
ಕೊರೋನಾ ಲಾಕ್‌ಡೌನ್, ರೂಪಾಂತರಿ ವೈರಸ್ ಟೆನ್ಷನ್ ನಡುವೆ ಸಿಂಪಲ್ ನಿರ್ದೇಶಕ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿಶ್ವಿಕಾಗೆ ಆ್ಯಕ್ಷನ್ ಕಟ್ ಹೇಳಿ 'ಸಖತ್' ಸಿನಿಮಾವನ್ನು ನವೆಂಬರ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದರು. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಖತ್ ಸಿನಿಮಾ ನಿರ್ದೇಶಕರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ವಿಯಾಗಿದೆಯೇ? ಚಿತ್ರ ಮಂದಿರಗಳನ್ನು ಪ್ರವೇಶಿಸಿದವರ ಭಾವನೆಗಳಲ್ಲಿ ಬದಲಾವಣೆ ಕಂಡು ಭಾವುಕರಾಗಿದ್ದಾರೆ ಸುನಿ.
ಖಾಸಗಿ ಯುಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಸುನಿ ಅವರಿಗೆ ಒಂದು ಪ್ರಶ್ನೆ ಕಾಡುತ್ತಿದೆಯಂತೆ, ಜನರು ಯಾಕೆ ಸಿನಿಮಾ ನೋಡಕ್ಕೆ ಬರ್ತಿಲ್ಲ ಎಂದು. ಅವರು ಮಾತುಗಳನ್ನು ಬಹುತೇಕ ಕನ್ನಡಿಗರು ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಕೂಡ. ಅಲ್ಲದೆ ಇದಕ್ಕೆ ಕ್ರಮ ತೆಗೆದುಕೊಳ್ಳದಿದ್ದರೆ, ಖಂಡಿತ ಮುಂಬರುವ ದಿನಗಳಲ್ಲಿ ಬಿಡುಗಡೆ ಆಗುವ ಪರ ಭಾಷೆ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತವೆ. ಹಾಗೆಯೇ ಕನ್ನಡಿಗರ ಸಿನಿಮಾಗಳಿಗೆ ಬೆಲೆ ಇರುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
'ನನ್ನ ಸಿನಿಮಾನ ಆಯ್ಕೆ ಮಾಡಿಕೊಂಡು ನೋಡುತ್ತಿದ್ದಾರೆ. ಎಲ್ಲಾರೂ ನೋಡುತ್ತಿಲ್ಲ. ನಾನು ಥಿಯೇಟರ್‌ಗೆ ಹೋದಾಗ ಹಿವಿ ರೆಸ್ಪಾನ್ಸ್ ಇತ್ತು. ಆದರೆ ಆ ರೆಸ್ಪಾನ್ಸಿಗೆ ಆಗುತ್ತಿರುವ ಕಲೆಕ್ಷನ್ ಬಹಳ ಕಡಿಮೆ, ಅನ್ನೋದು ನನ್ನ ಭಾವನೆ. ನಾನು ಸೋಲು, ಗೆಲುವು ಎರಡನ್ನೂ ನೋಡಿದ್ದೀನಿ. ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ನೋಡಿದ್ದೀನಿ, ಬಹುಪರಾಕ್ ಇಮ್ಮಿಡಿಯೇಟ್ ಆಗಿ ನೋಡಿದ್ದೀನಿ. ಬಹುಪರಾಕ್ ರಿವ್ಯೂಗಳು ಚೆನ್ನಾಗಿ ಬಂದಿದ್ದವು. ಆದರೆ ಯಾಕೆ ಅದರ ಕಲೆಕ್ಷನ್ ಡಲ್ ಆಯ್ತು, ಅನ್ನೋ ಅಂದಾಜು ನನಗೆ ಇದೆ. ಅದು ಜನರಿಗೆ ಕಮರ್ಷಿಯಲ್ ಅನಿಸಿಲ್ಲ ಅದಕ್ಕಿರಬಹುದು.ಆಪರೇಷನ್ ಅಲಮೇಲಮ್ಮ, ಚಮಕ್ ಎಲ್ಲಾ ದೊಡ್ಡ ಹಿಟ್ ಆಗಿವೆ. ಅವನ್ನೂ ನಾನು ಗಮನಿಸಿದ್ದೀನಿ,' ಎಂದು ಸುನಿ ಮಾತನಾಡಿದ್ದಾರೆ.
