
- ಆರ್ ಜೆ ಸೌಜನ್ಯಾ
ಮಗಳಿಗೀಗ ಮೂರೂವರೆ ವರ್ಷ. ಆದರೆ ಈಗಷ್ಟೇ ಮಗಳು ಹುಟ್ಟಿದಂಥಾ ಫೀಲ್. ನಾನು ಪ್ರೆಗ್ನೆಂಟ್ ಆಗಿದ್ದಾಗ ನನ್ನ ಫ್ರೆಂಡ್‌್ಸ, ಕಸಿನ್ಸ್ ಪ್ರೆಗ್ನೆಂಟ್ ಆಗಿದ್ರು. ನಾವೆಲ್ಲ ಹೆಣ್ಣು ಮಗೂನೇ ಬೇಕು ಅಂತ ಹಂಬಲಿಸುತ್ತಾ ಇದ್ದೆವು. ಆದರೆ ಆ ಭಾಗ್ಯ ನನ್ನೊಬ್ಬಳಿಗೇ ಸಿಕ್ಕಿತು. ಅನ್‌ಕಂಡಿಶನಲ್ ಪ್ರೀತಿ ಹಂಚುವ ಮಗಳು ಸಿಕ್ಕಳು.
ಅವಳಿಗಾಗ ಮೂರು ವರ್ಷವೂ ಆಗಿರಲಿಲ್ಲ. ನನ್ನ ಬದುಕಲ್ಲಿ ಏರಿಳಿತಗಳಾಗಿ ಅಪ್‌ಸೆಟ್ ಆಗಿರುತ್ತಿದ್ದೆ. ಮಗಳು ನನ್ನ ಕಂಡು, ‘ಯಾಕೆ ಬೇಜಾರು?’ ಅಂತ ಕೇಳ್ತಿದ್ಲು. ‘ನಂಗ್ಯಾರೂ ಇಲ್ಲ..’ ಅಂತೇನೋ ಅಂದರೆ, ‘ನಿನಗೆ ನಾನಿದ್ದೀನಮ್ಮಾ.. ಟೀ ಕೊಡ್ಲಿಸ್ಲಾ? ಪಾರ್ಕ್ಗೆ ಕರ್ಕೊಂಡು ಹೋಗ್ಲಾ?’ ಅಂತ ಅವಳೂ ಅಳುತ್ತಾ ನನ್ನ ಸಮಾಧಾನ ಮಾಡೋಳು. ನನಗೆ ಟೀ ಇಷ್ಟಅಂತ ಗೊತ್ತು. ಅದಕ್ಕೆ ಬೇಜಾರಾದ್ರೆ ಟೀ ಮಾಡಿ ಕೊಡ್ಲಾ ಅಂತಾಳೆ. ಇಂಥಾ ಪ್ರೀತಿ ಮುಂದೆ ಬೇರೇನು ಬೇಕು ಹೇಳಿ.. ಆದರೆ ಈಗಲೂ ನಾನು ಎರಡನೇ ಮಗು ಮಾಡ್ಕೊಳ್ತೀನಿ ಅಂದರೆ ಕೆಲವರು, ‘ಅದೂ ಹೆಣ್ಣಾದ್ರೆ’ ಅಂತಾರೆ, ಮತ್ತೆ ಕೆಲವರು, ‘ಈ ಸಲ ಗಂಡಾಗ್ಲಿ’ ಅಂತಾರೆ. ನನಗೆ ಸಿಟ್ಟು ಬರುತ್ತೆ. ಇನ್ನೊಂದು ಹೆಣ್ಣು ಮಗು ಆದ್ರೆ ಡಬಲ್ ಖುಷಿ. ಅದನ್ನೇ ಗೃಹಿಸದ ಸಣ್ಣ ಮನಸ್ಸಿನವರು ಹೀಗೆಲ್ಲ ಮಾತಾಡ್ತಾರಲ್ಲಾ ಅಂತ.
