"Happiness is seeing your mother smile." - Unknown
- ತಾರಾ
ಪ್ರೀತಿ, ಮಮತೆ, ನಂಬಿಕೆ, ವಾತ್ಸಲ್ಯ ಹೀಗೆ ಯಾವುದೇ ಭಾವನೆ ಇದ್ದರೂ ಅದರ ಹಿಂದಿನ ಶಕ್ತಿ ಅಮ್ಮ. ನನ್ನ ತಾಯಿ ಇಲ್ಲದೆ ನಾನು ಚಿತ್ರೀಕರಣಕ್ಕೆ ಹೋಗಿದ್ದು ನೆನಪೇ ಇಲ್ಲ. ಚಿತ್ರೀಕರಣ ಅಂತಲ್ಲ, ಎಲ್ಲೇ ಹೋದರೂ ಅಮ್ಮ ಜತೆಗೇ ಇರುತ್ತಿದ್ದರು. ನನಗೇ ಗೊತ್ತಿಲ್ಲದಂತೆ ನಾನು ನನ್ನ ತಾಯಿಯನ್ನು ಆ ಮಟ್ಟಿಗೆ ಅವಲಂಬಿಸಿದ್ದೆ. ಅವಳು ಇಲ್ಲದ ದಿನಗಳು ನೆನಪಿಲ್ಲ. ಆದರೆ, ಮೊಟ್ಟಮೊದಲ ಬಾರಿಗೆ ದೈಹಿಕವಾಗಿ ಅಮ್ಮನಿಲ್ಲದೆ ಅಮ್ಮಂದಿರ ದಿನದ ಬಗ್ಗೆ ಮಾತನಾಡುತ್ತಿದ್ದೇನೆ. ನನ್ನ ತಾಯಿ ನನ್ನ ಬಿಟ್ಟು ಹೋದ 12ನೇ ದಿನಕ್ಕೆ ಅಮ್ಮಂದಿರ ದಿನ ಬರುತ್ತಿದೆ. ಏನು ಹೇಳೋದು ಗೊತ್ತಾಗುತ್ತಿಲ್ಲ.
ಮೊದಮೊದಲು ಅಮ್ಮನ ಪ್ರೀತಿ ಸಿಕ್ಕಿದ್ದು ನನ್ನ ದೊಡ್ಡಮ್ಮನಿಂದ. ನನ್ನಿಂದ ಯಾವ ಸೇವೆಯನ್ನೂ ಮಾಡಿಸಿಕೊಳ್ಳದೆ ಹೋದರು. ನನ್ನ ಜತೆಗೆ ಕೊನೆ ತನಕ ಅಮ್ಮನಾಗಿ ಇದ್ದು, ಅಮ್ಮನಂತೆಯೇ ಹೋದರು. ನನಗೆ ರಾತ್ರಿ ನಿದ್ದೆ ಬರುತ್ತಿಲ್ಲ, ಮನಸ್ಸಿಗೆ ಬೇಸರ ಆಗುತ್ತಿದೆ ಎಂದರೆ ಸೀದಾ ಹೋಗಿ ಅಮ್ಮನ ಪಕ್ಕ ಮಲಗುತ್ತಿದ್ದೆ. ಮದುವೆ ಆಗಿ, ಮಗು ಆದ ಮೇಲೂ ಹೀಗೆ ಅಮ್ಮನ ಪಕ್ಕ ಮಲಗುತ್ತಿದ್ದುದು ನೆನಪಿಸಿಕೊಂಡರೆ ನನಗೆ ನಗು ಬರುತ್ತದೆ. ಆದರೆ, ತಾಯಿ ಮತ್ತು ಮಕ್ಕಳ ಸಂಬಂಧಕ್ಕೆ ವಯಸ್ಸಿನ ಅಂತರ ಇರಲ್ಲ.
‘ನಮ್ಮಮ್ಮ ಸೂಪರ್ ಸ್ಟಾರ್’, ‘ರಾಜ ರಾಣಿ’ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದಾಗ ಎಲ್ಲರು ನನ್ನ ತಾರಮ್ಮ ಅಂತಲೇ ಕರೆಯುತ್ತಿದ್ದರು. ನನ್ನ ತಂದೆ ನನ್ನನ್ನು ಅಮ್ಮ ಅಂತಲೇ ಕರೆಯುತ್ತಿದ್ದರು. ಗಂಡನೂ ಅಮ್ಮ ಅಂತಲೇ ಕರೆಯುತ್ತಾರೆ. ಈಗ ನನ್ನ ಮಗ ಅಮ್ಮ ಅಂತಾನೆ. ಹೀಗೆ ನಮ್ಮ ಸುತ್ತ ಎಲ್ಲರು ಅಮ್ಮ ಎಂದು ಕರೆಯುತ್ತಿದ್ದಾಗ ಮನಸ್ಸಿನಲ್ಲಿ ಆಗುವ ಸಂತೋಷ ಹೇಳಿಕೊಳ್ಳುವುದಕ್ಕೆ ಆಗಲ್ಲ. ನಾನೂ ಕೂಡ ನನ್ನ ತಾಯಿಯನ್ನು ಹೀಗೆ ಅಮ್ಮ ಅಂತ ಕರೆಯುತ್ತಿದ್ದಾಗ ಆಕೆ ನನ್ನಂತೆಯೇ ಎಷ್ಟುಸಂಭ್ರಮಿಸಿರಬಹುದಲ್ಲವೇ?
