ಬಹುಭಾಷಾ ನಟಿ ಮೀನಾ ಅವರು 15ನೇ ವಯಸ್ಸಿನಲ್ಲಿಯೇ ಗರ್ಭಿಣಿಯಾಗಿರುವ ವಿಷಯ ಇದೀಗ ರಿವೀಲ್ ಆಗಿದೆ. ಅಷ್ಟಕ್ಕೂ ಇದೇನಿದು?
ಕನ್ನಡ ಪುಟ್ನಂಜ, ಸ್ವಾತಿ ಮುತ್ತು, ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ನಟಿ ಮೀನಾ ಕಳೆದೊಂದು ವರ್ಷದಿಂದ ಎರಡನೆಯ ಮದ್ವೆಗಾಗಿ ಸುದ್ದಿಯಲ್ಲಿದ್ದಾರೆ. ಇವರು ರಜನೀಕಾಂತ್ ಅವರ ಪುತ್ರಿಯ ಮಾಜಿ ಪತಿ ಧನುಷ್ ಜೊತೆ ಮದ್ವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಪತಿ ವಿದ್ಯಾಸಾಗರ್ ಅವರ ನಿಧನದ ಬಳಿಕ ನಟಿಯ ಹೆಸರು ರಜನೀಕಾಂತ್ ಮಾಜಿ ಅಳಿಯನ ಜೊತೆ ಥಳಕು ಹಾಕಿಕೊಂಡಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಭಾರಿ ಸುದ್ದಿಯಾಗಿತ್ತು. 2004ರಲ್ಲಿ ಧನುಷ್ ಹಾಗೂ ರಜನಿ ಪುತ್ರಿ ಐಶ್ವರ್ಯ ಮದುವೆ ನಡೆದಿತ್ತು. ಇವರದ್ದು ಲವ್ ಮ್ಯಾರೇಜ್. ಆದರೆ 18 ವರ್ಷಗಳ ದಾಂಪತ್ಯ ಜೀವನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬೇರೆಯಾಗುತ್ತಿರುವುದಾಗಿ ಹೇಳಿದ್ದರು. ಇಬ್ಬರು ದೂರಾಗಲು ಕಾರಣ ಏನು ಅನ್ನುವುದು ಅವರು ಬಹಿರಂಗಪಡಿಸಿರಲಿಲ್ಲ. ಆದರೆ ಅವರ ಹೆಸರು ನಂತರ ಮೀನಾ ಜೊತೆ ಕೇಳಿಬಂದಿತ್ತು.
ನಂತರ ನಟಿ ಮೌನ ಮುರಿದಿದ್ದರು. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ನಟಿ, ಎರಡನೆಯ ಮದ್ವೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿಯಿಂದ ನೊಂದುಕೊಂಡಿದ್ದಾರೆ. ನನ್ನ ಪತಿ ವಿದ್ಯಾಸಾಗರ್‌ಗೆ ಶ್ವಾಸಕೋಶದ ಕಸಿ ಮಾಡಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದವು. ವಿದೇಶಕ್ಕೆ ಕರೆದುಕೊಂಡು ಹೋಗಲು ಯೋಚಿಸಿದ್ದೆವು. ಆದರೆ, ನಾನು ಅಲ್ಲಿಗೆ ಹೋದರೂ ಕೆಲವು ಸಮಯ ಕಾಯಲೇಬೇಕಿತ್ತು. ಅಷ್ಟರಲ್ಲೇ ಊಹಿಸಿಕೊಳ್ಳುವುದಕ್ಕೆ ಅಸಾಧ್ಯವಾದದ್ದು ನಡೆದು ಹೋಯ್ತು. ಅವರು ನಿಧನರಾದರು. ಆ ನೋವಿನಿಂದ ನಾನಿನ್ನೂ ಹೊರಬಂದಿರಲಿಲ್ಲ. ಅದರ ಮಧ್ಯೆಯೇ ಧನುಷ್ ಜೊತೆ ನನ್ನ ಹೆಸರು ಥಳಕು ಹಾಕಿಕೊಂಡಿರುವುದು ನೋವಿನ ಸಂಗತಿ ಎಂದಿದ್ದರು.