'ನನಗೆ ದೊಡ್ಡ ಪ್ರಶ್ನೆ ಆಗಿ ಉಳಿದಿರುವುದು ಸಖತ್ ಸಿನಿಮಾ. To the Core ಜನರು ಎಂಜಾಯ್ ಮಾಡುತ್ತಿದ್ದಾರೆ. ಆಚೆ ಬಂದು ಸಖತ್ ಅಂತ ಹೇಳ್ತಾರೆ. ಒಳಗಡೆ ಹೋಗುವ ಜನರ ಹಾಯ್ ಹೇಳಿದರೆ, ಹೋದವರು ಹೊರಗಡೆ ಬಂದಾಗ ತಬ್ಬಿಕೊಂಡಿದ್ದೂ ಇದೆ. ಈ ರೀತಿಯಲ್ಲಾ ರಿಯಾಕ್ಷನ್ ನೋಡಿದ್ದೀನಿ. ಸಾಮಾನ್ಯಾಗಿ ಇ-ರಿಪೋರ್ಟ್ ಬಂದಾಗ ಶೇರ್ ಅಂದಾಜು ಇರುತ್ತಿತ್ತು. ಆದರೆ ಇದು ಅಷ್ಟಾಗಿಲ್ಲ. ಅದಕ್ಕೆ ಕನ್ಫ್ಯೂಷನ್ ಅಗಿದೆ. ನನ್ನ ಪುಣ್ಯ ಏನಂದ್ರೆ, ರವಿ ಸರ್ ಎಲ್ಲಾ ಬಂದು ಸಿನಿಮಾ ನೋಡಿದ್ದಾರೆ. ಅವರ ದೃಶ್ಯಂ 2 ಸಿನಿಮಾ ರಿಲೀಸ್ ಟೈಮಲ್ಲಿ ಬಂದು ನಮ್ಮ ಸಿನಿಮಾ ಪ್ರಮೋಷನ್ ಮಾಡ್ತಿದ್ದಾರೆ. ಚಿತ್ರದ ಫನ್ ಎಲಿಮೆಂಟ್ ರವಿಚಂದ್ರನ್ ಸರ್‌ಗೆ ಇಷ್ಟ ಆಯ್ತು,' ಎಂದಿದ್ದಾರೆ.
'ಜನರು ಕೂಡ ನಮಗೆ ಸೆಲೆಬ್ರಿಟಿಗಳು. ರಿಲೀಸ್ ಅದ ದಿನದಿಂದಲೂ ತುಂಬಾ ಎಂಜಾಯ್ ಮಾಡಿದ್ದಾರೆ. ತುಂಬಾ ಪಾಸಿಟಿವ್ ಆಗಿ ಹೇಳ್ತಾ ಇದ್ದಾರೆ. ನಾನು ಅಂದುಕೊಂಡೆ ಕೋವಿಡ್ ಏನಾದರೂ ಕಾರಣ ಇರ್ಬಹುದಾ ಅಂತ. ಆದರೆ ತೆಲುಗು ಸಿನಿಮಾ ತೆಗೆದು ನೋಡಿದರೆ, ಎಲ್ಲಾ ಫುಲ್ ಆಗಿವೆ. ಅದಕ್ಕೆ ಇನ್ನೂ ಜಾಸ್ತಿ ಕನ್ಫ್ಯೂಸ್ ಆಗಿದ್ದೀನಿ. ಎರಡು ಗಂಟೆ ಫುಲ್ ನಗಿಸುತ್ತಾರಪ್ಪಾ, ಅಂತ ಜನರು ಹೇಳ್ತಾರೆ ಅಂದುಕೊಂಡೆ. ಆದರೆ ಇರ್ಲಿ, ಜನರು ಬರ್ತಿದ್ದಾರೆ. ಏನೂ ಗಣೇಶ್ ಸರ್ ಅವರ ಡೀಸೆಂಟ್ ಲೆವೆಲ್ಲಿಗೆ ಡೀಸೆಂಟ್ ಆಗಿ ಬರ್ತಿದ್ದಾರೆ.' ಎಂದು ಹೇಳಿಕೊಂಡಿದ್ದಾರೆ.
'ಎರಡು ವರ್ಷದಲ್ಲಿ ಜನರು ತುಂಬಾನೇ ಅನುಭವಿಸಿದ್ದಾರೆ. ಈಗಲೂ ಟೈಟಲ್ ಕಾರ್ಡ್‌ನಲ್ಲಿ ಅಪ್ಪು ಸರ್ ಹೆಸರು ನೋಡಿದಾಗ ಎದೆ ಭಾರ ಆಗುತ್ತೆ. ಮಿಸ್ ಮಾಡಿಕೊಂಡಿದ್ದೀನಿ ಅನಿಸುವುದಿಲ್ಲ. ಸೆಲೆಬ್ರಿಟಿ ಶೋಗೆ ಯಾರ್ ಯಾರ್ನ ಕರೀಬೇಕು ಅಂತ ಪ್ಲಾನ್ ಮಾಡುವಾಗ ಅಪ್ಪು ಸರ್ ಹೆಸರು ಕೇಳಿದಾಗ ಕರಿಬೇಕು ಅನಿಸುತ್ತದೆ,' ಎಂದು ಪುನೀತ್ ಅವರನ್ನು ನೆನಪಿಸಿಕೊಂಡಿರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.