ರಿಷಬ್ ಶೆಟ್ಟಿ ಬಿಟ್ಟು ಕಾಂತಾರದಲ್ಲಿ ಯಾರಿಗೂ ನಾನು ಬೇಡವಾಗಿತ್ತು, ಮೂಗು ಚುಚ್ಚಿಸಲು ಅವರೇ ಕಾರಣ: ಸಪ್ತಮಿ ಗೌಡ

Published : Oct 13, 2022, 04:40 PM IST
ರಿಷಬ್ ಶೆಟ್ಟಿ ಬಿಟ್ಟು ಕಾಂತಾರದಲ್ಲಿ ಯಾರಿಗೂ ನಾನು ಬೇಡವಾಗಿತ್ತು, ಮೂಗು ಚುಚ್ಚಿಸಲು ಅವರೇ ಕಾರಣ: ಸಪ್ತಮಿ ಗೌಡ

ಸಾರಾಂಶ

ಲೀಲಾ ಪಾತ್ರಕ್ಕೆ ಆಯ್ಕೆ ಆಗಿದ್ದು ಹೇಗೆ? ಕುಂದಾಪುರದಲ್ಲಿ ರಿಷಬ್ ಶೆಟ್ಟಿ ಎಷ್ಟು ತಯಾರಿ ಕೊಟ್ಟಿದ್ದಾರೆ?

ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಕಾಂತಾರ (Kantara) ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ದಿನದಿಂದಲ್ಲೂ ಬಾಕ್ಸ್‌ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿರುವ ಸಿನಿಮಾದಲ್ಲಿ ಪ್ರತಿಯೊಬ್ಬ ಪಾತ್ರಧಾರಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಅದರಲ್ಲೂ ಫಾರೆಸ್ಟ್‌ ಆಫೀಸರ್, ಸೈಲೆಂಟ್ ಹುಡುಗಿ ಲೀಲಾ (Leela) ಸಿನಿ ರಸಿಕರ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟಕ್ಕೂ ಲೀಲಾ ಪಾತ್ರಕ್ಕೆ ಸಪ್ತಮಿ ಆಯ್ಕೆ ಆಗಿದ್ದು ಹೇಗೆ?

'ಲೀಲಾ ಅನ್ನೋ ಪಾತ್ರಕ್ಕೆ ಒಂದು ಲುಕ್ ಕ್ರಿಯೇಟ್ ಮಾಡಿದ್ದರು. 90ರ ದಶಕದಲ್ಲಿ ಮೊದಲ ಹುಡುಗಿ ಫಾರೆಸ್ಟ್‌ ಆಫೀಸರ್‌ ಆಗಿರುವುದು ಹೀಗಾಗಿ ಹಳ್ಳಿ ಹುಡುಗಿ ಕಮ್ ವಿದ್ಯಾವಂತೆ ರೀತಿ ಕಾಣಿಸಬೇಕು. ಡೀ-ಗ್ಲಾಮ್ ಲುಕ್ ಕೊಟ್ಟರೂ ಮುಖ ಚೆನ್ನಾಗಿ ಕಾಣಿಸಬೇಕು. ಲುಕ್ ಟೆಸ್ಟ್‌ ಮಾಡಿದಾಗ ರಿಷಬ್ ಶೆಟ್ಟಿ ಅವರು ಲುಕ್ ಒಪ್ಪಿಕೊಂಡರು ಆದರೆ ಸಮಸ್ಯೆ ಇದ್ದದ್ದು ನನ್ನ ಭಾಷೆಯಲ್ಲಿ. ಸಪ್ತಮಿ ಮತ್ತು ಲೀಲಾಗೆ ತುಂಬಾ ವ್ಯತ್ಯಾಸವಿದೆ. ಲೀಲಾ ಪಾತ್ರವನ್ನು ನಾನು ಹೇಗೆ ಮಾಡಿದೆ ಎಂದು ಗೊತ್ತಿಲ್ಲ. ಲೀಲಾ ತುಂಬಾ ಸೈಲೆಂಟ್, ಜಾಸ್ತಿ ಮಾತನಾಡುವುದು ಇಷ್ಟ ಇದ್ದವರು ಸೇಫ್ ಇರುವವರ ಜೊತೆ ಮಾತ್ರ.ಈ ಪಾತ್ರವನ್ನು ನಾನು ಹೇಗೆ ಕ್ರ್ಯಾಕ್ ಮಾಡುತ್ತೀನಿ ಅನ್ನೋದು ಚಾಲೆಂಜ್ ಆಗಿತ್ತು' ಎಂದು ಸಪ್ತಮಿ ಗೌಡ (Sapthami Gowda) ಖಾಸಗಿ ಯೂಟ್ಯೂಬ್‌ವೊಂದರಲ್ಲಿ ಮಾತನಾಡಿದ್ದಾರೆ.

'ಲುಕ್ ಟೆಸ್ಟ್‌ ಆದ ಮೇಲೆ ಕಾಂತಾರ ತಂಡಕ್ಕೆ ನನ್ನನ್ನು ಪರಿಚಯ ಮಾಡಿಕೊಟ್ಟರು. ರಿಷಬ್ ಬಿಟ್ಟು ಬೇರೆ ಯಾರಿಗೂ ನಾನು ಬೇಡವಾಗಿತ್ತು. ಕಾಂತಾರದಲ್ಲಿ ಇರುವ ಪ್ರತಿ ಪಾತ್ರವೂ ಡಿಫರೆಂಟ್ ಆಗಿತ್ತು ಆದರೆ ಲೀಲಾ ಮಾತ್ರ ಪರ್ಫಾರ್ಮೆನ್ಸ್‌ ಮೇಲಿದೆ. ನಾಯಕಿ ಲುಕ್ ಓಕೆ ಆದರೆ ನಿರ್ದೇಕನಾಗಿ ನಾನು ಅವರಲ್ಲಿ ಕೆಲಸ ತೆಗೆಸುವೆ. ಒಂದು ತಿಂಗಳು ನನಗೆ ವರ್ಕ್‌ ಶಾಪ್ ಕೊಟ್ಟರು. ಮೊದಲ ದಿನ ನಾಯಕಿ ಕನ್ಫರ್ಮ್ ಮಾಡೋದು ಬೇಡ ಅಂದ್ರು ಆಮೇಲೆ ಎರಡನೇ ಸಲಕ್ಕೆ ಸಪ್ತಮಿ ಓಕೆ ಅಂದ್ರು. ಸಪ್ತಮಿನ ಆಯ್ಕೆ ಮಾಡಿರಲಿಲ್ಲ ಅಂದ್ರೆ ನಮಗೆ ದೊಡ್ಡ ನಷ್ಟ ಆಗುತ್ತಿತ್ತು. ಲೀಲಾ ವರ್ಕ್‌ಶಾಪ್‌ನ ವಿಡಿಯೋ ಮಾಡಲಾಗುತ್ತಿತ್ತು. ಕಾಂತಾರಕ್ಕೆ ಲೀಲಾ ಅನ್ನೋ ಪಾತ್ರಕ್ಕೆ ಸಪ್ತಮಿ ಬೇಡವಾಗಿತ್ತು ಆದರೆ ನನಗೆ ಕಾಂತಾರ ಮತ್ತು ಲೀಲಾ ನನಗೆ ಬೇಕಿತ್ತು. ಕಾಂತಾರ ಸಿನಿಮಾ ಅದಕ್ಕೆ ಏನ್ ಬೇಕು ಅದಾಗಿ ಅದೇ ತೆಗೆದುಕೊಂಡಿದೆ' ಎಂದು ಸಪ್ತಮಿ ಹೇಳಿದ್ದಾರೆ.

ವಿದೇಶದಲ್ಲಿ Kantara ಸಿನಿಮಾಗೆ ಟಿಕೆಟ್‌ ಸಿಗುತ್ತಿಲ್ಲ; ದೈವಗಳ ಬಗ್ಗೆ ನಾಯಕಿ ಸಪ್ತಮಿ ಗೌಡ ಮಾತು

ಮೂಗು ಬೊಟ್ಟು ಕಥೆ?

'ರಿಷಬ್ ಸರ್‌ ಮೇಲೆ ನನಗೆ 100% ನಂಬಿಕೆ ಇತ್ತು. ಸಪ್ತಮಿ ನೀನು ಇದನ್ನು ಮಾಡಬೇಕು ಅಂತ ರಿಷಬ್ ಸರ್ ಹೇಳಿದ್ರು ಅಂದ್ರೆ ಸಾಕು ನಾನು ಮಾಡ್ತೀನಿ. ಮೂಗು ಚುಚ್ಚಿಸಬೇಕು ಅಂದ್ರು ನಾನು ಸರಿ ಚುಚ್ಚಿಸುತ್ತೀನಿ ಅಂತ ಹೇಳಿದೆ. ಪರ್ಸನಲ್ ಮತ್ತು ಪ್ರೊಫೆಷನ್ ಅಗಿ ನಾನು ರಿಷಬ್ ಸರ್ ಮೇಲೆ ನನಗೆ ನಂಬಿಕೆ ಇದೆ. ಎರಡು ಕಡೆ ಚುಚ್ಚಿಸಿದ್ದರೆ ಚೆನ್ನಾಗಿ ಕಾಣಿಸುತ್ತಾ ಇಲ್ವೋ ಅನ್ನೋದು ಭಯ ಇತ್ತು ಒಂದು ಸತಿ ಫೋಟೋಶಾಪ್ ಮಾಡಿ ನೋಡೋಣ ಅಂದಿದ್ದರು ಅದಿಕ್ಕೆ ರಿಷಬ್ ಸರ್ ಏನ್ ಟ್ರೈಯಲ್ ಮಾಡುವುದು ಬೇಡ ಚೆನ್ನಾಗಿ ಕಾಣಿಸುತ್ತದೆ ಅಂತ ಹೇಳಿದ್ದರು. ನಾನು ಹೋಗಿ ಚುಚ್ಚಿಸಿಕೊಂಡು ಬಂದೆ. ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ನೋಡಿ ಸುಮಾರು ಜನ ಇಷ್ಟ ಪಟ್ಟಿದ್ದಾರೆ. ಈಗ ಪಬ್ಲಿಕ್‌ನಲ್ಲಿ ಜನರು ನಮಗೂ ಆಸೆ ಅಗುತ್ತಿದೆ ಚುಚ್ಚಿಸಿಕೊಳ್ಳಬೇಕು ಅಂತ ಹೇಳುತ್ತಿದ್ದಾರೆ ಇದರ ಅರ್ಥ ನನ್ನನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ' ಎಂದಿದ್ದಾರೆ ಸಪ್ತಮಿ ಗೌಡ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?