ರಾಜಕೀಯಕ್ಕೆ ಕಾಲಿಟ್ಟ ರಿಷಿ; 4 ಸಾವಿರ ಕೋಟಿಗೆ ವಿಧಾನಸೌಧ ಮಾರಿ ಸಾಲ ತೀರಿಸುತ್ತೀನಿ ಎಂದ ನಟ

Published : Apr 04, 2023, 12:11 PM IST
ರಾಜಕೀಯಕ್ಕೆ ಕಾಲಿಟ್ಟ ರಿಷಿ; 4 ಸಾವಿರ ಕೋಟಿಗೆ ವಿಧಾನಸೌಧ ಮಾರಿ ಸಾಲ ತೀರಿಸುತ್ತೀನಿ ಎಂದ ನಟ

ಸಾರಾಂಶ

ವೈರಲ್ ಆಯ್ತು ಜೆಂಟಲ್‌ಮ್ಯಾನ್ ರಾಮಾ ವಿಡಿಯೋ. ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಸಿನಿಮಾ ರಂಗದಲ್ಲಿ ಅದ್ಭುತ ಮಿಸ್ ಆಗುತ್ತ ಎಂದ ನೆಟ್ಟಿಗರು.... 

2017ರಲ್ಲಿ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ರಿಷಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೋಡಿ ಡಿಫರೆಂಟ್ ಆಂಡ್ ಕ್ರಿಯೇಟಿವ್ ನಾಯಕ ಎನ್ನುವ ಹೆಸರು ಪಡೆದುಕೊಂಡಿದ್ದಾರೆ.  ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ, ನೋಡಿ ಸ್ವಾಮಿ ಇವರು ಇರೋದೇ ಹೀಗೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀ ರಾಮ ನವಮಿ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ.  ಅದೇ ರಾಮನ ಅವತಾರ ಎಂದು... 

ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಧಾನಸೌಧ ಮಾರಬೇಕು ಎಂದು ಬರೆದುಕೊಂಡಿದ್ದಾರೆ. 'ನೋಡ್ರೀ ನಮ್ಮ ರಾಜ್ಯದ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಬೇಕು ಅಂದ್ರೆ ಫಸ್ಟು ನಾವು ವಿಧಾನಸೌಧನ ಮಾರಬೇಕು. ಈ ರೀತಿ ಮಾತನಾಡುತ್ತಿರುವುದಕ್ಕೆ ನಾನು ಯಾರೆಂದು ಕೇಳುತ್ತಿದ್ದೀರಾ? ನಮಸ್ಕಾರ ನನ್ನ ಹೆಸರು ರಾಮಕೃಷ್ಣ ಎಂದು ಊರಿನಲ್ಲಿ ಎಲ್ಲರೂ ನನ್ನನ್ನು ಜೆಂಟಲ್‌ಮ್ಯಾನ್‌ ರಾಮಾ ಎಂದು ಕರೆಯುತ್ತಾರೆ. ನೋಡಿ ಈ ಜಾಟ್‌ಜಿಪಿಟಿ ಬಂದ್ಮೇಲೆ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಬೇಜಾರ್ ಆಗಲ್ವಾ ನನಗೆ? ನನ್ನ ಹೃದಯಕ್ಕೆ ಪೇನ್ ಆಗಲ್ವಾ? ಎಲ್ಲೇ ಕೆಲಸಕ್ಕೆ ಅಪ್ಲೈ ಮಾಡಿದ್ದರೂ ಏನು ಓದಿದ್ಯಾ ಎಂದು ಕೇಳುತ್ತಾರೆ. ಅದಿಕ್ಕೆ ನಿರ್ಧಾರ ಮಾಡಿದ್ದೀನಿ ಯಾರೂ ಬಂದು ನನ್ನನ್ನು ಏನು ಓದಿರುವೆ ಎಂದು ಕೇಳಬಾರದು ಅಂತ ಕೆಲಸ ಮಾಡುತ್ತೀನಿ .....ಹೌದು ಎಲೆಕ್ಷನ್ ನಿಂತುಕೊಳ್ಳುತ್ತೀನಿ' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿ ಮುಖ್ಯಸ್ಥರ ಸ್ಥಾನಕ್ಕೆ ಪರಮ್ ರಾಜೀನಾಮೆ; 10 ವರ್ಷಗಳ ಜರ್ನಿ ನೆನೆದು ಭಾವುಕ