ಚಿಕ್ಕವಳಿದ್ದಾಗ ವಿಲನ್ ಅಮ್ಮ, ದೊಡ್ಡವಳಾದ ಮೇಲೆ ಹೀರೋ ಆದ್ರು: ಹರ್ಷಿಕಾ ಪೂಣಚ್ಚ
ಮಗಳಿಗೆ ಇಲ್ಲೀವರೆಗೂ ನಾನು ಮೊಬೈಲ್ ಕೊಟ್ಟಿಲ್ಲ. ಟಿವಿ ಎದುರು ಕೂರಿಸಿಲ್ಲ. ನನ್ನ ಶೋ ಆಗುವಾಗ ನಡುವೆ ಬಂದರೆ ಅವಳ ಹತ್ರನೂ ಮೈಕ್‌ನಲ್ಲಿ ಮಾತಾಡಿಸ್ತೀನಿ. ಅವಳು ನಮ್ಮನೆ ಎದುರು ಕೋಳಿ ಮರಿಗಳ ಜೊತೆ, ಹಸುಗಳ ಜೊತೆ, ಬೀದಿ ನಾಯಿಗಳ ಜೊತೆಗೆ ಆಟ ಆಡ್ತಾಳೆ. ಬೀದಿ ಬದಿ ಮರಳಲ್ಲಿ, ಜಲ್ಲಿಯಲ್ಲಿ ಆಟ ಆಡ್ತಾಳೆ. ಹೀಗೆ ಮಕ್ಕಳನ್ನ ಹೊರಗಿನ ಪ್ರಪಂಚಕ್ಕೆ ಎಕ್ಸ್‌ಪೋಸ್ ಮಾಡಬೇಕು. ಮಕ್ಕಳ ಇಮ್ಯೂನಿಟಿ ಬೆಳೆಯೋದೇ ಹೀಗೆ ಅಂತ ನನ್ನ ನಂಬಿಕೆ. ಗ್ಯಾಜೆಟ್ ಜಾಸ್ತಿ ಬಳಸದ ಕಾರಣ ನನಗೂ, ಗಂಡನಿಗೂ ಮಗಳ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯೋದು ಸಾಧ್ಯವಾಗ್ತಿದೆ. ಅವಳಿಂದ ಬದುಕು ಸುಂದರವಾಗಿದೆ.
....
ಎಕ್ಸಟ್ರಾ ಮಾಹಿತಿ:
ತಾಯಂದಿರ ದಿನಕ್ಕಾಗಿ ಮನಮುಟ್ಟುವ ಕೋಟ್ಸ್ ಗಳು, ಶುಭ ಸಂದೇಶಗಳು!
- ಆತ್ಮೀಯ ಅಮ್ಮ, ಒಮ್ಮೊಮ್ಮೆ ನಿಮ್ಮನ್ನು ಹುಚ್ಚರನ್ನಾಗಿ ಮಾಡಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆ ಸ್ವೀಕಾರ ಮಾಡಿ. ನಿಮ್ಮನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಿಲ್ಲ. ನಿಮ್ಮ ಪ್ರೀತಿ ಹಾಗೂ ಬೆಂಬಲವಿಲ್ಲದೆ ನನ್ನ ಜೀವನವೇ ಇಲ್ಲ. ನಿಮಗೆ ತಾನಂದಿರ ದಿನದ ಶುಭಾಶಯಗಳು!
ಅಮ್ಮ ಭಾವನೆ ಮಾತ್ರವಲ್ಲ, ದೊಡ್ಡ ಶಕ್ತಿ: ತಾರಾ
- ಅಮ್ಮ, ನಿನಗೆ ತಾಯಂದಿರ ದಿನದ ಶುಭಾಶಯಗಳು. ಈ ಜಗತ್ತಿನಲ್ಲಿ ನೀವು ಎಲ್ಲಾ ಪ್ರೀತಿ ಮತ್ತು ಗಮನಕ್ಕೆ ಅರ್ಹರು. ಅಮ್ಮಾ, ನಿನ್ನ ಉಪಸ್ಥಿತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ಭಗವಂತನಿಗೆ ಶಾಶ್ವತವಾಗಿ ಕೃತಜ್ಞನಾಗಿದ್ದೇನೆ.
- ಅಮ್ಮಾ ನಾನು ನಿಮ್ಮ ಪ್ರತಿರೂಪವಾಗಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನನಗೆ ಸ್ಫೂರ್ತಿಯ ಮೂಲವಾಗಿರುವುದಕ್ಕಾಗಿ ಧನ್ಯವಾದಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.