Sandalwood
ಪುನೀತ್ ರಾಜ್‌ಕುಮಾರ್ ಮತ್ತು ನಾನು ಮದುವೆಯಾದ ದಿನವೇ ನನ್ನ ಅತ್ತೆ, ಪಾರ್ವತಮ್ಮ ರಾಜ್‌ಕುಮಾರ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ರಿಟೈರ್ಮೆಂಟ್ ಪಡಯುವ ಮುನ್ನ ಮಗ ಸೆಟಲ್ ಆಗುವುದನ್ನು ನೋಡಬೇಕು ಅನ್ನೋದು ಅವರ ಆಸೆ.
ಹೀಗಾಗಿ ಅತ್ತೆ ಹೆಚ್ಚಾಗಿ ಕೆಲಸ ಮಾಡಿರುವುದನ್ನು ನಾನು ನೋಡಿಲ್ಲ ಆದರೆ ಅಪ್ಪು ಹೇಳಿರುವ ಮಾತುಗಳನ್ನು ಕೇಳಿದ್ದೀನಿ. ಸಿನಿಮಾ ನಮ್ಮ ಕುಟುಂಬ ಇದ್ದಂತೆ ಎಂದು ಅತ್ತೆ ಮಾತನಾಡುತ್ತಿದ್ದರು ಎಂದು ಕೇಳಿದ್ದೀನಿ.
ಬರಹಗಾರರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರು ಒಟ್ಟಿಗೆ ಸೇರಿಕೊಂಡು ಸಿನಿಮಾ ಮಾಡುತ್ತಿದ್ದರು ಕೊನೆಯವರೆಗೂ ಜೊತೆ ನಿಲ್ಲುತ್ತಿದ್ದರು ಎಂದು ಅತ್ತೆ ಹೇಳುತ್ತಿದ್ದರು.
ಅತ್ತೆ ಹೆಚ್ಚಾಗಿ ಪುಸ್ತಕಗಳನ್ನು ಓಡುತ್ತಿದ್ದರು, ತಮ್ಮ ಗಟ್ ಫೀಲಿಂಗ್‌ನಲ್ಲಿ ಯಾವುದನ್ನು ಸಿನಿಮಾ ಮಾಡಿದರೆ ಒಳ್ಳೆದು ಯಾವುದನ್ನು ಮಾಡಬಾರದು ಎಂದು ನಿರ್ಧರಿಸುತ್ತಿದ್ದರು.
ಸುಮಾರು 95% ಸಿನಿಮಾಗಳ ಹೆಚ್ಚಾಗಿ ಫ್ಯಾಮಿಲಿ ಬೇಸ್ ಕಥೆ ಹೊಂದಿದ್ದು, ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ನೋಡ ಬಹುದಿತ್ತು. ಅಷ್ಟೂ ಸಿನಿಮಾಗಳು ಸೂಪರ್ ಹಿಟ್ ಪ್ರದರ್ಶನಗಳನ್ನು ಕಂಡಿದೆ.
ನನ್ನ ಅತ್ತೆ ಪಾರ್ವತಮ್ಮ ರಾಜ್‌ಕುಮಾರ್ ಮಹಿಳಾ ಪ್ರಡ್ಯೂಸರ್ ಆಗಿದ್ದು ದೇಶದಲ್ಲೇ ಯಶಸ್ವಿಯಾಗಿ ಬೆಳೆದವರಲ್ಲಿ ಅವರು ಒಬ್ಬರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೀನಿ.
ಅಪ್ಪು ಅಸೆ ಕಂಡಂತೆ ಅಶ್ವಿನಿ ಕೂಡ ಈ ನಿರ್ಮಾಪಕಿಯಾಗಿದ್ದಾರೆ. ಅಪ್ಪು ಆಯ್ಕೆ ಮಾಡಿದ ಕಥೆಗಳನ್ನು ನಿರ್ಮಾಣ ಮಾಡಿ ರಿಲೀಸ್ ಮಾಡಿದ್ದರು. ಚಿತ್ರಗಳು ಯಶಸ್ಸು ಕಂಡಿರುವುದಕ್ಕೆ ಖುಷಿ ವ್ಯಕ್ತ ಪಡಿಸಿದ್ದಾರೆ.
ಯುವರಾಜ್‌ಕುಮಾರ್ ನಟನೆಯ ಎರಡನೇ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ಯುವ 2 ಎಂದು ಟೈಟಲ್ ನೀಡಿದ್ದಾರೆ. ಪುನೀತ್ ಹಾದಿಯಲ್ಲಿ ಅಶ್ವಿನಿ ಸಾಗುತ್ತಿದ್ದಾರೆ.