ಡಾ ರಾಜ್‌ ಜೊತೆ ಭೋಜರಾಜನ ಪಾತ್ರಕ್ಕೆ ಆಸೆ ಪಟ್ಟಿದ್ದ ವಿಷ್ಣುವರ್ಧನ್; ಆದ್ರೆ ಕೈ ತಪ್ಪಿದ್ದು ಹೇಗೆ?

By Shriram BhatFirst Published Jul 21, 2024, 4:05 PM IST
Highlights

ಕವಿರತ್ನ ಕಾಳಿದಾಸ ಸಿನಿಮಾದ ಭೊಜರಾಜನ ಪಾತ್ರವನ್ನು ಮಾಡಬೇಕೆಂದು ಆ ಸಮಯದಲ್ಲಿ ನಟ ವಿಷ್ಣುವರ್ಧನ್ ಅವರು ಅಂದುಕೊಂಡಿರುತ್ತಾರೆ. ಅದನ್ನು ಅವರು ಬಹಿರಂಗವಾಗಿ ಹೇಳಿಕೊಂಡಿರುತ್ತಾರೆ ಕೂಡ. ಡಾ ರಾಜ್‌ಕುಮಾರ್ ಅವರಿಗೂ ಕೂಡ ಭೋಜರಾಜನ ಪಾತ್ರವನ್ನು ವಿಷ್ಣುವರ್ಧನ್ ಮಾಡಲಿ ಎಂದೇ ಆಸೆ ಇರುತ್ತದೆ. ಆದರೆ..

ಕವಿರತ್ನ ಕಾಳಿದಾಸ ಸಿನಿಮಾದ ಭೊಜರಾಜನ ಪಾತ್ರವನ್ನು ಮಾಡಬೇಕೆಂದು ಆ ಸಮಯದಲ್ಲಿ ನಟ ವಿಷ್ಣುವರ್ಧನ್ (Vishnuvardhan) ಅವರು ಅಂದುಕೊಂಡಿರುತ್ತಾರೆ. ಅದನ್ನು ಅವರು ಬಹಿರಂಗವಾಗಿ ಹೇಳಿಕೊಂಡಿರುತ್ತಾರೆ ಕೂಡ. ಡಾ ರಾಜ್‌ಕುಮಾರ್ (Dr Rajkumar) ಅವರಿಗೂ ಕೂಡ ಭೋಜರಾಜನ ಪಾತ್ರವನ್ನು ವಿಷ್ಣುವರ್ಧನ್ ಮಾಡಲಿ ಎಂದೇ ಆಸೆ ಇರುತ್ತದೆ. ಆದರೆ, ಸಿನಿಮಾದ ಚಿತ್ರಕಥೆ ಬರೆಯುತ್ತಿದ್ದ ಚಿ ಉದಯಶಂಕರ್ ಅವರಿಗೆ ಆ ಪಾತ್ರವನ್ನು ತಾವೇ ಮಾಡಬೇಕೆಂಬ ಆಸೆ ಇರುತ್ತದೆ. 

ಭೋಜರಾಜನ ಪಾತ್ರವನ್ನು ಮಾಡಬೇಕೆಂಬ ಆಸೆ ಹೊಂದಿದ್ದ ಚಿ ಉದಯಶಂಕರ್ (Chi Udayashankar) ಅವರು ಅದನ್ನು ಪಾರ್ವತಮ್ಮನವರ ಬಳಿ ಕೂಡ ಹೇಳಿಕೊಳ್ಳುತ್ತಾರೆ. ಆಗ ಪಾರ್ವತಮ್ಮನವರು 'ಇನ್ನೂ ಚಿತ್ರಕತೆ ಆಗಿಲ್ಲ. ಚಿತ್ರಕಥೆ ಸಿದ್ಧವಾದ ಬಳಿಕ ಆ ಪಾತ್ರವನ್ನು ಯಾರು ಮಾಡಬಹುದು ಎಂಬ ನಿರ್ಧಾರ ಮಾಡಿದರಾಯಿತು' ಎಂದಿರುತ್ತಾರೆ. ಆದರೆ ಬಳಿಕ ಅದು ಬೇರೆಯದೇ ತಿರುವು ಪಡೆದುಕೊಳ್ಳುತ್ತದೆ. 

