Abbabba Movie: ಜು.1ರಂದು ಕೆಎಂ ಚೈತನ್ಯ ನಿರ್ದೇಶನದ 'ಅಬ್ಬಬ್ಬ' ಚಿತ್ರ ತೆರೆಗೆ

Published : Jun 17, 2022, 10:03 AM IST
Abbabba Movie: ಜು.1ರಂದು ಕೆಎಂ ಚೈತನ್ಯ ನಿರ್ದೇಶನದ 'ಅಬ್ಬಬ್ಬ' ಚಿತ್ರ ತೆರೆಗೆ

ಸಾರಾಂಶ

ಸಂವೇದನಾಶೀಲ ನಿರ್ದೇಶಕ ಕೆಎಂ ಚೈತನ್ಯ ಈ ಸಲ ಕಾಮಿಡಿ ಸಿನಿಮಾ ಜೊತೆ ಬಂದಿದ್ದಾರೆ. ಅವರು ನಿರ್ದೇಶಿಸಿರುವ ‘ಅಬ್ಬಬ್ಬ’ ಜುಲೈ 1ರಂದು ಬಿಡುಗಡೆಯಾಗಲಿದೆ. ಇಂಟರೆಸ್ಟಿಂಗ್‌ ಎಂದರೆ ಈ ಸಿನಿಮಾ ನಿರ್ಮಿಸಿದ್ದು ಮಲಯಾಳಂ ನಟಿ ಆ್ಯನ್‌ ಅಗಸ್ಟಿನ್‌. 

ಸಂವೇದನಾಶೀಲ ನಿರ್ದೇಶಕ ಕೆಎಂ ಚೈತನ್ಯ ಈ ಸಲ ಕಾಮಿಡಿ ಸಿನಿಮಾ ಜೊತೆ ಬಂದಿದ್ದಾರೆ. ಅವರು ನಿರ್ದೇಶಿಸಿರುವ ‘ಅಬ್ಬಬ್ಬ’ ಜುಲೈ 1ರಂದು ಬಿಡುಗಡೆಯಾಗಲಿದೆ. ಇಂಟರೆಸ್ಟಿಂಗ್‌ ಎಂದರೆ ಈ ಸಿನಿಮಾ ನಿರ್ಮಿಸಿದ್ದು ಮಲಯಾಳಂ ನಟಿ ಆ್ಯನ್‌ ಅಗಸ್ಟಿನ್‌. ಆ್ಯನ್‌ ಅಗಸ್ಟಿನ್‌ ಮತ್ತು ಜಾಹೀರಾತು ಸಿನಿಮಾಗಳ ನಿರ್ದೇಶಕ ವಿಕೇಕ್‌ ಥಾಮಸ್‌ ಸೇರಿಕೊಂಡು ಈ ಕನ್ನಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಆಯೋಜನೆಯಾಗಿತ್ತು. ‘ಇದು ನನ್ನ ಒಂಭತ್ತನೇ ಸಿನಿಮಾ. ಕೊರೋನಾ ನಂತರದ ಈ ದಿನಗಳಲ್ಲಿ ಪ್ರತಿಯೊಬ್ಬರು ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಈ ಇನ್ನಿಂಗ್ಸ್‌ ನಗುವಿನ ಮೂಲಕ ಶುರು ಮಾಡೋಣ ಎಂದುಕೊಂಡು ಈ ಸಿನಿಮಾ ಮಾಡಿದ್ದೇನೆ. ಹಾಗೂ ಯುವಕರನ್ನು ಒಳಗೊಂಡಿರುವ ಕಾಮಿಡಿ ಸಿನಿಮಾ ಇದು. ಕಾಮಿಡಿ ಸಿನಿಮಾಗಳಲ್ಲಿ ನಟರು ಮತ್ತು ಸ್ಕ್ರಿಪ್ಟ್‌ ವರ್ಕ್‌ಗೆ ಬಹಳ ಪ್ರಾಮುಖ್ಯತೆ ಇರುತ್ತೆ. ಕೇವಲ ಟೆಕ್ನಿಕಲ್‌ ವರ್ಕ್‌ನಿಂದ ಜನರನ್ನು ನಗಿಸಲು ಸಾಧ್ಯವಿಲ್ಲ. ನಟ ಹೇಗೆ ನಟಿಸುತ್ತಾರೆ ಎನ್ನುವುದರ ಮೇಲೆ ಪ್ರೇಕ್ಷಕರು ನಗುತ್ತಾರೆ. ನಟರ ಜತೆ ಇಂಥ ಸಿನಿಮಾದಲ್ಲಿ ಕೆಲಸ ಮಾಡುವುದು ಚಾಲೆಂಜಿಂಗ್‌ ಕೆಲಸ’ ಎಂದರು ಕೆಎಂ ಚೈತನ್ಯ.

