ಧ್ರುವ ಸರ್ಜಾ ಸಿನಿಮಾ ರಿಲೀಸ್‌ಗೆ ಸಮಸ್ಯೆ ಆಗಬಾರದು ಎಂದು 2 ಸಲವೂ ಸಹಾಯ ಮಾಡಿದ ಅಪ್ಪು, ಶಿವಣ್ಣ; ಕೊನೆಗೂ ಸತ್ಯ ಬಯಲು

By Vaishnavi ChandrashekarFirst Published Oct 13, 2024, 4:14 PM IST
Highlights

ಯಾರಿಗೂ ಗೊತ್ತಿರದ ದೊಡ್ಡಮನೆ ಸಹಾಯದ ವಿಚಾರವನ್ನು ರಿವೀಲ್ ಮಾಡಿದ ಧ್ರುವ ಸರ್ಜಾ. ಎರಡು ಸಲವೂ ಸಾಥ್‌ ಕೊಟ್ಟ ಅಪ್ಪು, ಶಿವಣ್ಣ....
 

ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಿರುತೆರೆ ಕಾರ್ಯಕ್ರಮದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿರುವ ಧ್ರುವ ಸರ್ಜಾ ಡಿಕೆಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ ಪುನೀತ್ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. 

ಧ್ರುವ ಸಿನಿಮಾ ಗೆಲ್ಲಬೇಕು:

Latest Videos

'ಧ್ರುವ ಸರ್ಜಾ ಹಾರ್ಡ್‌ ವರ್ಕರ್ ಯಾವುದೇ ಸಿನಿಮಾ ಮಾಡಿದ್ದರೂ ಬಹಳ ಟೈಂ ತೆಗೆದುಕೊಂಡು ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ. ಧ್ರುವ ಸರ್ಜಾ ನನಗೆ ಫ್ಯಾಮಿಲಿ ಇದ್ದ ಹಾಗೆ...ಶಕ್ತಿ ಪ್ರಸಾದ್ ಅಂಗಲ್, ಕಿಶೋರ್, ಅರ್ಜುನ್, ಧ್ರುವ ಮತ್ತು ಚಿರು....ನಾವೆಲ್ಲರೂ ಜೊತೆಗೆ ಬೆಳೆದವರು. ನನಗೆ ಏನು ಖುಷಿ ಅಂದ್ರೆ ಯಂಗ್‌ಸ್ಟರ್ಸ್‌ ತಂಡದಲ್ಲಿ ಅಪ್ಪು...ಧ್ರುವ ಎಲ್ಲರೂ ಬೆಸ್ಟ್‌ ಡ್ಯಾನ್ಸರ್ಸ್‌. ಯಶ್, ಧ್ರುವ ಮತ್ತು ಅಪ್ಪು...ಇವರನ್ನು ನೋಡಿ ನಾವು ಅಂದುಕೊಳ್ಳುತ್ತಿರುವುದು ಹಾಗೆ ಕನ್ನಡ ಇಂಡಸ್ಟ್ರಿಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಪ್ಪು ಇಲ್ಲ ಅಂತ ಅಂದುಕೊಳ್ಳುವುದಿಲ್ಲ ಅಪ್ಪುನ ಧ್ರುವ ಸರ್ಜಾನಲ್ಲಿ ನೋಡುತ್ತಿದ್ದೀನಿ. ಕನ್ನಡ ಸಿನಿಮಾ ಗೆಲ್ಲಬೇಕು ಯಾರದಾದರೆ ಏನು? ನಮ್ಮ ಭಾಷೆ ಗೆಲ್ಲಬೇಕು ನಮ್ಮ ತನ ಗೆಲ್ಲಬೇಕು. ನಮ್ಮತನ ಯಾರ ಮೂಲಕ ಗೆದ್ದರೂ ಅದು ನಮ್ಮದೆ' ಎಂದು ಶಿವಣ್ಣ ಮಾತನಾಡಿದ್ದಾರೆ.

