
ಪ್ರೀತಂ ತೆಗ್ಗಿನಮನೆ ನಿರ್ದೇಶನದ ‘ಮೇಡ್ ಇನ್ ಚೈನಾ’ ಚಿತ್ರ ಇಂದು (ಜೂ.17) ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಯ್ತು. ಈ ವೇಳೆ ಮಾತನಾಡಿದ ನಾಯಕ ನಾಗಭೂಷಣ್, ‘ನನಗೆ ಈವರೆಗೆ ಬರೀ ಕಾಮಿಡಿ ಪಾತ್ರಗಳು ಸಿಗುತ್ತಿದ್ದವು. ಈ ಪಾತ್ರ ಅವುಗಳಿಗಿಂತ ಭಿನ್ನ. ಎಮೋಶನಲ್, ಸೀರಿಯಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು. ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತದೆ. ಆತ ಕೋವಿಡ್ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಕಾರಣ, ಆತನ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಆತನ ಪತ್ನಿ ತುಂಬು ಗರ್ಭಿಣಿ.
ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ತೊಳಲಾಟ, ದುಗುಡ, ದುಃಖದ ಕಂಟೆಂಟ್ ಟ್ರೇಲರ್ ಲ್ಲಿ ಕಟ್ಟಿಕೊಡಲಾಗಿದೆ. ‘ಅಯೋಗ್ಯ’, ಚಮಕ್, ರತ್ನಮಂಜರಿ ಸಿನಿಮಾಗಳಿಗೆ ಛಾಯಾಗ್ರಾಹಕ ಕೆಲಸ ಮಾಡಿದ್ದ ಪ್ರೀತಮ್ ತೆಗ್ಗಿನಮನೆ ಸ್ವತಂತ್ರ ನಿರ್ದೇಶಕರಾಗಿ ಮೇಡ್ ಇನ್ ಚೈನಾ ಮೂಲಕ ಬಡ್ತಿ ಪಡೆದಿದ್ದು, ನಿರ್ದೇಶನದ ಜೊತೆಗೆ ಗ್ರಾಫಿಕ್, ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಪ್ರೀತಮ್ ನಿಭಾಯಿಸಿದ್ದಾರೆ. ನಿರ್ದೇಶಕ ಪ್ರೀತಂ ತೆಗ್ಗಿನಮನೆ, ‘ಈ ಕಥೆ ಬರೆಯೋದೇ ನನ್ನ ಪಾಲಿಗೆ ಚಾಲೆಂಜ್ ಆಗಿತ್ತು. ಆ ನಾಯಕನ ಸ್ಥಿತಿಯನ್ನು ಊಹಿಸಿಕೊಳ್ಳುತ್ತಾ ಈ ಕತೆ ಬರೆದೆ. ವಚ್ರ್ಯುವಲ್ ಮಾದರಿಯ ಮೇಕಿಂಗ್ ಇನ್ನೊಂದು ಬಗೆಯ ಚಾಲೆಂಜ್ ಆಗಿತ್ತು’ ಎಂದರು.
Priyanka Thimmesh: ಕಾಮಿಡಿ ಕಥಾಹಂದರದ 'ಮೇಡ್ ಇನ್ ಚೈನಾ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!
ಅಲ್ಲದೇ ‘ಮಲಯಾಳಂನಲ್ಲಿ ‘ಸಿ ಯೂ ಸೂನ್’ ಹಾಗೂ ಬಾಲಿವುಡ್‌ನಲ್ಲಿ ‘ಸರ್ಚಿಂಗ್’ ಎನ್ನುವ ವರ್ಚುವಲ್ ಸಿನಿಮಾಗಳು ಬಂದಿದ್ದವು. ಇವರೆಡೂ ಸಿನಿಮಾಗಳು ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಸಿನಿಮಾಗಳಾಗಿದ್ದವು. ಇಂಥ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸೂಕ್ತವಾದುವು. ಆದರೆ ಚಿತ್ರಮಂದಿರಗಳಲ್ಲೂ ಇಂಥ ಸಿನಿಮಾವನ್ನು ಜನರು ವೀಕ್ಷಿಸಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ನಮ್ಮ ಸಿನಿಮಾವನ್ನು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಫ್ಯಾಮಿಲಿ ಡ್ರಾಮಾ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ ಎಂದರು.
ಟಿ.ಎಸ್.ಚಂದ್ರಶೇಖರ್, ಕ್ರಿಸ್ಟಲ್ ಪಾರ್ಕ್ ಸಂಸ್ಥೆ ಹೊಸ ಹೊಸ ತಂತ್ರಜ್ಞನರಿಗೆ ಅವಕಾಶ ನೀಡುತ್ತಾ ಬಂದಿದೆ. ಅದರ ಮುಂದುವರೆದ ಭಾಗವಾಗಿ ಮೇಡ್ ಇನ್ ಚೈನಾ ಅದೇ ಪುನಾರ್ವತನೆ ದೊಡ್ಡ ಮಟ್ಟದಲ್ಲಿ ಆಗಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇದು ಪ್ರಥಮ ಬಾರಿಗೆ ತಯಾರಾಗಿರುವ ಕನ್ನಡದ ಮೊದಲ ವರ್ಚುವಲ್ ಚಿತ್ರ. ಪ್ರೀತಮ್ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಲವಾರು ಪ್ರಥಮಗಳಿಗೆ ಈ ಸಿನಿಮಾ ಸಾಕ್ಷಿಯಾಗಿದೆ. ಹಾಲಿವುಡ್ ಹಾಗೂ ಮಾಲಿವುಡ್‌ನಲ್ಲಿ ವರ್ಚುವಲ್ ಸಿನಿಮಾ ಯಶಸ್ವಿಯಾಗಿದ್ದು, ಕನ್ನಡದಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ.
Priyanka Thimmesh: 'ಮೇಡ್ ಇನ್ ಚೈನಾ' ಕನ್ನಡದ ಮೊದಲ ವರ್ಚ್ಯುವಲ್ ಸಿನಿಮಾ!
ಮೇಡ್ ಇನ್ ಚೈನಾ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ. ಇನ್ನು ಫಿಲಂ ಚೇಂಬರ್ ಅಧ್ಯಕ್ಷ ಭಾ ಮ ಹರೀಶ್, ನಿರ್ಮಾಪಕ ನಂದಕಿಶೋರ್, ಸಿನಿಮಾ ಅರ್ಪಣೆ ಮಾಡಿದ ಟಿ ಆರ್ ಚಂದ್ರಶೇಖರ್, ನಟಿ ಪ್ರಿಯಾಂಕ ತಿಮ್ಮೇಶ್ ಹಾಗೂ ಚಿತ್ರತಂಡದವರು ಹಾಜರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.