ಕೆ.ಎಂ. ಚೈತನ್ಯ ನಿರ್ದೇಶನದ ಕಾಮಿಡಿ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್

ಚಿತ್ರದ ಪ್ರಮುಖ ಪಾತ್ರಧಾರಿ ಲಿಖಿತ್‌ ಶೆಟ್ಟಿ, ‘ಈ ಸಿನಿಮಾ ನನ್ನ ಕೆರಿಯರ್‌ನಲ್ಲಿ ತುಂಬಾ ದೊಡ್ಡ ಪಾತ್ರ ವಹಿಸಲಿದೆ’ ಎಂದರು. ಇನ್ನು ಸಿನಿಮಾದ ಬಗ್ಗೆ  ಮಾತನಾಡಿದ ಶರತ್ ಲೋಹಿತಾಶ್ವ, ನಿರ್ದೇಶಕ ಕೆ ಎಂ ಚೈತನ್ಯ ನನಗೆ ಇಂತ ಪಾತ್ರ ಕೊಡ್ತಾರೆ ಅಂತ ಅಂದಿಕೊಂಡಿರಲಿಲ್ಲ. ವಿಭಿನ್ನವಾದ ಪಾತ್ರ ಇದಾಗಿದೆ. ತುಂಬಾ ಸ್ಟ್ರಿಕ್ಟ್ ಆಗಿರುವ ವ್ಯಕ್ತಿ ಸನ್ನಿವೇಶಗಳಿಗೆ ಸಿಲುಕಿಕೊಂಡು ಒದ್ದಾಡುವ ಪಾತ್ರ ಇದಾಗಿದೆ. ಹಾಸ್ಯಮಯವಾಗಿ ತೋರಿಸಿದ್ದಾರೆ ನಿರ್ದೇಶಕ ಚೈತನ್ಯ. ಇದುವರೆಗೂ ಮಾಡಿರುವ ಪಾತ್ರಗಳಲ್ಲೆ ಇದು ಬಹಳ ವಿಭಿನ್ನವಾಗಿದೆ ಎಂದು ಶರತ್ ಹೇಳಿದರು. ಹುಡುಗರ ಹಾಗೆ ನನ್ನನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ ಎಂದು ಶರತ್ ಲೋಹಿತಾಶ್ವ ಹೇಳಿದ್ದಾರೆ.  

Wedding Gift: ಡಿವೋರ್ಸ್‌ನ ಮಾನಸಿಕ ಒತ್ತಡ ನಾನೂ ಅನುಭವಿಸಿದ್ದೀನಿ: ಸೋನು ಗೌಡ

ನಾಯಕ ನಟಿ ಅಮೃತಾ ಅಯ್ಯಂಗಾರ್‌ ಅಬ್ಬಬ್ಬಾ ಸಿನಿಮಾ ಯೂತ್ಸ್‌ಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ, ಶರತ್‌ ಲೋಹಿತಾಶ್ವ, ಧನರಾಜ್‌, ತಾಂಡವ್‌, ವಿಜಯ್‌ ಚೆಂಡೂರು, ಸಂಗೀತ ನಿರ್ದೇಶಕ ದೀಪಕ್‌ ಅಲೆಕ್ಸಾಂಡರ್‌, ಡಿಓಪಿ ಮನೋಹರ್‌ ಜೋಷಿ, ಸಂಭಾಷಣೆಕಾರ ಕೆ ಎಲ್‌ ರಾಜಶೇಖರ್‌, ಒಂದು ವಿಶೇಷ ಹಾಡಿನ ರಚನಕಾರ ಆಲ್‌ಓಕೆ ಇದ್ದರು. ಈ ಚಿತ್ರಕ್ಕೆ ಧನಂಜಯ್‌ ಒಂದು ಹಾಡನ್ನು ಬರೆದಿದ್ದು, ವಸಿಷ್ಠ ಸಿಂಹ ಹಾಡಿದ್ದು ವಿಶೇಷ. ಪಿಆರ್‌ಕೆ ಸಂಸ್ಥೆ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಕೆಆರ್‌ಜಿ ಸಂಸ್ಥೆ ಸಿನಿಮಾ ವಿತರಣೆ ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?