ಮಂಜು ಸ್ವರಾಜ್ ಅವರೇ ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆಗಾಗಿ ಆಡಿಷನ್ ಕರೆದಿದೆ ಚಿತ್ರತಂಡ. ಇದೊಂದು ಯೂತ್ ಫುಲ್ ಲವ್ ಕಮ್ ಫ್ಯಾಮಿಲಿ ಸ್ಟೋರಿಯಂತೆ.
ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ ಹಾಗೂ ಸಾಧುಕೋಕಿಲ ಪ್ರಮುಖ ಭೂಮಿಕೆಯಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ದಶಕದ ಸಂಭ್ರಮದ ನೆನಪಿನಲ್ಲಿಯೇ "ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ" ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ಮಾಪಕ ಕೆಎ ಸುರೇಶ್.
27 ಡಿಸೆಂಬರ್ 2013 ರಲ್ಲಿ ತೆರೆಕಂಡಿದ್ದ ಶ್ರಾವಣಿ ಸುಬ್ರಮಣ್ಯ, ಸೂಪರ್ ಹಿಟ್ ಆಗುವ ಮೂಲಕ ಎಲ್ಲರಿಗೂ ಬ್ರೇಕ್ ಕೊಟ್ಟಿತ್ತು. ಗಣೇಶ್ - ಅಮೂಲ್ಯ ಜೋಡಿಯನ್ನು ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರಿಂದ ಸಿನಿಮಾ ಶತಕ ಪೂರೈಸುವಲ್ಲಿ ಯಶಸ್ವಿಯಾಯಿತು. ಇದೀಗ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಅಧಿಕೃತವಾಗಿ ಘೋಷಣೆಯಾಗಿದೆ. ಸದ್ಯ ಹರಿಬಿಟ್ಟಿರುವ ಕಲರ್ ಫುಲ್ ಪೋಸ್ಟರ್ ಸಿನಿಮಾ ಮೇಲೆ ಕೂತುಹಲ ಮಾಡುವಂತಿದೆ. ಶ್ರಾವಣಿ ಸುಬ್ರಮಣ್ಯ ಗೆದ್ದಿರುವುದರಿಂದ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಜೋಡಿ ಮೋಡಿ ಮಾಡಲಿದೆ ಎಂಬುದು ಪೋಸ್ಟರ್ ನೋಡಿದವರ ಅನಿಸಿಕೆ.
ಜವಾನ್ ಡೈರೆಕ್ಟರ್ ಮುಂದಿನ ಸಿನಿಮಾಗೆ ಟಾಲಿವುಡ್ ಸ್ಟೈಲಿಶ್ ಸ್ಟಾರ್; ಪುಷ್ಪಾ 2 ಕಥೆ ಏನಾಯ್ತು?
ಮಂಜು ಸ್ವರಾಜ್ ಅವರೇ ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆಗಾಗಿ ಆಡಿಷನ್ ಕರೆದಿದೆ ಚಿತ್ರತಂಡ. ಇದೊಂದು ಯೂತ್ ಫುಲ್ ಲವ್ ಕಮ್ ಫ್ಯಾಮಿಲಿ ಸ್ಟೋರಿ ಆಗಿರುವುದರಿಂದ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ಹುಡುಕಾಟ ಶುರುವಾಗಿದೆ. 20 ವರ್ಷದ ಆಸುಪಾಸು ಇದ್ದವರು ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಯಾಗಲು ಅರ್ಜಿ ಸಲ್ಲಿಸಬಹುದು. ಎಲ್ಲಾ ಅಂದುಕೊಂಡಂತೆ ನಡೆದರೆ ಹೊಸ ವರ್ಷದಲ್ಲಿ ಹೊಸ ಶ್ರಾವಣಿ ಸುಬ್ರಮಣ್ಯ ಲವ್ ಕಹಾನಿ ಶುರುವಾಗಲಿದೆ. ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಕುರಿತು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.
ಆಸ್ಕರ್ ಪ್ರಶಸ್ತಿ ವಿಜೇತ ನಟನ ಅನುಮಾನಾಸ್ಪದ ಸಾವು; ವಿಚಿತ್ರ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ರಂತೆ!
ಅಂದಹಾಗೆ, ಸದ್ಯ ನಿರ್ದೇಶಕ ಮಂಜು ಸ್ವರಾಜ್ ಅವರು ಅಜಯ್ ರಾವ್ ನಾಯಕತ್ವದ ಸಿನಿಮಾ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಮುಗಿಸಿ ಮುಂಬರುವ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೊಸಬರ ಚಿತ್ರವಾದ್ದರಿಂದ ನಾಯಕ-ನಾಯಕಿ ಹಾಗೂ ಕಲಾವಿದರ ಆಯ್ಕೆ ಆದ ಬಳಿಕವಷ್ಟೇ ಶೂಟಿಂಗ್ ಶುರು ಎಂದು ಪಕ್ಕಾ ಹೇಳಬಹುದು. ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಪ್ರೇಕ್ಷಕರು ಹೊಸ ಶ್ರಾವಣಿ ಹಾಗೂ ಸುಬ್ರಹ್ಮಣ್ಯ ಅವರನ್ನು ನೋಡಬಹುದು.
ಐಶ್ವರ್ಯ ರೈ ಬೇರೆ ವಾಸವಿದ್ರೂ ಅಭಿಷೇಕ್ ಡೀವೋರ್ಸ್ ಕೊಡುತ್ತಿಲ್ಲ; ಸೀಕ್ರೆಟ್ ಬಿಚ್ಚಿಟ್ಟ ನೆಟ್ಟಿಗರು!