"It may be possible to gild pure gold, but who can make his mother more beautiful?" - Mahatma Gandi
- ಹರ್ಷಿಕಾ ಪೂಣಚ್ಚ
ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಪ್ಪ ಹೀರೋ, ಆಗಿದ್ದರೆ ಗಂಡು ಮಕ್ಕಳಿಗೆ ಅಮ್ಮನ ಪ್ರೀತಿ ಹೆಚ್ಚು. ನನಗೂ ಅದೇ ರೀತಿ. ಅಪ್ಪನ ಜತೆಗೇ ಹೆಚ್ಚು ಸ್ನೇಹ. ಅಮ್ಮ ನನಗೆ ವಿಲನ್! ಅಮ್ಮ ತುಂಬಾ ಕಠಿಣವಾಗಿದ್ದರು. ಒಂದು ಸಣ್ಣ ತಪ್ಪು ಮಾಡಿದರೂ ಕೋಲು ತೆಗೆದುಕೊಂಡು ಬಾರಿಸುತ್ತಿದ್ದರು. ಚಿಕ್ಕವಳಿದ್ದಾಗ ವಿಲನ್ ಆಗಿ ಕಂಡಿದ್ದ ಅಮ್ಮ, ಈಗ ಹೀರೋ! ನನ್ನ ನಾನು ಈಗ ನೋಡಿಕೊಂಡಾಗ ಅಮ್ಮನ ಅವತ್ತಿನ ಕಾಳಜಿ, ಕಠಿಣ ನಿರ್ಧಾರ, ಭಯ ನನ್ನ ಇವತ್ತಿನ ಬೆಳವಣಿಗೆಗೆ ಕಾರಣ. ಎಲ್ಲರಿಗೂ ಅಷ್ಟೇ, ಜಗತ್ತು ಅರ್ಥ ಆಗೋಕ್ಕೆ ಶುರುವಾದ ಮೇಲೆ ತಾಯಿ ಹೀರೋ ಆಗ್ತಾಳೆ.
ನನಗೆ ನನ್ನ ತಾಯಿ ಫ್ರೆಂಡ್ ಆಗಿದ್ದು ನನ್ನ ತಂದೆ ತೀರಿಕೊಂಡ ಮೇಲೆ. ಯಾಕೆಂದರೆ ಒಬ್ಬಳೇ ಮಗಳು. ಎಲ್ಲವನ್ನು ಅಪ್ಪನ ಜತೆ ಹೇಳಿಕೊಳ್ಳುತ್ತಿದ್ದೆ. ಅಪ್ಪ ಹೋದ ಮೇಲೆ ತಾಯಿಯೇ ಅಪ್ಪನಂತೆ ನನಗೆ ಫ್ರೆಂಡ್ ಆದರು. ಈಗ ಒಂದೇ ಒಂದು ವಿವಾದ ಇಲ್ಲದೆ, ಕೆಟ್ಟಹೆಸರು ತಂದುಕೊಳ್ಳದೆ ಚಿತ್ರರಂಗದಲ್ಲಿ ಇದ್ದೇನೆ ಎಂದರೆ ಅದಕ್ಕೆ ಅಮ್ಮ ನನ್ನ ವಿಚಾರದಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು, ಅವರ ಮಾರ್ಗದರ್ಶನವೇ ಕಾರಣ.
ಹೈಸ್ಕೂಲ್‌ನಲ್ಲಿ ನಡೆದ ಒಂದು ಘಟನೆ ನನಗೆ ಈಗಲೂ ನೆನಪಿದೆ. ಒಬ್ಬ ಹುಡುಗ ನನಗೆ ಚಾಕ್‌ಲೇಟ್ ಕೊಟ್ಟಿದ್ದ. ಅದನ್ನು ನಾನು ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದೆ. ಅದು ಗೊತ್ತಾಗಿ ನನಗೆ ಯಾಕೆ ಹೇಳಿಲ್ಲ ಅಂತ ಅಮ್ಮ ಕೋಪ ಮಾಡಿಕೊಂಡಿದ್ದರು. ಬೇರೆ ಯಾರೋ ಹೇಳುವ ಮುನ್ನವೇ ನಾನೇ ಹೇಳಬೇಕು ಎನ್ನುವುದರ ಹಿಂದಿನ ಕಾಳಜಿ, ಕಳವಳ ಗೊತ್ತಾಗುವ ಹೊತ್ತಿಗೆ ಅಮ್ಮ ನನಗೆ ಹೀರೋ ಆದರು.