'ಮೊನ್ನೆ ದಿನಾಂಕ ಅನೌನ್ಸ್ ಮಾಡಿದ್ದಾರೆ. ನಾನು ಮೊದಲು ವಿಧಾನಸೌಧವನ್ನು ನಾಲ್ಕು ಸಾವಿರ ಕೋಟಿಗೆ ಮಾರಾಟ ಮಾಡ್ತೀನಿ. ಈಗ ಎಲ್ಲ ಕಡೆ ವರ್ಕ್‌ ಫ್ರಂ ಹೋಮ್ ಕಲ್ಚರ್ ಬಂದಿದೆ ತಾನೆ ಎಲ್ಲರೂ ಮನೆಯಿಂದ ಕೆಲಸ ಮಾಡ್ತಾರೆ ಅಂದ್ಮೇಲೆ ನಮ್ಮಂತ ಲೀಡರ್‌ಗಳಿಗೆ ಸೆಂಟರ್‌ನಲ್ಲಿ ಅಷ್ಟು ದೊಡ್ಡ ಆಫೀಸ್ ಯಾಕೆ ಬೇಕು? ಬೇಡ ತಾನೆ?ಆಮೇಲೆ ವಿಧಾನಸೌಧ ಮಾರಿದ ಮೇಲೆ ದುಡ್ಡು ಬರುತ್ತೆ ಅಲ್ವಾ ಅ ಹಣದಿಂದ ನಮ್ಮೆಲ್ಲರ ಸಾಲ ತೀರಿಸುವೆ. ಈ ಆಧಾರ್ ಕಾರ್ಡ್‌ ಪ್ಯಾನ್ ಕಾರ್ಡ್‌ ಲಿಂಗ್ ಇದ್ಯಲ್ಲ ಅದನ್ನು ಫ್ರೀ ಮಾಡಿಸುತ್ತೀನಿ. ಪಕ್ಕಾ ಪ್ರಾಮಿಸ್. ನಿಮಗೆ ನನ್ನಂತ innovative ಲೀಡರ್‌ ಬೇಕು ಅಂದ್ರೆ ಮೊದಲು ನೀವು ನನಗೆ ವೋಟ್ ಮಾಡಬೇಕು' ಎಂದು ರಿಷಿ ಹೇಳಿದ್ದಾರೆ. 

ನನಗೆ ಗಂಡ ಬೇಡವೇ ಬೇಡ; ಭಾರತಿ ಸಿಂಗ್‌ - ಕರೀನಾ ಕಪೂರ್ ವೈರಲ್ ವಿಡಿಯೋ!

ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದ್ದು ನಿಜಕ್ಕೂ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂದು ಕನ್ಫ್ಯೂಸ್ ಆಗಿದ್ದಾರೆ. 'ಶ್ರೀರಾಮನ ಬೋಧನೆಗಳು ಮತ್ತು ಮೌಲ್ಯಗಳು ನಮ್ಮನ್ನು ತಲೆಮಾರುಗಳಿಂದ ಪ್ರಭಾವಿತಗೊಳಿಸಿವೆ ಹಾಗು ಸ್ಫೂರ್ತಿ ನೀಡಿವೆ. ಅವರ ಪರಂಪರೆಗೆ ಗೌರವ ಸಲ್ಲಿಸಲು ನಾವು ಹೆಮ್ಮೆಪಡುತ್ತೇವೆ. ಪ್ರತಿಭಾವಂತ ನಟರ ಸಮೂಹದೊಂದಿಗೆ ಸಾಕಷ್ಟು ಮನರಂಜನೆಯನ್ನು ಒದಗಿಸುವುದರಲ್ಲಿ ರಾಮನ ಅವತಾರ ಚಿತ್ರವು ಖಂಡಿತವಾಗಿಯೂ ಯಶಸ್ವಿಯಾಗಲಿದೆ ಎಂಬ ಭರವಸೆ ನಮಗಿದೆ. ಶೀಘ್ರದಲ್ಲೇ ಚಿತ್ರದ teaser ನಿಮ್ಮ ಮುಂದೆ ಬರಲಿದೆ. ನಿಮ್ಮ ಪ್ರೀತಿ ಪ್ರೋತ್ಸಾಹ ನಮ್ಮ ಚಿತ್ರದ ಮೇಲೆ ಇರಲಿ' ಎಂದು ಪೋಸ್ಟರ್ ರಿವೀಲ್ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!