ಕ್ರಿಸ್‌ಮಸ್ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್: ವಿಶೇಷ ಫೋಟೋಶೂಟ್‌ನಲ್ಲಿ ಮಿಂದೆದ್ದ ತಾರೆಯರು!

Published : Dec 27, 2023, 08:51 PM ISTUpdated : Dec 27, 2023, 08:52 PM IST
ಕ್ರಿಸ್‌ಮಸ್ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್: ವಿಶೇಷ ಫೋಟೋಶೂಟ್‌ನಲ್ಲಿ ಮಿಂದೆದ್ದ ತಾರೆಯರು!

ಸಾರಾಂಶ

ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಜೋರಾಗೆ ನಡೆದಿದೆ. ನಮ್ ಸ್ಯಾಂಡಲ್ವುಡ್ನಲ್ಲೇನು ಕಡಿಮೆ ಇಲ್ಲ. ನಮ್ಮ ಕನ್ನಡ ಕಲಾವಿಧರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಹಾಗಂತ ಹಬ್ಬ ಮಾಡಿಲ್ಲ. ಕ್ರಿಸ್ಮಸ್ ಡ್ರೆಸ್ ಧರಿಸಿ ಸ್ಪೆಷಲ್ ಫೋಟೋ ಶೂಟ್ ಮಾಡಿದ್ದಾರೆ. 

ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಜೋರಾಗೆ ನಡೆದಿದೆ. ನಮ್ ಸ್ಯಾಂಡಲ್ವುಡ್ನಲ್ಲೇನು ಕಡಿಮೆ ಇಲ್ಲ. ನಮ್ಮ ಕನ್ನಡ ಕಲಾವಿಧರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಹಾಗಂತ ಹಬ್ಬ ಮಾಡಿಲ್ಲ. ಕ್ರಿಸ್ಮಸ್ ಡ್ರೆಸ್ ಧರಿಸಿ ಸ್ಪೆಷಲ್ ಫೋಟೋ ಶೂಟ್ ಮಾಡಿದ್ದಾರೆ. ನಟಿ ರಾಧಿಕಾ ಪಂಡಿತ್ ಕ್ರೈಸ್ತರ ಹಬ್ಬವನ್ನ ಆಚರಿಸಿದ್ದಾರೆ. ಮಕ್ಕಳಾದ ಯಥರ್ವ್ ಹಾಗು ಐರಾರಾ ಜೊತೆ ಕ್ರಿಸ್ಮಸ್ ಫೋಟೋ ಶೂಟ್ ಮಾಡಿ ಮನೆಯಲ್ಲೇ ಕೇಕ್ ಮಾಡಿರೋ ಫೊಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ. 

‘ಗಟ್ಟಿಮೇಳ’ ಧಾರವಾಹಿ ಬ್ಯೂಟಿ ಶರಣ್ಯ ಶೆಟ್ಟಿ ಕೆಂಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಕಲರ್ ಗೌನ್‌ಗೆ ಬಿಳಿ ಬಣ್ಣದ ಉಲ್ಲನ್ ಶಾಲ್ ಮತ್ತು ಟೋಪಿ ಧರಿಸಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಅಷ್ಟೆ ಅಲ್ಲ ‘ಬಚ್ಚನ್’ ಸಿನಿಮಾದ ನಟಿ ಪಾರುಲ್ ಯಾದವ್ ತಮ್ಮ ನಾಯಿ ಮರಿಗಳ ಜೊತೆ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಇದರ ಸ್ಪೆಷಲ್ ಫೋಟೋಗಳನ್ನ ಕೂಡ ನಟಿ ಶೇರ್ ಮಾಡಿಕೊಂಡಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಕ್ರಿಸ್ಮಸ್ ಮೂಡ್ಗೆ ಜಾರಿದ್ರು. ಪತ್ನಿ ವಿದ್ಯಾ ಮತ್ತು ಮಕ್ಕಳೊಂದಿಗಿನ ಹಬ್ಬದ ಫೋಟೋಗಳನ್ನ ಶ್ರೀಮುರಳಿ ಶೇರ್ ಮಾಡಿದ್ದಾರೆ. ನಟಿ ರುಕ್ಮಿಣಿ ವಸಂತ್ ಸಾಂತಾ ಕ್ಯಾಪ್ ಧರಿಸಿ ಮೊಸರನ್ನ ತಿನ್ನುತ್ತಾ ಕ್ರಿಸ್ಮಸ್ ಶುಭಾಶಯ ಹೇಳಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಸಾಂತಾಕ್ಲಾಸ್‌ ಕ್ಯಾಪ್‌ ಧರಿಸಿ ಕ್ರಿಸ್ಮಸ್‌ ಶುಭಾಶಯ ಕೋರಿದ್ದಾರೆ. ಮೇಘನಾ ರಾಜ್‌ ಸರ್ಜಾ ಮನೆಯಲ್ಲೂ ಕ್ರಿಸ್ಮಸ್‌ ಸಂಭ್ರಮ ಜೋರಾಗಿದ್ದು, ಮಗನ ಜೊತೆ ಕ್ರಿಸ್ಮಸ್ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ ಮಂದಿ ಸಂತನ ಹಬ್ಬ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!