Latest Videos

ಒಂದೆರಡು ತಲೆಮಾರಿಗೆ ಸೌಜನ್ಯ, ಸಂಸ್ಕಾರ ಕಲಿಸಿದ ಪುಣ್ಯಾತ್ಮ ಡಾ ರಾಜ್‌ಕುಮಾರ್; ಪೋಸ್ಟ್ ವೈರಲ್!

ಪಾರ್ವತಮ್ಮನವರ ಸಹೋದರರಾಗಿದ್ದು, ಡಾ ರಾಜ್‌ಕುಮಾರ್ ಟೀಮ್‌ನ ಆಧಾರ ಸ್ಥಂಬವೇ ಆಗಿದ್ದ ವರದಪ್ಪನವರು (Varadappa) ನಟ ಶ್ರೀನಿವಾಸ್ ಮೂರ್ತಿ ಅವರಿಗೆ ತುಂಬಾ ಆಪ್ತರಾಗಿದ್ದವರು. ಅವರೇ ಶ್ರೀನಿವಾಸಮೂರ್ತಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರೂ ಕೂಡ. ಹೀಗಾಗಿ ವರದಪ್ಪನವರು ಭೋಜರಾಜನ ಪಾತ್ರಕ್ಕೆ ಶ್ರೀನಿವಾಸ ಮೂರ್ತಿ (Shrinivasmurthy) ಅವರನ್ನು ಆಯ್ಕೆ ಮಾಡಿ ಅವರಿಗೆ ಮಾತು ಕೊಟ್ಟಿರುತ್ತಾರೆ. 

ಆ ಸಂಗತಿ ತಿಳಿದಾಗ ಡಾ ರಾಜ್ ಕೂಡ 'ವರದಪ್ಪನವರು ಹೇಳದ ಮೇಲೆ ಆಯ್ತು' ಎನ್ನುತ್ತಾರೆ. ಇದರಿಂದ ಈ ಪಾತ್ರವನ್ನು ಮಾಡಬೇಕೆಂದು ತುಂಬಾ ಆಸೆ ಪಟ್ಟಿದ್ದ ವಿಷ್ಣುವರ್ಧನ್ ಹಾಗೂ ಚಿ ಉದಯಶಂಕರ್ ಅವರಿಬ್ಬರಿಗೂ ಭೋಜರಾಜನ ಪಾತ್ರದ ಅವಕಾಶ ಕೈ ತಪ್ಪುತ್ತದೆ. ಆ ಅವಕಾಶವನ್ನು ಪಡೆದ ನಟ ಶ್ರೀನಿವಾಸ ಮೂರ್ತಿ ಅವರು ಆ ಪಾತ್ರದ ಮೂಲಕ ಮನೆಮಾತಾಗುತ್ತಾರೆ. ಕವಿರತ್ನ ಕಾಳಿದಾಸ ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸುತ್ತಿದೆ. 

ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?
 
ಡಾ ರಾಜ್‌ಕುಮಾರ್ ಕಾಳಿದಾಸನ ಪಾತ್ರದಲ್ಲಿ ಅಮೋಘ ನಟನೆ ಮಾಡಿದ್ದರೆ ಶ್ರೀನಿವಾಸ ಮೂರ್ತಿಯವರು ಭೋಜರಾಜನ ಪಾತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿ ಭೇಷ್ ಎನಿಸಿಕೊಳ್ಳುತ್ತಾರೆ. ನಾಯಕಿಯಾಗಿ ನಟಿ ಜಯಪ್ರದಾ ಮಿಂಚಿದ್ದಾರೆ. ಇಲ್ಲಿ ಯಾರದೇ ತಪ್ಪು ಇಲ್ಲದೇ ಆಸೆ ಪಟ್ಟಿದ್ದ ಭೋಜರಾಜನ ಪಾತ್ರದಿಂದ ನಟ ವಿಷ್ಣುವರ್ಧನ್ ಹಾಗು ಚಿ ಉದಯಶಂಕರ್ ಅವರಿಬ್ಬರೂ ವಂಚಿತರಾಗುತ್ತಾರೆ. ಅದಕ್ಕೇ ಹೇಳುವುದು, ಎಲ್ಲವೂ ನಮ್ಮ ಕೈನಲ್ಲಿ ಇಲ್ಲ, ಕೆಲವು ಸಂಗತಿಗಳು ಏನಾಗಬೇಕೋ ಹಾಗೆಯೇ ಆಗುತ್ತವೆ' ಅಂತ!

click me!