ರಜನೀಕಾಂತ್ ಮಾಜಿ ಅಳಿಯನ ಜೊತೆ ಮೀನಾ ಮದ್ವೆ? ಮೌನ ಮುರಿದ ನಟಿ ಹೇಳಿದ್ದೇನು?
ಇದೀಗ, ನಟಿ 15ನೇ ವಯಸ್ಸಿಗೇ ಗರ್ಭಿಣಿಯಾಗಿದ್ದರು ಎನ್ನುವ ವಿಷಯದ ಕುರಿತು ಚರ್ಚೆ ನಡೆದಿದೆ. ಮೀನಾ ಅವರ 40ನೇ ಹುಟ್ಟುಹಬ್ಬದಂದು ಆಯೋಜಿಸಲಾಗಿದ್ದ ಮೀನಾ@40 ವಿಶೇಷ ಅಭಿನಂದನಾ ಕಾರ್ಯಕ್ರಮದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಹಿರಿಯ ನಟ ರವಿ ಕಿರಣ್, ಮೀನಾ ಅವರ ಕುರಿತು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು 15ನೇ ವಯಸ್ಸಿನಲ್ಲಿ ಮೀನಾ ಅವರು ಗರ್ಭಿಣಿಯ ಪಾತ್ರ ಮಾಡಿದ್ದರು ಎನ್ನುವುದು. 1991ರಲ್ಲಿ ಕಾಲಿವುಡ್‌ನಲ್ಲಿ ಕಸ್ತೂರಿ ರಾಜ ನಿರ್ದೇಶನದಲ್ಲಿ ಎನ್ ರಾಸವಿನ್ ಮನಸಿಲೇ ಸಿನಿಮಾಕ್ಕೆ ನಾಯಕಿಯ ಹುಡುಕಾಟ ನಡೆದಿತ್ತು. ನಂತರ ಮೀನಾ ಅವರು ಕಣ್ಣಿಗೆ ಬಿದ್ದಿದ್ದರು. ಆದರೆ ಆಕೆಗೆ ಇನ್ನೂ 15 ವರ್ಷ ವಯಸ್ಸಾಗಿತ್ತು. ಆ ಪಾತ್ರ ಎಂದರೆ, ಅದರಲ್ಲಿ ಗರ್ಭಿಣಿಯಾದ ಪಾತ್ರವದು. ಆದರೂ ಮೀನಾ ಮೇಲೆ ಭರವಸೆ ಇಟ್ಟು ಪಾತ್ರ ಮಾಡಿಸಿದ್ದರು. ಅದ್ಭುತ ಅಭಿನಯದ ಮೂಲಕ ಮೀನಾ ಎಲ್ಲರ ಗಮನ ಸೆಳೆದು ಸೂಪರ್ ಹಿಟ್ ಪಟ್ಟಕ್ಕೇರಿದರು. ಇದನ್ನೇ ರವಿಕಿರಣ್ ವೇದಿಕೆ ಮೇಲೆ ಹೇಳಿದರು.
ಇನ್ನು ಮೀನಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು ಹಲವು ದಶಕಗಳಿಂದ ಸಿನಿಮಾದಲ್ಲಿ ಇದ್ದಾರೆ. ಬಾಲ ನಟಿಯಾಗಿ ಪದಾರ್ಪಣೆ ಮಾಡಿರುವ ಮೀನಾ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಮಗಳು ಜನಿಸಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಇದೀಗ ಮಗಳೇ ನನಗೆ ಸರ್ವಸ್ವ ಎಂದಿರುವ ಮೀನಾ, ಈ ರೀತಿಯ ಸುಳ್ಳು ಸುದ್ದಿಯನ್ನು ಹರಡುವ ಮುನ್ನ ನನ್ನ ಮತ್ತು ಮಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಜನರು ನೋಡಬೇಕಿದೆ ಎಂದಿದ್ದಾರೆ.
ಆಗರ್ಭ ಶ್ರೀಮಂತರು ಕ್ಯೂನಲ್ಲಿದ್ದಾಗ ರಾಜ್ ಕುಂದ್ರಾರಲ್ಲಿ ಅಂಥದ್ದೇನು ಕಂಡ್ರು ಶಿಲ್ಪಾ? ಅವರೇ ಹೇಳಿದ್ದಾರೆ ಕೇಳಿ...