Love You Rachchu: ಡಿಸೆಂಬರ್ 16ರಂದು ಅಜಯ್-ರಚ್ಚು ಚಿತ್ರದ ಟ್ರೇಲರ್ ರಿಲೀಸ್

By Suvarna NewsFirst Published Dec 6, 2021, 8:29 PM IST
Highlights

ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಅಭಿನಯದ ಬಹು ನಿರೀಕ್ಷಿತ 'ಲವ್‌ ಯು ರಚ್ಚು' ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

ಅಜಯ್‌ ರಾವ್‌ (Ajay Rao) ಮತ್ತು ರಚಿತಾ ರಾಮ್‌ (Rachita Ram) ಅಭಿನಯದ ಬಹು ನಿರೀಕ್ಷಿತ 'ಲವ್‌ ಯು ರಚ್ಚು' (Love You Rachchu) ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ. ಗುರು ದೇಶಪಾಂಡೆ (Guru Deshpande) ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಚಿತ್ರತಂಡವು ಪ್ರಚಾರ ಕಾರ್ಯಗಳಿಗೆ ಸಿದ್ಧತೆಯನ್ನು ನಡೆಸಿದ್ದು 'ಲವ್‌ ಯು ರಚ್ಚು' ಚಿತ್ರದ ಟ್ರೇಲರ್ (Trailer) ಬಿಡುಗಡೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.  'ಲವ್ ಯು ರಚ್ಚು' ಟ್ರೈಲರ್ ಡಿಸೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ಆನಂದ್ ಆಡಿಯೊ (Anand Audio) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್‌ನ್ನು ಶೇರ್ ಮಾಡಿಕೊಂಡಿದ್ದಾರೆ.

ಈಗಾಗಲೇ  'ಲವ್‌ ಯು ರಚ್ಚು' ಚಿತ್ರದ 'ಮುದ್ದು ನೀನು' (Muddu Neenu) ವಿಡಿಯೋ ಸಾಂಗ್ ಬಿಡುಗಡೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್‌ ಮಾಡಿತ್ತು. ಇತ್ತೀಚೆಗೆ ಚಿತ್ರದ ಟೈಟಲ್ ಸಾಂಗ್ (Title Track) 'ಓಯ್ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ' ಎಂಬ ಸಾಲಿನ ಹಾಡು ಬಿಡುಗಡೆಯಾಗಿ ಸಂಗೀತ ಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. 'ಭರ್ಜರಿ' ಚೇತನ್ ಕುಮಾರ್ (Chethan Kumar ) ಹಾಡಿಗೆ ಸಾಹಿತ್ಯ ರಚಿಸಿದ್ದು, ನವೀನ್ ಸಜ್ಜು (Naveen Sajju) ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿತ್ತು. ಕದ್ರಿ ಮಂಜುನಾಥ್ (Kadri Manikanth) ಸಂಗೀತ ಸಂಯೋಜನೆ ಈ ಹಾಡಿಗಿತ್ತು.

Love You Rachchu: ಡಿಸೆಂಬರ್ 31ರಂದು ತೆರೆಮೇಲೆ ಬರಲಿದ್ದಾರೆ ಅಜಯ್-ರಚ್ಚು ಜೋಡಿ

'ಲವ್‌ ಯು ರಚ್ಚು' ಚಿತ್ರದಲ್ಲಿ ಅಜಯ್‌ ರಾವ್‌ ಮಗಳು ಚರಿಷ್ಮಾ (Charishma) ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸಬೇಕಾಗಿತ್ತು. ನಮ್ಮ ಚಿತ್ರದ ನಾಯಕ ಅಜಯ್‌ ರಾವ್‌ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ಇಡೀ ಚಿತ್ರತಂಡಕ್ಕೆ ಅನಿಸಿತು. ಅದರಂತೆ ಚರಿಷ್ಮಾ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಸಿನಿಮಾದಲ್ಲಿ ಚರಿಷ್ಮಾ ತುಂಬ ಕ್ಯೂಟ್‌ ಆಗಿ ಕಾಣುತ್ತಾಳೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಈ ಹಿಂದೆ ತಿಳಿಸಿದ್ದಾರೆ.

ಇದು ನನ್ನ ಪ್ರೊಡಕ್ಷನ್‌ನಲ್ಲಿ ಬರಬೇಕಿದ್ದ ಸಿನಿಮಾ. ಆದರೂ ಈ ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಚಿತ್ರದ ಮೇಕಿಂಗ್‌ ವೇಳೆ ಘರ್ಷಣೆಗಳಾಗಿವೆ. ಒಂದು ಡೈಮಂಡ್‌ ಹೊರಬರಬೇಕು ಅಂದರೆ ಅನೇಕ ಕಠಿಣತೆಗಳನ್ನು ಹಾದು ಬರುವುದು ಅನಿವಾರ್ಯ. ನಮ್ಮ ಈ ಸಿನಿಮಾ ರೆಕಾರ್ಡ್‌ ಕ್ರಿಯೇಟ್‌ ಮಾಡುವ ವಿಶ್ವಾಸ ಇದೆ. ಎಲ್ಲ ಸನ್ನಿವೇಶಗಳನ್ನೂ ಸಮಚಿತ್ತದಿಂದ ನಿಭಾಯಿಸುವ ಗಂಡನ ಪಾತ್ರವನ್ನಿಲ್ಲಿ ನಿಭಾಯಿಸಿದ್ದೇನೆ' ಎಂದು ಅಜೇಯ್‌ ರಾವ್‌ ಹೇಳಿದ್ದಾರೆ. ಹಾಗೂ ಸಿನಿಮಾ ಆರಂಭದಲ್ಲಿಯೇ 'ಲವ್‌ ಯು ರಚ್ಚು' ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಚಿತ್ರೀಕರಣದ​ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

Love You Rachchu: ಡಿಂಪಲ್ ಹುಡುಗಿಗೆ ಡಾರ್ಲಿಂಗ್ ಎಂದು ಕರೆದ ಅಜಯ್‌ ರಾವ್‌

ಇನ್ನು 'ಲವ್‌ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನೊಳಗೊಂಡಿದ್ದು, ಚಿತ್ರದ ಕಥೆಯನ್ನು ಶಶಾಂಕ್ (Shashank) ಬರೆದಿದ್ದಾರೆ. ಈ ಚಿತ್ರಕ್ಕೆ ಶಂಕರ್ ರಾಜ್ (Shankar Raj) ಆ್ಯಕ್ಷನ್ ಕಟ್ ಹೇಳಿದ್ದು,  ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆಯಿದೆ. 
 

click me!