ಬಾಳ ಸಂಗಾತಿ ಯಾರಂತ ಅಧಿಕೃತವಾಗಿ ಅನೌನ್ಸ್ ಮಾಡಲಿರುವ ನಿರ್ದೇಶಕ ತರುಣ್ ಸುಧೀರ್, ಯಾವತ್ತು ಗೊತ್ತಾ?

By Shriram Bhat  |  First Published Jul 21, 2024, 5:13 PM IST

ತರುಣ್ ಸುಧೀರ್ ಮದುವೆ ಆಗಸ್ಟ್​ ತಿಂಗಳಿನಲ್ಲಿ ನಡೆಯುತ್ತದೆ ಎನ್ನುವ ಸುದ್ದಿ ಹಬ್ಬಿದೆ. ಸುದ್ದಿ ಮೂಲಗಳ ಪ್ರಕಾರ,  ನಟ ದರ್ಶನ್‌ರಿಂದಲೇ ತರುಣ್‌ ಸುಧೀರ್‌ ಹಾಗೂ ಸೋನಲ್‌ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎನ್ನಲಾಗಿದೆ. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿ ತಮಾಷೆಯಾಗಿ ದರ್ಶನ್‌ ಅವರು ತರುಣ್‌ ಹಾಗೂ ಸೋನಲ್‌ಗೆ..


ಸ್ಯಾಂಡಲ್​ವುಡ್​ನಲ್ಲಿ ಸದ್ಯ ಮೋಸ್ಟ್​ ಎಲಿಬಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡವರಲ್ಲಿ 'ಕಾಟೇರ' ನಿರ್ದೇಶಕ ತರುಣ್​ ಸುಧೀರ್​ ಕೂಡ ಒಬ್ಬರು. ಇತ್ತೀಚೆಗಷ್ಟೇ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದ ತರುಣ್​ ಸುಧೀರ್, ಈಗ ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ತರುಣ್ ಸುಧೀರ್‌ ಅವರಿಗೆ ಈಗ 41 ವರ್ಷ ವಯಸ್ಸು. ತುಂಬಾ ಸಮಯದಿಂದ ಅವರ ಮದುವೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಏಳುತ್ತಲೇ ಇದ್ದವು. ಈಗ ಆ ಬಗ್ಗೆ ಉತ್ತರ ಸಿಕ್ಕಿದ್ದು, ನಾಳೆ ತಮ್ಮ ಹುಡಗಿಯ ಬಗ್ಗೆ ತರುಣ್ ಹೇಳಲಿದ್ದಾರಂತೆ.

ಇತ್ತೀಚಿಗಷ್ಟೇ ಇವರ ತಾಯಿ ಮಾಲತಿ ಅವರು, ಮಗನ ಮದುವೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಸೋನಲ್‌ ಮಂಥೆರೋ (Sonal Monteiro) ಎಂಬುವವರ ಜೊತೆ ಮಗನ ಮದುವೆ ಆಗಲಿದೆ ಎಂದಿದ್ದರು. 'ಮ್ಯಾರೇಜ್ ಡೇಟ್​ ಇನ್ನೂ ಫಿಕ್ಸ್​ ಆಗಿಲ್ಲ, ಸೋನಲ್ ಸಂಬಂಧಿಕರಲ್ಲಿ ಅಬೇಕರು ದುಬೈನಿಂದ ಬರಬೇಕು, ಅವರೆಲ್ಲರೂ ಮಾತನಾಡಬೇಕು. ಬಳಿಕವಷ್ಟೇ ಅಂತಿಮ ನಿರ್ಧಾರವಾಗುತ್ತದೆ' ಎಂದಿದ್ದರು. ಅಷ್ಟೇ ಅಲ್ಲ, 'ಯಾರೇ ಸೊಸೆಯಾಗಿ ಬಂದರೂ ಸರಿ, ನನಗೆ ನನ್ ಮಗನ ಖುಷಿ ಮುಖ್ಯ' ಎಂದಿದ್ದರು. 

