆ ಆರೋಗ್ಯ, ಮಾನಸಿಕ ನೆಮ್ಮದಿ,ದಾಂಪತ್ಯ ಜೀವನ, ಸಂತತಿ, ಸಂಪತ್ತು ನಾವು ಮಾಡುವ ವೃತ್ತಿ, ಚಿತ್ರೋದ್ಯಮಕ್ಕೆ ನಾಗದೇವರ ಪೂರ್ಣ ಅನುಗ್ರಹ ಬೇಕು. ಒಂದು ಚಲನಚಿತ್ರ ಪ್ರಾರಂಭ ಆಗಬೇಕು ಅಂದ್ರೆ ಅನೇಕ ರೀತಿ ಟೆಕ್ನಿಷನ್ ಬರ್ತಾರೆ. ಅವರೆಲ್ಲರನ್ನೂ ಸರಿದೂಗಿಸಿಕೊಂಡು ಒಂದು ಚಲನಚಿತ್ರ ಒಳ್ಳೆಯ ರೀತಿ ಯಶಸ್ಸು ಸಾಧಿಸಲು ಎಲ್ಲರಿಗೂ ಸದ್ಬುದ್ದಿ ಕೊಡಬೇಕು. ನಾಗಾರಾಧನೆಯನ್ನ ಸಾವಿರಾರು ರೀತಿಯ ಅನುಗ್ರಹದ ಫಲವನ್ನು ಹಿರಿಯರು ತೋರಿಸಿಕೊಟ್ಟಿದ್ದಾರೆ. ಇವತ್ತು ಮಾಡಿರುವ ಪ್ರಾಯಶ್ಚಿತ್ತದಿಂದ ಚಿತ್ರೋದ್ಯಮಕ್ಕೆ ಕಲಾವಿದರು ಸೇರಿದಂತೆ ಎಲ್ಲರಿಗೂ ಅನುಗ್ರಹ ಪ್ರಾಪ್ತಿಯಾಗುತ್ತೆ. ನಾಗದೇವರು ಒಗ್ಗಟ್ಟನ್ನು ಮಾಡಿಸುತ್ತೆ ಎಂದರು.
ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಹೋಮದ ಮೊರೆ: ಹಿರಿಯ ಪತ್ರಕರ್ತ ಜೋಗಿ ಕೊಟ್ಟಿದ್ದಾರೆ ಉತ್ತಮ ಸಲಹೆ!
ಇನ್ನು ಕಲಾವಿದರ ಸಂಘದಲ್ಲಿ ನಡೆದ ನಾಗಾರಾಧನೆಯಲ್ಲಿ ನಾಗ ಪಾತ್ರಿ ಕಲಾವಿದರ ಮೇಲೆ ಸಿಟ್ಟು ಮಾಡಿಕೊಂಡು, ಕಲಾವಿದರ ಸಂಘದಲ್ಲಿ ಪ್ರತಿ ತಿಂಗಳು ಪೂಜೆ ಪುನಸ್ಕಾರ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಕಲಾವಿದರ ಸಂಘದಲ್ಲಿ ದೇವರ ಪೂಜೆ ಆಚರಣೆ ಮಾಡುತ್ತಿಲ್ಲ, ಬದಲಿಗೆ ಕಲಾವಿದರ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದೀರಿ ಎಂದು ದೈವ ಪಾತ್ರಿ ನುಡಿ ಕೊಟ್ಟಿದೆ. ಈ ವೇಳೆ ನಾಗ ಪಾತ್ರಿಯ ಪ್ರಶ್ನೆಗೆ ಹಿರಿಯ ಕಲಾವಿದರು ತಬ್ಬಿಬ್ಬಾಗಿದ್ದಾರೆ. ಜೊತೆಗೆ ಕಲಾವಿದರ ಸಂಘದಲ್ಲಿ ಹಣದ ಕೊರತೆಯೇ ಎಂದು ನಾಗ ಪಾತ್ರಿ ಪ್ರಶ್ನೆ ಮಾಡಿದೆ.