ಬಾಗಿಲು ಹಾಕ್ಕೊಂದು ಕೂತಿರ್ತಿದ್ದೆ, ಅಮ್ಮ ಬಗ್ಗಿ ನೋಡುತ್ತಿದ್ದರು: ಸೀತಾರಾಮ್
ತಾಯಿ ಸ್ಥಾನದಲ್ಲಿ ನಿಲ್ಲಿಸಿ ಕರೆಯುವುದು ದೇವರಿಂದ ಪಡೆದುಕೊಂಡು ಬಂದ ಪುಣ್ಯ. ನಾನು ಎಲ್ಲರನ್ನು ಮೆಚ್ಚಿಕೊಳ್ಳುತ್ತೇನೆ, ಹೊಗಳುತ್ತೇನೆ ಎಂದರೆ ಅದು ನನ್ನ ತಾಯಿ ಅವರಿಂದ ಕಲಿತಿದ್ದು. ನನ್ನ ತಾಯಿ ಇಲ್ಲ ಅಂತ ನಾನು ಅಂದುಕೊಳ್ಳಲಲ್ಲ. ನನ್ನ ಮಗ, ನನ್ನ ಕೆಲಸ, ನನ್ನ ಗಂಡನಲ್ಲಿ ನಾನು ತಾಯಿಯನ್ನು ನೋಡುತ್ತಿದ್ದೇನೆ. ಎಲ್ಲರಲ್ಲೂ ತಾಯಿಯನ್ನು ನೋಡುವ ಗುಣವೂ ಸಹ ಬಂದಿದ್ದು ನನ್ನ ಅಮ್ಮನಿಂದ. ಪ್ರತಿ ತಾಯಿಲ್ಲೂ ಒಬ್ಬ ಪುರುಷ ಇರುತ್ತಾನೆ. ಪ್ರತಿ ಪುರುಷನಲ್ಲೂ ಒಬ್ಬ ತಾಯಿ ಇರುತ್ತಾರೆ. ಯಾಕೆಂದರೆ ತಾಯಿ ಅನ್ನೋದೇ ಒಂದು ಶಕ್ತಿ.
...
ಎಕ್ಸಟ್ರಾ ಮಾಹಿತಿ:
ತಾಯಂದಿರ ದಿನಕ್ಕಾಗಿ ಮನಮುಟ್ಟುವ ಕೋಟ್ಸ್ ಗಳು, ಶುಭ ಸಂದೇಶಗಳು!
- ಆತ್ಮೀಯ ಅಮ್ಮ, ಒಮ್ಮೊಮ್ಮೆ ನಿಮ್ಮನ್ನು ಹುಚ್ಚರನ್ನಾಗಿ ಮಾಡಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆ ಸ್ವೀಕಾರ ಮಾಡಿ. ನಿಮ್ಮನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಿಲ್ಲ. ನಿಮ್ಮ ಪ್ರೀತಿ ಹಾಗೂ ಬೆಂಬಲವಿಲ್ಲದೆ ನನ್ನ ಜೀವನವೇ ಇಲ್ಲ. ನಿಮಗೆ ತಾನಂದಿರ ದಿನದ ಶುಭಾಶಯಗಳು!
ಶೋ ಮಸ್ಟ್ ಗೋ ಆನ್ ಅನ್ನುತ್ತಿದ್ದ ಅಮ್ಮ: ಸುಧಾ ಬೆಳವಾಡಿ
- ಅಮ್ಮ, ನಿನಗೆ ತಾಯಂದಿರ ದಿನದ ಶುಭಾಶಯಗಳು. ಈ ಜಗತ್ತಿನಲ್ಲಿ ನೀವು ಎಲ್ಲಾ ಪ್ರೀತಿ ಮತ್ತು ಗಮನಕ್ಕೆ ಅರ್ಹರು. ಅಮ್ಮಾ, ನಿನ್ನ ಉಪಸ್ಥಿತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ಭಗವಂತನಿಗೆ ಶಾಶ್ವತವಾಗಿ ಕೃತಜ್ಞನಾಗಿದ್ದೇನೆ.
- ಅಮ್ಮಾ ನಾನು ನಿಮ್ಮ ಪ್ರತಿರೂಪವಾಗಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನನಗೆ ಸ್ಫೂರ್ತಿಯ ಮೂಲವಾಗಿರುವುದಕ್ಕಾಗಿ ಧನ್ಯವಾದಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು.