ನಾದಬ್ರಹ್ಮನ ಸುತ್ತ ವಿವಾದಗಳ ಹುತ್ತ: ಪ್ರೇಮಲೋಕದ ಹಾಡುಗಾರ ಹಂಸಲೇಖನಿಗೆ ಇದೇ ಕುತ್ತಾಯ್ತಾ?

By Gowthami K  |  First Published Jul 22, 2024, 11:57 AM IST

ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ತಮ್ಮ ಹೇಳಿಕೆಗಳಿಂದ ಈ ಹಿಂದೆ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದರು. ಇಲ್ಲಿ ಹಂಸಲೇಖ ವಿವಾದಗಳ ಬಗ್ಗೆ ವಿವರಣೆ ನೀಡಲಾಗಿದೆ.


ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ಇತ್ತೀಚೆಗಷ್ಟೇ  ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಗಳು ಅವರದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ತಮ್ಮ ಹೇಳಿಕೆಗಳಿಂದ ವಿವಾದದಲ್ಲಿದ್ದರು ಹಂಸಲೇಖ. ಅವುಗಳು ಯಾವುದು ಎಂದು ಇಲ್ಲಿ ನೀಡಲಾಗಿದೆ.

ಗೌರಿ ಚಿತ್ರದ ಸಾಂಗ್ ಲಾಂಚ್ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಹಂಸಲೇಖ, ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿವೆ ಅಂತಾರೆ ಅದೆಲ್ಲ ಬುಲ್ ಶಿಟ್ ಎಂಬ ಪದ ಬಳಸಿದ್ದರು. ಈ ಹೇಳಿಕೆ ಜೈನ ಸಮುದಾಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ಹಂಸಲೇಖ ಜೈನ ಸಮುದಾಯದ ಜನತೆ ಬಳಿ ಕ್ಷಮೆ ಕೇಳಿದ್ದರು. ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮೆರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ.  ತ್ಯಾಗ, ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸುಮುದಾಯಕ್ಕೆ ಶಿರವಾಗಿ ಕ್ಷಮೆ ಕೋರುತ್ತೇನೆ ಎಂದು ಹಂಸಲೇಖ ಹೇಳಿದ್ದರು.

Tap to resize

Latest Videos

ನಾನು ಪಂಪನ ದಾಸಾನುದಾಸ. ಕನ್ನಡವನ್ನ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿರೋನು ನಾನು. ದಯಮಾಡಿ ಇದನ್ನ ಬೆಳೆಸಬೇಡಿ. ಪತ್ರದ ಮುಖಾಂತರವೂ ಕ್ಷಮೆ ಕೇಳಿದ್ದೇನೆ. ದಯವಿಟ್ಟು ಈ ವಿಷಯವನ್ನ ಇಲ್ಲಿಗೆ ಮುಕ್ತಾಯ ಮಾಡಿ ಎಂದು ವಿಡಿಯೋದಲ್ಲಿ ಕೂಡ ಕ್ಷಮೆ ಕೇಳಿದ್ದರು.

ಮೊನಾಲಿಸಾ ನೆನಪಲ್ಲಿ ‘ಗೌರಿ’ ಹಾಡು ಬಿಡುಗಡೆ: ಈ ಸಿನಿಮಾಗೆ 20 ವರ್ಷದ ಸಂಭ್ರಮ!

ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ: 2021ರ ನವೆಂಬರ್‌ ನಲ್ಲಿ ಪೇಜಾವರದ ಶ್ರೀ ಕೀರ್ತಿ ಶೇಷ ವಿಶ್ವೇಶ ತೀರ್ಥ ಶ್ರೀಪಾದ ಅವರ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ್ದ ಹೇಳಿಕೆಯ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮೈಸೂರಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಸ್ಪೃಶ್ಯತೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಿಳಿಗಿರಿ ರಂಗಸ್ವಾಮಿ ದೇವರ ಬಗ್ಗೆ ಜನಪದೀಯವಾಗಿ ಬಂದಿರುವ ಕಥೆಯನ್ನು ತುಚ್ಛವಾಗಿ ಪರಿಗಣಿಸಿದ್ದಾರೆ.  ತಮ್ಮ ಸಮುದಾಯದ ಗುರುಗಳಾದ ಶ್ರೀ ಕೀರ್ತಿಶೇಷ ವಿಶ್ವೇಶ ತೀರ್ಥ ಶ್ರೀಪಾದರು ಸಾಮಾಜಿಕ ಸಾಮರಸ್ಯಕ್ಕಾಗಿ ಕೈಗೊಂಡಿರುವ ಕಾರ್ಯದ ಬಗ್ಗೆ ಬಹಳ ಲೇವಡಿ ಮಾಡಿದ್ದಾರೆಂದು ದೂರು ದಾಖಲಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಹಂಸಲೇಖ ಅವರು ಕ್ಷಮೆ ಕೋರಿದ್ದರು.

ಹಂಸಲೇಖ ಹೇಳಿಕೆ ಏನಿತ್ತು?
ಪೇಜಾವರ ಶ್ರೀಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತುಕೊಳ್ಳಬಹುದಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗುತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು, ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ ಎಂದು ಹಂಸಲೇಖ ಹೇಳಿದ್ದರು.

ಏನಿದು 'ಕಾಂಪ್ಲಿಕೇಟೆಡ್' ಮ್ಯಾಟರ್..! ಹಂಸಲೇಖಾ ಚೇಂಜ್ ಓವರ್ ಬಗ್ಗೆ ಗುರುಕಿರಣ್ ಹೇಳಿದ್ದೇನು?

ಸವಿತಾ ಸಮಾಜಕ್ಕೆ ಅವಮಾನ ಆರೋಪ: 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಜಾನಪದ ಕಲಾವಿದರನ್ನು ವಿನಾ ಕಾರಣ ಅವಮಾನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಹಂಸಲೇಖ ಅವರ ಮೇಲೆ ಕೇಳಿಬಂದಿತ್ತು. ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾಡಿದ್ದ ಆರೋಪವನ್ನು ಹಂಸಲೇಖ ಖಂಡಿಸಿದ್ದರು. 

ಜೊತೆಗೆ ನನ್ನ ಮೇಲೆ ವಿನಾಕಾರಣ ಎದ್ದಿರುವ ಅಪಪ್ರಚಾರಕ್ಕೆ ವಿಷಾದಿಸುತ್ತೇನೆ. ಸಾಮಾಜಿಕ ಸೌಹಾರ್ದತೆ ಕಾಪಾಡುವ ಹೊಣೆ ಅರಿತು ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಸವಿತಾ ಸಮಾಜದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೇನೆಂದು ಆರೋಪಿಸಲಾಗಿದೆ. ಇದನ್ನು ಸ್ಪಷ್ಟವಾಗಿ ತಳ್ಳಿಹಾಕುತ್ತೇನೆ. ಸವಿತಾ ಸಮಾಜದ ಕಲಾವಿದ ಬಂಧುಗಳೇ ನನ್ನ ಗುರುಗಳು. ಇಷ್ಟಾಗಿಯೂ ಸವಿತಾ ಸಮುದಾಯದ ನನ್ನ ಬಂಧುಗಳಿಗೆ ನನ್ನ ಕಡೆಯಿಂದ ನೋವು ಉಂಟಾಗಿದ್ದರೆ ಅದಕ್ಕೆ ನಾನು ಇಡೀ ನನ್ನ ಸವಿತಾ ಸಮುದಾಯದ ಗುರು ಹಿರಿಯರ ಕ್ಷಮೆ ಕೇಳುತ್ತೇನೆ ಎಂದಿದ್ದರು.

ಯಶ್‌ಗೆ ಟಾಂಗ್ ಕೊಟ್ಟಿದ್ದ ಹಂಸಲೇಖ:
ಇನ್ನು ಇಷ್ಟೇ ಅಲ್ಲ, 2024ರ ಜನವರಿಯಲ್ಲಿ  ರಾಕಿಂಗ್‌ ಸ್ಟಾರ್‌ ಯಶ್‌ ಅವರ ಗಡ್ಡದ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಕೆಜಿಎಫ್‌ ಎಫೆಕ್ಟ್‌. ಕನ್ನಡ ಸಿನಿಮಾದಲ್ಲಿ ಎಲ್ಲಿ ಬೇಕಾದ್ರೂ ನೋಡಿ, ಕ್ಯಾಮೆರಾಮೆನ್‌ ಕೂಡ ದಾಡಿ ಬಿಟ್ಟಿರ್ತಾನೆ. ಡೈರೆಕ್ಟರ್‌, ಕೋರಿಯೋಗ್ರಾಫರ್‌, ಡೈರೆಕ್ಟರ್‌ ಕೊನೆಗೆ ಪ್ರೊಡ್ಯೂಸರ್‌ ಕೂಡ ದಾಡಿ ಬಿಟ್ಟಿರ್ತಾನೆ. ಎಡಿಟರ್‌ ಕೂಡ ತಾನೇನು ಕಮ್ಮಿ ಅಂತಾ ಅವನೂ ದಾಡಿ ಬಿಟ್ಟಿರ್ತಾನೆ. ಮೊದಲೆಲ್ಲಾ ಏನಾದ್ರೂ ತಪ್ಪು ಮಾಡಿದ್ರೆ, 'ಏನಾಗಿದ್ಯೋ ನಿಂಗೆ ದಾಡಿ' ಅಂತಾ ಬೈಯ್ತಾ ಇದ್ರು. ಆದರೆ, ಈಗ ದಾಡಿಯೇ ಫ್ಯಾಶನ್‌ ಆಗಿದೆ ಎಂದಿದ್ದಾರೆ. ನನಗೆ ಈ ಸಿನಿಮಾದ ಹೀರೋ ಹೆಸರು ಅಜಿತ್‌ ಅಂತಾ ಗೊತ್ತಿತ್ತು. ಯಾವಾಗ ಯಶ್‌ಜೀತ್‌ ಆಯ್ತು ಅಂತಾ ಗೊತ್ತಿಲ್ಲ. ಯಶ್‌ ಸ್ಟಾರ್‌ ಆದ ಮೇಲೆ ಹೆಸರು ಬದಲಿಸಿಕೊಂಡಿರ್ಬೇಕು ಅಂತಾ ಹಂಸಲೇಖ ಹೇಳಿದ್ದರು. 

ಇದರ ನಂತರ ಮೊನ್ನೆ ಗೌರಿ ಸಿನೆಮಾ ಕಾರ್ಯಕ್ರಮದಲ್ಲಿ ಕೂಡ  ಪ್ಯಾನ್ ಇಂಡಿಯಾ ಅನ್ನುವ ಹುಚ್ಚು ಬಂದಿದ್ದರಿಂದ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಕನ್ನಡದ ಬೇರುಗಳು ಕಟ್ ಆಗಿಬಿಟ್ಟಿದೆ. ಇವರಿಗೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಅನ್ನೋ ಭ್ರಮೆಯಿದೆ ಎಂದು ಯಶ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. 

ರಿಷಬ್ ಶೆಟ್ಟಿಗೂ ಟಾಂಗ್: ಇನ್ನು ಯಶ್ ಮಾತ್ರವಲ್ಲ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೂ ಟಾಂಗ್ ಕೊಟ್ಟಿದ್ದರು. ಫ್ಯಾನ್ ಇಂಡಿಯಾ ಅಂದ್ರೆ ಶೋಕಿ ಅಂದಿದ್ದರು. ದಾಡಿ ಬಾಡಿ ಮಾತ್ರ ಬೆಳೆಯೋದು ಅಂದಿದ್ದರು. ಕೆಜಿಎಫ್ ಮತ್ತು ಕಾಂತಾರ ಜಾಗತಿಕ ಹಿಟ್‌ ಬಗ್ಗೆ ಖುಷಿ ಪಡಲಿಲ್ಲ ಎಂದು ಹಲವರ ಅಭಿಪ್ರಾಯವಾಗಿದೆ.

click me!