ಅಮ್ಮ ಭಾವನೆ ಮಾತ್ರವಲ್ಲ, ದೊಡ್ಡ ಶಕ್ತಿ: ತಾರಾ
ಬಾಲಿವುಡ್‌ನಲ್ಲಿ ನಾನು ಒಂದು ಸಿನಿಮಾ ಮಾಡಬೇಕಿತ್ತು. ಫೋಟೋಶೂಟ್ ಕೂಡ ಆಯಿತು. ಮಾತುಕತೆ ಕೂಡ ಮುಗಿದಿತ್ತು. ಆ ಮೇಲೆ ಆ ಸಿನಿಮಾ ಕಡೆಯಿಂದ ಬೇರೆ ರೀತಿ ಒತ್ತಾಯಗಳು ಬಂದವು. ‘ಕಮಿಟ್‌ಮೆಂಟ್’ ಅನ್ನೋ ಪದ ಕೇಳಿ ಸಿಟ್ಟು ಬಂತು. ಸಿನಿಮಾ ರಿಜೆಕ್ಟ್ ಮಾಡಿದೆ. ನಾನು ಅಂಥ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಆಗಿದ್ದು ಅಮ್ಮನ ಸಲಹೆ. ಒಂದು ವೇಳೆ ಆಕೆ ನನಗೆ ಸೂಕ್ತ ರೀತಿಯಲ್ಲಿ ಗೈಡ್ ಮಾಡದೆ ಹೋಗಿದ್ದರೆ!? ಅಮ್ಮನ ಮೇಲಿನ ಆಗಿನ ಭಯ, ಈಗ ರೆಸ್ಪೆಕ್ಟ್ ಆಗಿ ಬದಲಾಗಿದೆ. ಅದು ಅಮ್ಮನ ಪ್ರೀತಿಗೆ ಇರುವ ಶಕ್ತಿ.
....
ಎಕ್ಸಟ್ರಾ ಮಾಹಿತಿ:
ತಾಯಂದಿರ ದಿನಕ್ಕಾಗಿ ಮನಮುಟ್ಟುವ ಕೋಟ್ಸ್ ಗಳು, ಶುಭ ಸಂದೇಶಗಳು!
- ಆತ್ಮೀಯ ಅಮ್ಮ, ಒಮ್ಮೊಮ್ಮೆ ನಿಮ್ಮನ್ನು ಹುಚ್ಚರನ್ನಾಗಿ ಮಾಡಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆ ಸ್ವೀಕಾರ ಮಾಡಿ. ನಿಮ್ಮನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಿಲ್ಲ. ನಿಮ್ಮ ಪ್ರೀತಿ ಹಾಗೂ ಬೆಂಬಲವಿಲ್ಲದೆ ನನ್ನ ಜೀವನವೇ ಇಲ್ಲ. ನಿಮಗೆ ತಾನಂದಿರ ದಿನದ ಶುಭಾಶಯಗಳು!
ಶೋ ಮಸ್ಟ್ ಗೋ ಆನ್ ಅನ್ನುತ್ತಿದ್ದ ಅಮ್ಮ: ಸುಧಾ ಬೆಳವಾಡಿ
- ಅಮ್ಮ, ನಿನಗೆ ತಾಯಂದಿರ ದಿನದ ಶುಭಾಶಯಗಳು. ಈ ಜಗತ್ತಿನಲ್ಲಿ ನೀವು ಎಲ್ಲಾ ಪ್ರೀತಿ ಮತ್ತು ಗಮನಕ್ಕೆ ಅರ್ಹರು. ಅಮ್ಮಾ, ನಿನ್ನ ಉಪಸ್ಥಿತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ಭಗವಂತನಿಗೆ ಶಾಶ್ವತವಾಗಿ ಕೃತಜ್ಞನಾಗಿದ್ದೇನೆ.
- ಅಮ್ಮಾ ನಾನು ನಿಮ್ಮ ಪ್ರತಿರೂಪವಾಗಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನನಗೆ ಸ್ಫೂರ್ತಿಯ ಮೂಲವಾಗಿರುವುದಕ್ಕಾಗಿ ಧನ್ಯವಾದಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು.