Chaitra Achar: ಸಪ್ತಸಾಗರದಾಚೆ ಬೆಡಗಿಯ ಹಾಟ್ ಬಿಕಿನಿ ಲುಕ್‌ ಗೆ ನೆಟ್ಟಿಗರು ಶಾಕ್!

By Suvarna News  |  First Published Apr 3, 2023, 10:55 AM IST

ಸಪ್ತಸಾಗರದಾಚೆ ಸಿನಿಮಾದಲ್ಲಿ ಸುರಭಿಯಾಗಿ ತನ್ನ ಒಂದು ಲುಕ್‌ನಿಂದಲೇ ಗಮನ ಸೆಳೆದ ನಟಿ ಚೈತ್ರಾ ಆಚಾರ್. ಗಿಲ್ಕಿ ಸಿನಿಮಾದಲ್ಲಿ ಈಕೆಯ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಬಿಕಿನಿ ಡ್ರೆಸ್‌ನಲ್ಲಿ ಈಕೆಯನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.


ಚೈತ್ರಾ ಜಿ ಆಚಾರ್ ಚಿತ್ರರಂಗದಕ್ಕೆ ಬಂದು ಒಂದಿಷ್ಟು ವರ್ಷಗಳಾದರೂ ಈಕೆಯನ್ನು ಹೆಚ್ಚು ಜನರಿಗೆ ತಲುಪಿಸಿದ್ದು ಇನ್ನೂ ರಿಲೀಸ್ ಆಗದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ. ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಲ್ಲಿ ಈಕೆ ಎರಡನೇ ನಾಯಕಿ. ಈಕೆಯ ಒಂದು ಲುಕ್‌ ಅನ್ನಷ್ಟೇ ಚಿತ್ರತಂಡ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಈಕೆ ತೋರಿದ ಎಕ್ಸ್‌ಪ್ರೆಶನ್ ನೋಡಿಯೇ ಜನರಿಗೆ ಈಕೆ ಇಷ್ಟವಾಗಿ ಬಿಟ್ಟಿದ್ದಾರೆ. ಹಾಗೆ ನೋಡಿದರೆ ಚೈತ್ರಾ ಆರಂಭದಿಂದಲೂ ತನ್ನ ಅಭಿನಯದಿಂದ ಗಮನ ಸೆಳೆದವರು. 'ಗಿಲ್ಕಿ' ಅನ್ನೋ ಸಿನಿಮಾದಲ್ಲಿ ಮಾನಸಿಕ ಸಮಸ್ಯೆ ಇರೋ ಹುಡುಗಿಯ ಪಾತ್ರ ಈಕೆ ಅಭಿನಯಿಸಿದ ಪರಿಗೆ ಬೆರಗಾಗದವರಿಲ್ಲ. ಆದರೆ ದುರಾದೃಷ್ಟವಶಾತ್ ಅದ್ಭುತ ಅಭಿನಯ, ಉತ್ತಮ ಚಿತ್ರಕಥೆ ಇದ್ದ ಆ ಸಿನಿಮಾ ಹೆಚ್ಚು ಜನರನ್ನು ತಲುಪಲೇ ಇಲ್ಲ. ಆದರೆ ನೋಡಿದವರು ಮಾತ್ರ ಹೀರೋ ಹಾಗೂ ನಾಯಕಿ ಚೈತ್ರಾ ಆಚಾರ್ ನಟನೆಗೆ ಹ್ಯಾಟ್ಸಾಪ್ ಅಂದರು.

ವಿಶ್ವದ ಗಮನ ಸೆಳೆದ ರಾಜ್ ಬಿ ಶೆಟ್ಟಿ ನಟನೆಯ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿದ್ರೆ ಅದರಲ್ಲಿ 'ಮಾದೇವ ಮಾದೇವ.. ಸೋಜುಗಾದ ಸೂಜಿಮಲ್ಲಿಗೆ' ಹಾಡು ಕೇಳಿರಬಹುದು. ಆ ಹಾಡನ್ನು ಹಾಡಿರೋದು ಚೈತ್ರಾ ಆಚಾರ್. ಹೌದು ಈ ಪ್ರತಿಭಾವಂತ ನಟಿ ಸಿಂಗರ್ ಕೂಡ ಹೌದು. ಆಫ್ ಬೀಟ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದ ಚೈತ್ರಾ ಆಚಾರ್ ಅವರ ಬಿಕಿನಿ ತೊಟ್ಟ ಬಿಂದಾಸ್ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡ್ತಿದೆ. ಈ ಚೆಲುವೆಯ ಈಜುಡುಗೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚೈತ್ರಾ ಕಾಲೇಜು ದಿನಗಳಲ್ಲೇ ವೆಬ್‌ ಸೀರೀಸ್‌ನಲ್ಲಿ ನಟಿಸಲು ಆರಂಭಿಸಿದರು.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Chaithra J Achar (@chaithra.j.achar)