Tap to resize

Latest Videos

ನಾಲ್ಕು ಗೋಡೆ ಮಧ್ಯೆ ಕಾಲು ಹಿಡ್ಕೊಳಲು ರೆಡಿ... ಕನಸಿನ ಹುಡುಗಿಯ ಕ್ವಾಲಿಟಿ ಹೇಳಿದ ನಿರ್ದೇಶಕ ತರುಣ್​ ಸುಧೀರ್​

ತರುಣ್ ಸುಧೀರ್ ಮದುವೆ ಆಗಸ್ಟ್​ ತಿಂಗಳಿನಲ್ಲಿ ನಡೆಯುತ್ತದೆ ಎನ್ನುವ ಸುದ್ದಿ ಹಬ್ಬಿದೆ. ಸುದ್ದಿ ಮೂಲಗಳ ಪ್ರಕಾರ,  ನಟ ದರ್ಶನ್‌ರಿಂದಲೇ ತರುಣ್‌ ಸುಧೀರ್‌ ಹಾಗೂ ಸೋನಲ್‌ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎನ್ನಲಾಗಿದೆ. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿ ತಮಾಷೆಯಾಗಿ ದರ್ಶನ್‌ ಅವರು ತರುಣ್‌ ಹಾಗೂ ಸೋನಲ್‌ಗೆ ರೇಗಿಸುತ್ತಿದ್ದರು. ಇದೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿದೆ ಎನ್ನಲಾಗಿದೆ. 

ನಿರ್ದೇಶಕ ತರುಣ್ ಸುಧೀರ್ ಅವರ ತಾಯಿ ಕೂಡ, ಮಗನ ಮದುವೆಯ ಬಗ್ಗೆ ಮಾತನಾಡುತ್ತಾ, 'ನನಗೊಂದು ಆಸೆ ಇತ್ತು. ನನ್ನ ಮಗನಿಗೆ ನಾನು ಜೀವಂತ ಇರುವಾಗಲೇ ಮದುವೆಯಾಗಲಿ ಎನ್ನುವುದು. ಈಗ ಆಗುತ್ತಾನೆ ಅಂದರೆ ತುಂಬಾ ಸಂತೋಷ. ಒಂದು ಅಥವಾ ಎರಡು ತಿಂಗಳೊಳಗೆ ತರುಣ್‌ ಸುಧೀರ್‌-ಸೊನಲ್ ಮದುವೆ ಆಗುತ್ತದೆ ಎಂದಿದ್ದರು. ಆದರೆ ಈ ಬಗ್ಗೆ ಇದುವರೆಗೂ ತರುಣ್​ ಸುಧೀರ್​ ಮಾತ್ರ ಏನನ್ನೂ ಹೇಳಿಲ್ಲ. 

ಕಲರ್ಸ್​ ಕನ್ನಡ ವಾಹಿನಿಯ ಚಿತ್ತಾರಾ ಸ್ಟಾರ್​ ಅವಾರ್ಡ್​ನಲ್ಲಿ ತರುಣ್​ ಸುಧೀರ್​ ಅವರಿಗೆ ಬೆಸ್ಟ್​ ಡೈರೆಕ್ಟರ್​ ಅವಾರ್ಡ್​ ನೀಡಲಾಗಿದೆ.   ಕುತೂಹಲದ ವಿಷಯ ಏನೆಂದರೆ, ಈ ಸಂದರ್ಭದಲ್ಲಿ ನಿರೂಪಕರಾದ ನಿರಂಜನ್​ ಅವರು ಮದುವೆಯ ಬಗ್ಗೆ ಪ್ರಶ್ನೆ ಮಾಡಿದಾಗ ತರುಣ್​ ಸುಧೀರ್, ನಟಿ ಸೋನಲ್​ ವಿಷಯವನ್ನು ಹೇಳಲಿಲ್ಲ. ಬದಲಿಗೆ ತಮ್ಮ ಕನಸಿನ ಹುಡುಗಿ ಅಂದರೆ  ಮದುವೆಯಾಗುವ ಹುಡುಗಿಯ ಕ್ವಾಲಿಟಿ ಹೇಗಿರಬೇಕು ಎನ್ನುವ ಬಗ್ಗೆ ಮಾತ್ರ ತಿಳಿಸಿದ್ದರು. 

ಡಾ ರಾಜ್‌ ಜೊತೆ ಭೋಜರಾಜನ ಪಾತ್ರಕ್ಕೆ ಆಸೆ ಪಟ್ಟಿದ್ದ ವಿಷ್ಣುವರ್ಧನ್; ಆದ್ರೆ ಕೈ ತಪ್ಪಿದ್ದು ಹೇಗೆ?

ಕಾಟೇರಾ ಚಿತ್ರದ ನಿರ್ದೇಶನಕ್ಕೆ ಅವಾರ್ಡ್​ ಸಿಕ್ಕಿ ಸಮಯದಲ್ಲಿ ತರುಣ್​, ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು  ಎಂದು ಹೇಳಿದ್ದಾರೆ. 'ನನಗೆ ಮದುವೆ ಆಗಬಾರದು ಅಂತೇನೂ ಇಲ್ಲ. ಅಂಥ ನಿರ್ಧಾರ ನಾನು ಮಾಡಿಲ್ಲ. ನಾನು ಇಷ್ಟಪಟ್ಟಂಥ ಹುಡುಗಿ ಸಿಕ್ಕಿರೆ ಖಂಡಿತವಾಗಿಯೂ ಮದುವೆಗೆ ರೆಡಿ' ಎಂದಿದ್ದಾರೆ. ಅವರೇ ಹೇಳಿರುವ ಪ್ರಕಾರ ಕನಸಿನ ಹುಡುಗಿಯಲ್ಲಿ ಎರಡೇ ಕ್ವಾಲಿಟಿ ಇದ್ದರೆ ಸಾಕಂತೆ. 

ಒಂದು ಅವರ ಕೆಲಸವನ್ನು ಗೌರವಿಸಬೇಕು, ಇನ್ನೊಂದು ನನಗೆ ಅಮ್ಮನೇ ಎಲ್ಲವೂ ಆದ್ದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು' ಎಂದಿದ್ದರು. ಜತೆಗೆ, 'ಅಂಥ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ. ಬೇಕಿದ್ದರೆ ನಾಲ್ಕು ಗೋಡೆಗಳ ನಡುವೆ ಅವಳ ಕಾಲು ಹಿಡಿದುಕೊಳ್ಳಲೂ ರೆಡಿ' ಎಂದು ತಮಾಷೆ ಕೂಡ ಮಾಡಿದ್ದಾರೆ. ಆಗ ಆ್ಯಂಕರ್​ ನಿರಂಜನ್​ ಅವರು 'ನೀವು ಹೇಳಿದಂತ ಕ್ವಾಲಿಟಿಯ ಹುಡುಗಿ ಯಾರಾದ್ರೂ ಇದ್ದಾರಾ' ಎಂದಿದ್ದಕ್ಕೆ ತರುಣ್ ನಕ್ಕು ಸುಮ್ಮನಾಗಿದ್ದರು.

ನಗುವಿನ ಒಡೆಯ, ಈ ಹಾಡನ್ನು ಕೇಳಿ ನಾನು ಮೂಕ ವಿಸ್ಮಿತಳಾದೆ; ಅಪ್ಪು ತೆಲುಗು ಹಾಡಿಗೆ ಜೈಕಾರ! 

ಆದರೆ, ಈಗ ಬಂದ ಸುದ್ದಿಯ ಪ್ರಕಾರ, ನಿರ್ದೇಶಕ ತರುಣ್ ಸುಧೀರ್ ಅವರು ನಾಳೆ, ಅಂದರೆ 22 ಜುಲೈ 2024ರಂದು ತಾವು ಮದುವೆಯಾಗುವ ಹುಡುಗಿಯ ಹೆಸರು ಹಾಗೂ ಉಳಿದ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳಲಿದ್ದಾರೆ. ಹಾಗಂತ, ಸೋಷಿಯಲ್ ಮೀಡಿಯಾದಲ್ಲಿ ಅವರೇ ಪೋಸ್ಟ್ ಹಾಕಿಕೊಂಡಿದ್ದಾರೆ. ಬಹಳಷ್ಟು ಜನರು ತರುಣ್ ಸುಧೀರ್ ಕನಸಿನ ಹುಡುಗಿ ಯಾರಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರೆ ಅವರಿಗೆ ನಾಳೆ ಉತ್ತರ ಸೊಗಲಿದೆ ಎನ್ನಲಾಗಿದೆ. 

click me!