ನನ್ನ ಅತ್ತಿಗೆ ಸ್ಟ್ರಾಂಗ್ ವುಮೆನ್; ಅಣ್ಣನ ಫೋಟೋ ನೋಡಿ ಭಾವುಕರಾದ ಧ್ರುವ ಸರ್ಜಾ

By Vaishnavi Chandrashekar  |  First Published Oct 12, 2024, 3:53 PM IST

ಸಿನಿಮಾ ಪ್ರಚಾರದ ವೇಳೆ ಅಣ್ಣನ ಕುಟುಂಬದ ಬಗ್ಗೆ ಮಾತನಾಡಿದ ಧ್ರುವ ಸರ್ಜಾ. ಚಿರು ಮುಖ ನೋಡುತ್ತಿದ್ದಂತೆ ಭಾವುಕ.....

Dhruva sarja turn emotional seeing brother family photo on martin film promotion vcs

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ ಅಕ್ಟೋಬರ್ 11ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಸಾಕಷ್ಟು ಚಾಲೆಂಜ್‌ಗಳು ಎದುರಾಗಿತ್ತು. ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ಜಗಳ, ವಿತರಣ ವಿಚಾರಕ್ಕೆ, ರಿಲೀಸ್‌ಗೆ ತಡೆ, ಮ್ಯಾನೇಜ್‌ ಮಾಡಿಕೊಂಡ ಅವಾಂತರ ಹೀಗೆ ಒಂದೆರಡಲ್ಲ. ಇಷ್ಟರ ನಡುವೆಯೂ ರಿಲೀಸ್ ಆದ ಮಾರ್ಟಿನ್ ಮೊದಲ ದಿನವೇ ಭರ್ಜರಿ ಪ್ರದರ್ಶನ ಕಂಡಿದೆ. ಸಿನಿಮಾ ಸೂಪರ್ ಹಿಟ್ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೆ ಧ್ರುವ ತಮ್ಮ 100% ಶ್ರಮ ಹಾಕಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. 

ಧ್ರುವ ಸರ್ಜಾ ತಮ್ಮ ಸಿನಿಮಾ ಜರ್ನಿ ಆರಂಭದಿಂದಲೂ ಮಾಮ ಅರ್ಜುನ್ ಸರ್ಜಾ ಮತ್ತು ಅಣ್ಣ ಚಿರಂಜೀವಿ ಸರ್ಜಾರಿಗೆ ಕ್ರಿಡಿಟ್ ಕೊಡುತ್ತಾರೆ. ಏನೇ ಇದ್ದರೂ ಅವರ ಆಶೀರ್ವಾದ ಮತ್ತು ಸಪೋರ್ಟ್ ಎನ್ನುತ್ತಿರುತ್ತಾರೆ. ಅಲ್ಲದೆ ಅಣ್ಣ ಅಗಲಿದ ನಂತರ ಧ್ರುವ ತಮ್ಮ ಒಂದು ಶಕ್ತಿಯನ್ನು ಕಳೆದುಕೊಂಡರು. ಆದರೂ ಫ್ಯಾಮಿಲಿಗೋಸ್ಕರ ಗಟ್ಟಿಯಾಗಿ ನಿಂತ ವರ್ಷಕ್ಕೊಂದು ಅಥವಾ ಎರಡು ಸಿನಿಮಾ ಮಾಡುವುದಾಗಿ ನಿರ್ಧಾರ ಮಾಡಿದ್ದರು. ಮಾರ್ಟಿನ್ ಸಿನಿಮಾ ರಿಲೀಸ್‌ ನಡುವೆಯೂ ತಮ್ಮ ಕೆಡಿ ಸಿನಿಮಾ ಕೆಲಸಗಳನ್ನು ಮಿಸ್ ಮಾಡಿಲ್ಲ. ಇಷ್ಟ ನಡುವೆಯೂ ಅತ್ತಿಗೆ ಮೇಘನಾ ರಾಜ್‌ಗೆ ಮಾರಲ್‌ ಸಪೋರ್ಟ್ ಆಗಿ ನಿಂತುಕೊಂಡಿದ್ದಾರೆ. ಎಷ್ಟೇ ಬ್ಯುಸಿಯಾಗಿದ್ದರು ಅಣ್ಣನ ಮಗ ರಾಯನ್ ಜೊತೆ ಮಾತನಾಡುತ್ತಾರೆ. 