ನಾನು ಅಪ್ಪು ಮದುವೆಯಾದ ದಿನವೇ ಅತ್ತೆ ಕೆಲಸ ನಿಲ್ಲಿಸಿಬಿಟ್ಟರು: ಅಶ್ವಿನಿ ಪುನೀತ್

ಅಪ್ಪು ಮಾಡಿದ ಮೊದಲ ಸಹಾಯ:

'ನಾನು ಎರಡು ಘಟನೆಗಳನ್ನು ಹೇಳುತ್ತೀನಿ. ನನ್ನ ಭರ್ಜರಿ ಸಿನಿಮಾ ಸುಮಾರು 97 ದಿನಗಳನ್ನು ಮುಟ್ಟಿತ್ತು, ಸಿನಿಮಾ ನರ್ತಕಿ ಚಿತ್ರಮಂದಿರದಲ್ಲಿ ಇತ್ತು. 98ನೇ ದಿನಕ್ಕೆ ಕಾಲಿಡುವ ಸಮಯದಲ್ಲಿ ಸಿನಿಮಾ ತೆಗೆಯಬೇಕು ಅನ್ನೋ ಮಾತು ಬಂತು ಯಾಕೆ ಅಂದ್ರೆ ಪುನೀತ್ ರಾಜ್‌ಕುಮಾರ್ ಸರ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದು. ಅಂಜನಿಪುತ್ರ ಸಿನಿಮಾ ತಂಡದ ಪ್ರತಿಯೊಬ್ಬರಿಗೂ ಕರೆ ಮಾಡಿದೆ ಎಲ್ಲರೂ ಕನ್ಫರ್ಮ್ ಆಗಿದೆ ಎಂದುಬಿಟ್ಟರೆ, ಅಯ್ಯೋ ಅಂದುಕೊಂಡು ತಕ್ಷಣವೇ ಪುನೀತ್ ಸರ್‌ಗೆ ಕರೆ ಮಾಡಿದೆ. ಸರ್ ನಿಮ್ಮ ಸಿನಿಮಾ ರಿಲೀಸ್‌ ಏನಾದರೂ ಒಂದೆರಡು ದಿನ ಮುಂದೆ ಮಾಡಲು ಆಗುತ್ತಾ ಏಕೆಂದರೆ ಅಷ್ಟರಲ್ಲಿ ಭರ್ಜರಿ 100 ದಿನ ಪೂರೈಸುತ್ತದೆ ಎಂದು ಮನವಿ ಮಾಡಿಕೊಂಡೆ. ಇಲ್ಲ ಧ್ರುವ ಪ್ರಡ್ಯೂಸರ್‌ಗೆ ತುಂಬಾ ಕಮಿಟ್ಮೆಂಟ್ ಇದೆ ಆಮೇಲೆ ಇಂಟ್ರೆಸ್ಟ್‌ ಏನ್ ಏನೋ ಇದೆ ಆಗಲ್ಲ...ನೋಡೋಣ ಎಂದು ಪುನೀತ್ ಸರ್ ಕಾಲ ಕಟ್ ಮಾಡಿದ್ದರು. ಎರಡು ಮೂರು ಗಂಟೆಗಳ ನಂತರ ನನಗೆ ಕರೆ ಮಾಡಿದ ಪುನೀತ್ ಸರ್ 'ನೀನು ನನ್ನ ಫ್ಯಾಮಿಲಿ ನಿಮ್ಮ ತಾತನ ಜೊತೆ ಎಲ್ಲ ಸಿನಿಮಾ ಮಾಡಿದ್ದೀನಿ ....ಹೀಗಾಗಿ ನಾನು ಏನು ನಿರ್ಧಾರ ಮಾಡಿದ್ದಿನಿ ಅಂದ್ರೆ ಪಕ್ಕದಲ್ಲಿ ಇರುವ ತ್ರಿವೇಣಿ ಥಿಯೇಟರ್‌ಗೆ ಹೋಗ್ತೀನಿ' ಎಂದರು. ಅದಾದ ಮೇಲಿ ತಿಳಿಯಿತ್ತು ಪುನೀತ್ ಸರ್ ಫಸ್ಟ್‌ ಟೈಂ ನರ್ತಕಿ ಅಥವಾ ಸಂತೋಷ್ ಥಿಯೇಟರ್‌ ಬಿಟ್ಟ ತ್ರಿವೇಣಿಯಲ್ಲಿ ರಿಲೀಸ್ ಮಾಡಿಸುತ್ತಿರುವುದು ಎಂದು. ಒಳ್ಳೆಯ ಉದ್ದೇಶದಿಂದ ಬದಲಾಯಿಸಿಕೊಂಡರು' ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ತಂದೆ ರೀತಿ ಕೋಪ, ತಾಯಿ ರೀತಿ ಬಾಯಿ; ಮೂರು ದಿನದ ಮಗುವನ್ನು ವರ್ಣಿಸಿದ ಹರ್ಷಿಕಾ-ಭುವನ್!