 

'ಮಹಿರ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. 'ಸಪ್ತಸಾಗರದಾಚೆ' ಸಿನಿಮಾದಲ್ಲಿ ಸದಾ ಸೀರೆ, ಈ ಹಿಂದಿನ ಚಿತ್ರಗಳಲ್ಲಿ ಸಲ್ವಾರ್‌ನಂಥಾ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಏಕ್‌ದಮ್ ಬಿಕಿನಿಯಲ್ಲಿ ದರ್ಶನ ಕೊಟ್ಟಿರೋದು ನೋಡಿ ನಟ್ಟಿಗರು ಶಾಕ್ ಆಗಿದ್ದಾರೆ. ಇತ್ತೀಚೆಗೆ 'ಸಪ್ತಸಾಗರದಾಚೆ ಎಲ್ಲೋ' ಶೂಟಿಂಗ್ ಮುಗಿಸಿರುವ ಚೆಲುವೆ ವಕೇಷನ್ ಮೂಡ್‌ನಲ್ಲಿದ್ದಾರೆ.

ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ; ರಮ್ಯಾ ಇಂಗ್ಲಿಷ್‌ ಎಪಿಸೋಡ್‌ಗೆ ರಮೇಶ್ ರಿಯಾಕ್ಷನ್ ವೈರಲ್

ವಿದೇಶದದಲ್ಲಿ ವೆಕೇಶನ್ ಎನ್‌ಜಾಯ್ ಮಾಡ್ತಿರೋ ಈ ಬೆಡಗಿ ಇನ್‌ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಟೂ ಪೀಸ್ ಬಿಕಿನಿ ತೊಟ್ಟು ಬೀಚ್‌ನಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಜತೆಗೆ ಹಸಿರು ಬಣ್ಣದ ಮೊನಾಕಿನಿ ತೊಟ್ಟು ಚೈತ್ರಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಚೆಲುವೆಯ ಬೋಲ್ಡ್ (Bold)ಅವತಾರ ಕಂಡು ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು ನಟಿಯ ಹೊಸ ಅವತಾರ ಕಂಡು ಅಚ್ಚರಿಗೊಂಡಿದ್ದಾರೆ.

ಸದ್ಯ ಚೈತ್ರಾ ಜೆ. ಆಚಾರ್ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ(Release) ರೆಡಿ ಆಗ್ತಿದೆ. 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್‌ಡೇ ಟು ಮಿ', 'ಯಾರಿಗೂ ಹೇಳ್ಬೇಡಿ', 'ಅಕಟಕಟ' ಹೀಗೆ ಈಕೆ ನಟಿಸುತ್ತಿರುವ ನಾಲ್ಕೈದು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಚಿಕ್ಕಂದಿನಿಂದಲೂ ಚೈತ್ರಾಗೆ ಸಂಗೀತದ(Music) ಒಲವಿತ್ತು. ಕರ್ನಾಟಿಕ್ ಮ್ಯೂಸಿಕ್ ಕಲಿತಿರುವ ಚೆಲುವೆ 'ಸಾರ್ವಜನಿಕರಿಗೆ ಸುವರ್ಣಾವಕಾಶ', 'ಮಾಯಾಬಜಾರ್- 2016' ಸಿನಿಮಾಗಳಲ್ಲಿ ಹಾಡಿದ್ದಾರೆ. 'ಗರುಡಗಮನ ವೃಷಭವಾಹನ' ಚಿತ್ರದ 'ಸೋಜುಗಾದ ಸೂಜಿಮಲ್ಲಿಗೆ' ಹಾಡಿನ ಗಾಯನಕ್ಕೆ 2 ವರ್ಷಗಳ ಹಿಂದೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದರು. 'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಸುರಭಿ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಸೀರೆ ಉಟ್ಟು ಮಲ್ಲಿಗೆ ಮುಡಿದು ದರ್ಶನ ಕೊಟ್ಟಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಚೈತ್ರಾ ಪಾತ್ರಕ್ಕೂ ಬಹಳ ಪ್ರಾಮುಖ್ಯತೆ ಇದೆ. ಈ ಸಿನಿಮಾದಲ್ಲಿನ ಆಕೆಯ ಪಾತ್ರ ನೋಡಬೇಕಾದ್ರೆ ವರ್ಷಾಂತ್ಯದವರೆಗೆ ಕಾಯದೆ ವಿಧಿಯಿಲ್ಲ.

Neetu Shetty: 'ಮದುವೆ ವಿಡಿಯೋ' ಶೇರ್​ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ

click me!