Tap to resize

Latest Videos

ಬೆನ್ನ ಹಿಂದೆ ಅಗಲಿದ ಅಪ್ಪನ ಟ್ಯಾಟೂ ಹಾಕಿಸಿಕೊಂಡ ಅನುಪಮಾ ಗೌಡ; ಫೋಟೋ ವೈರಲ್

ಮಾರ್ಟಿನ್ ಸಿನಿಮಾ ಪ್ರಚಾರದ ವೇಳೆ ಒಂದಿಷ್ಟು ಹಳೆ ಫೋಟೋಗಳನ್ನು ತೋರಿಸಿ ಅದರ ಬಗ್ಗೆ ಮಾತನಾಡುವಂತೆ ಖಾಸಗಿ ಟಿವಿ ನಿರೂಪಕ ಮನವಿ ಮಾಡಿಕೊಂಡರು. ಒಂದೆರಡು ಫೋಟೋಗಳನ್ನು ನೋಡಿ ವಿವರಿಸಿದ್ದರು ಆದರೆ ಅಣ್ಣ ಅತ್ತಿಗೆ ಮತ್ತು ರಾಯನ್ ಫೋಟೋ ನೋಡುತ್ತಿದ್ದಂತೆ ಭಾವುಕರಾದರು. ದಯವಿಟ್ಟು ಬೇರೆ ಫೋಟೋ ತೋರಿಸಿ ಇದನ್ನು ನೋಡಲು ಆಗುವುದಿಲ್ಲ ಎಂದರು. ಮೇಘನಾ ರಾಜ್ ಗರ್ಭಿಣಿ ಆಗಿದ್ದಾಗ ಧ್ರುವ ಸರ್ಜಾ ಸರ್ಪ್ರೈಸ್ ಬೇಬಿ ಶವರ್ ಹಮ್ಮಿಕೊಂಡಿದ್ದರು. ಆಗ ದಿನ ಮೇಘನಾ ಕೈ ಹಿಡಿದು ವೇದಿಕೆ ಮೇಲೆ ಕರೆದುಕೊಂಡು ಬಂದರು ಆ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಜೊತೆಗೆ ರಾಯನ್ ಹುಟ್ಟಿದ ದಿನ ಕೂಡ ಧ್ರುವ ಎತ್ತಿಕೊಂಡು ಮುದ್ದಾಡಿದ್ದು. ಈ ಎರಡೂ ಫೋಟೋಗಳನ್ನು ಒಟ್ಟಿಗೆ ನೋಡಿ ಭಾವುಕರಾಗಿದ್ದಾರೆ. 

ಕೇವಲ 1 ತಿಂಗಳಿಗೆ 2 ಲಕ್ಷ ರೂ. ಶಾಪಿಂಗ್ ಮಾಡಿದ ಬಿಗ್ ಬಾಸ್ ಐಶ್ವರ್ಯ; ಅಪ್ಪನ ದುಡ್ಡು ಕೊಳಿತಿದ್ಯಾ ಎಂದ ನೆಟ್ಟಿಗರು

'ನನ್ನ ಅತ್ತಿಗೆ ಸ್ಟ್ರಾಂಗ್ ಪರ್ಸನಾಲಿಟಿ ಸ್ಟ್ರಾಂಗ್ ವುಮೆನ್. ನನ್ನ ಮಗ ರಾಯನ್‌ ಹುಟ್ಟಿದ ದಿನ ಹಿಡಿದುಕೊಂಡ ಫೋಟೋ ವೈರಲ್ ಆಯ್ತು, ಯಾರು ಕ್ಲಿಕ್ ಮಾಡಿದ್ದು ಹೇಗೆ ಲೀಕ್ ಅಯ್ತು ಅನ್ನೋದು ಗೊತ್ತಿಲ್ಲ. ಅಣ್ಣನನ್ನು ಈಗ ಮಿಸ್ ಮಾಡಿಕೊಳ್ಳುತ್ತೀನಿ' ಎಂದು ಧ್ರುವ ಹೇಳಿದ್ದಾರೆ. ಈಗಲೂ ಧ್ರುವ ಮನಸ್ಸಿನಲ್ಲಿ ಇರುವ ನೋವು ಮತ್ತು ಕಣ್ಣಲ್ಲಿ ನೀರು ನೋಡಿದರೆ ಅಭಿಮಾನಿಗಳು ಕೂಡ ಭಾವುಕರಾಗುತ್ತಾರೆ. 

vuukle one pixel image
click me!