ಮಾರ್ಟಿನ್ ರಿಲೀಸ್‌ಗೆ ಶಿವಣ್ಣ ಸಪೋರ್ಟ್:

'ಎರಡನೇ ಘಟನೆ ಏನೆಂದರೆ...ಭೈರತಿರಣಗಲ್ ಸಿನಿಮಾ ಅಕ್ಟೋಬರ್ ರಿಲೀಸ್‌ಗೆ ಎಂದು ಘೋಷಣೆ ಮಾಡಿದ್ದರು. ಹುಡುಗರು ನನಗೆ ಫೋನ್ ಮಾಡಿ ದಿನಾಂಕ ಅನೌನ್ಸ್ ಮಾಡುತ್ತಾರೆ ಎಂದರು...ಅಯ್ಯೋ ಮತ್ತೆ ಏನು ಮಾಡುವುದು? ಥಿಯೇಟರ್‌ ಸಮಸ್ಯೆ ಆಗತ್ತದೆ ಎಂದು ನೇರವಾಗಿ ಶಿವಣ್ಣನಿಗೆ ಕರೆ ಮಾಡಿದೆ. ಫೋನ್ ಮಾಡಿದ ತಕ್ಷಣ ಹೇಳಮ್ಮಾ ಅಂದ್ರು...ಅಣ್ಣ ನೀವು ಸಿನಿಮಾ ರಿಲೀಸ್ ಮಾಡುತ್ತಿದ್ದೀರಾ? ನೀವು ರಿಲೀಸ್ ಮಾಡಿದರೆ ನಮಗೆ ಥಿಯೇಟರ್ ಸಮಸ್ಯೆ ಆಗುತ್ತದೆ ಅಂದೆ. ಅದಿಕ್ಕೆ ಶಿವಣ್ಣ ಸರಿ ನಾನು ಫೋನ್ ಮಾಡ್ತೀನಿ ಅಂದ್ರು..ಒಂದು ದಿನ ಕಳೆದರೂ ಶಿವಣ್ಣ ಕರೆ ಮಾಡಲಿಲ್ಲ..ಸರಿ ನಾನೇ ಕರೆ ಮಾಡಿ ಕೇಳೋಣ ಸಂಜೆ ಅಂದುಕೊಂಡೆ..ಕರೆಕ್ಟ್ ಆಗಿ 5 ಗಂಟೆಗೆ ಕರೆ ಮಾಡಿದರು. 'ನೀನು ನನ್ನ ಫ್ಯಾಮಿಲಿ ಧ್ರುವ ಹೀಗಾಗಿ ನನ್ನ ಸಿನಿಮಾವನ್ನು ಒಂದು ತಿಂಗಳು ಮುಂದೆ ಹಾಕುತ್ತೀನಿ...ಮಾರ್ಟಿನ್ ಸಿನಿಮಾ ಚೆನ್ನಾಗಿ ನಡೆಯಬೇಕು..ಅಕ್ಕನೂ ಮಾತನಾಡಿದ್ದರೂ ಅಣ್ಣನೂ ಮಾತನಾಡಿದರು. ಇಂಡಸ್ಟ್ರಿಯನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗುತ್ತೀವಿ ಎಂದು ಶಿವಣ್ಣ ಹೇಳಿದ್ದರು ಆದರೆ ನಿಜಕ್ಕೂ ಈಗಾಗಲೇ ಅಣ್ಣಾವ್ರು ಮುಂದೆ ಅಲ್ಲ ಮೇಲೆ ತೆಗೆದುಕೊಂಡು ಹೋಗಿದ್ದಾರೆ...ಅದನ್ನು ಪಾಲಿಸಿಕೊಂಡು ಹೋದರೆ ಸಾಕು' ಎಂದಿದ್ದಾರೆ ಧ್ರುವ ಸರ್ಜಾ. 

 

click me!