ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಲ್ಲಿ ಸ್ಟಾರ್ಸ್ ಮೆರಗು: ರಿಷಬ್ ಬಳಿಕ ಯಶ್‌ಗೂ ಬಂತು ಆಹ್ವಾನ!

By Govindaraj S  |  First Published Dec 27, 2023, 8:32 PM IST

ಕೋಟ್ಯಂತರ ರಾಮ ಭಕ್ತರ ಕನಸು ನನಸಾಗೋ ದಿನ ಹತ್ತಿರದಲ್ಲೇ ಇದೆ. ಇನ್ನೊಂದು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗ್ತಿದೆ. ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಆಗ್ತಿರೋ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಆಗ್ತಿದೆ.


ಕೋಟ್ಯಂತರ ರಾಮ ಭಕ್ತರ ಕನಸು ನನಸಾಗೋ ದಿನ ಹತ್ತಿರದಲ್ಲೇ ಇದೆ. ಇನ್ನೊಂದು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗ್ತಿದೆ. ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಆಗ್ತಿರೋ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಆಗ್ತಿದೆ. ಶ್ರೀರಾಂನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ದೇಶದ ದೊಡ್ಡ ದೊಡ್ಡ ಸೆಲೆಬ್ರೆಟಿಗಳು ರಂಗೂ ಇರಲಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಾಕ್ಷಿಯಾಗ್ತಿದ್ದಾರೆ. 

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಜಿಸ್ಟರ್ ಪೋಸ್ಟ್ ಮೂಲಕ ಸಾಧು ಸಂತರಿಗೆ ಹಾಗೂ ರಾಜಕೀಯ ಗಣ್ಯರಿಗೆ ಸೆಲೆಬ್ರೆಟಿಗಳಿಗೆ ಆಮಂತ್ರಣ ಪತ್ರಿಕೆ ಕಳಿಸುತ್ತಿದೆ. ಇತ್ತೀಚೆಗಷ್ಟೆ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿಗೂ  ಆಹ್ವಾನ ಬಂದಿದೆ ಅನ್ನೋ ವಿಚಾರ ಬಹಿರಂಗವಾಗಿತ್ತು. ಈಗ ರಾಕಿಂಗ್ ಸ್ಟಾರ್ ಯಶ್ಗೂ ಆಹ್ವಾನ ಬಂದಿದೆ. ರಾಮ ಮಂದಿರ ಉದ್ಘಾಟನೆಯಲ್ಲಿ ಕೆಜಿಎಫ್ ಹೀರೋ ಯಶ್ ಕೂಡ ಭಾಗಿ ಆಗ್ತಾರಂತೆ. ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ಕೋಟ್ಯಂತರ ಜನ ಕಾಯ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಸಾಕ್ಷಿಯಾಗಬೇಕು ಅನ್ನೋ ಆಸೆ ಅನೇಕರಿಗೆ ಇದೆ. 

Tap to resize

Latest Videos

ಈ ಅವಕಾಶ ಎಲ್ಲರಿಗೂ ಸಿಗೋಲಗಲ. ಈಗ ನಟ ಯಶ್ಗೆ ಆಹ್ವಾನ ಬಂದಿದ್ದು, ರಾಮ ಮಂದಿರ ಉದ್ಘಾಟನೆಯಲ್ಲಿ ಯಶ್ ಭಾಗಿ ಆಗ್ತಾರೆ ಅಂತ ಹೇಳಲಾಗ್ತಿದೆ. ರಾಮ ಮಂದಿರ ಉದ್ಘಾಟನೆಯಲ್ಲಿ ಸ್ಟಾರ್ಸ್ ರಂಗು ಇರಲಿದೆ. ಅಮಿತಾಬ್ ಬಚ್ಚನ್, ರಜನಿಕಾಂತ್, ಮಾಧುರಿ ದೀಕ್ಷಿತ್, ಮೋಹನ್ಲಾಲ್, ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಭಾರತದ ಹಲವು ಬಿಗ್ ಸ್ಟಾರ್ಸ್ಗೆ ರಾಮ ಮಂದಿರ ಟ್ರಸ್ಟ್ ಆಹ್ವಾನಿಸಿದೆ. ಒಂದು ಅಂದಾಜಿ ಪ್ರಕಾರ 1,500-1,600 ಪ್ರಖ್ಯಾತ ಅತಿಥಿಗಳು ಸೇರಿ 8,000 ವಿಐಪಿಗಳಿಗೆ ಇನ್ವಿಟೇಷನ್ ಹೋಗಿದೆ. ಅದರಲ್ಲಿ ನಮ್ಮ ಸ್ಯಾಂಡಲ್ವುಡ್ದಿಂದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಹಾಗು ರಾಕಿಂಗ್ ಸ್ಟಾರ್ ಯಶ್ ಸಾಕ್ಷಿಯಾಗ್ತಿದ್ದಾರೆ. 

click me!