ಬನಾರಸ್ ಪ್ಯಾನ್ ಇಂಡಿಯಾ ಚಿತ್ರವೆಂಬುದು ಗೊತ್ತಿರೋ ವಿಚಾರ. ಕನ್ನಡವೂ ಸೇರಿ ಪಂಚ ಭಾಷೆಗಳಲ್ಲೂ ರಿಲೀಸ್ ಆಗ್ತಿರೋ ಈ ಚಿತ್ರದ ಇತರ ಭಾಷೆಯ ವಿತರಣೆ ಹಕ್ಕುಗಳು ಯಾವ ಸಂಸ್ಥೆಯ ಪಾಲಾಗತ್ತೆ ಅನ್ನೂ ಕುತೂಹಲ ವಿತ್ತು.
ಕನ್ನಡದ ಪ್ಯಾನ್ ಇಂಡಿಯಾ ಸಿನೆಮಾ ಬನಾರಸ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬ್ಯಾಕ್ ಟು ಬ್ಯಾಕ್ ದಾಖಲೆ ನಿರ್ಮಾಣದೊಂದಿಗೆ ಜಲಕ್ ಗಳನ್ನ ಸಿನಿಪ್ರಿಯರ ಮುಂದಿಟ್ಟು ನಿರೀಕ್ಷೆ ತುಸು ಹೆಚ್ಚೇ ಮಾಡಿರುವ ಜಯತೀರ್ಥ ನಿರ್ದೇಶನದ ಬನಾರಸ್ ಈಗ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿರೋದು ಗೊತ್ತಿರೋ ವಿಚಾರ. ಇದೇ ನವೆಂಬರ್ 4 ಕ್ಕೆ ತೆರೆಕಾಣೋಕೆ ಸಜ್ಜಾಗಿದೆ. ಬನಾರಸ್ ನ ವಿತರಣೆ ಹಕ್ಕನ್ನು ಕರ್ನಾಟಕದಲ್ಲಿ ಡಿ ಬೀಟ್ಸ್ ಸಂಸ್ಥೆ ಮತ್ತು ಕೇರಳದಲ್ಲಿ ಮುಲಕುಪ್ಪಡಮ್ ಸಂಸ್ಥೆಗಳು ಖರೀದಿಸಿ ನವ ನಟ ಝೈದ್ ಖಾನ್ ಚೊಚ್ಚಲ ಚಿತ್ರವನ್ನ ಪ್ರೇಕ್ಷಕರ ಮುಂದಿಡೋ ತಯಾರಿಯಲ್ಲಿವೆ. ಸದ್ಯ ಈ ಸಂಸ್ಥೆ ಗಳು ಬನಾರಸ್ ನ ವಿತರಣೆ ಹಕ್ಕು ಪಡೆದಿರೋದು ಚಿತ್ರದ ಮೇಲಿನ ಭರವಸೆಯನ್ನು ಹೆಚ್ಚಿಸಿವೆ.
Banaras ಮುಂಬೈನಲ್ಲಿ ಬನಾರಸ್ ಸಿನಿಮಾ ಪ್ರಚಾರ ಮಾಡಲು ಮುಂದಾದ ಝೈದ್ ಖಾನ್!
ಬನಾರಸ್ ಪ್ಯಾನ್ ಇಂಡಿಯಾ ಚಿತ್ರವೆಂಬುದು ಗೊತ್ತಿರೋ ವಿಚಾರ. ಕನ್ನಡವೂ ಸೇರಿ ಪಂಚ ಭಾಷೆಗಳಲ್ಲೂ ರಿಲೀಸ್ ಆಗ್ತಿರೋ ಈ ಚಿತ್ರದ ಇತರ ಭಾಷೆಯ ವಿತರಣೆ ಹಕ್ಕುಗಳು ಯಾವ ಸಂಸ್ಥೆಯ ಪಾಲಾಗತ್ತೆ ಅನ್ನೂ ಕುತೂಹಲ ವಿತ್ತು. ಇದೀಗ ಉತ್ತರ ಭಾರತದ ಭೂಮಿಕೆಯಲ್ಲಿ ಬನಾರಸ್ ಪಸರಿಸಿಕೊಳ್ಳುವ ಬೆಗೆಗಿನ ಥ್ರಿಲ್ಲಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಉತ್ತರ ಭಾರತದತ್ತ ವಿಸ್ತಾರವಾಗಿ ಬನಾರಸ್ ಹಂಚುವ ಹಕ್ಕನ್ನ ಪ್ರತಿಷ್ಠಿತ ಸಂಸ್ಥೆಯೇ ಪಡೆದುಕೊಂಡು ಬನಾರಸ್ ಮತ್ತೊಂದು ದಾಖಲೆ ನಿರ್ಮಿಸಿದೆ. ಈಗಾಗಲೇ ಹಿಟ್ ಸಿನೆಮಾಗಳು ಹಾಗೂ ಸ್ಟಾರ್ ನಟರ ಸಿನೆಮಾಗಳನ್ನೇ ಹಂಚಿಕೆ ಮಾಡಿ ಯಶಸ್ಸು ಕಂಡಿರುವ ಖ್ಯಾತ ಪನೋರಮಾ ಸ್ಟುಡಿಯೋಸ್, ಬನಾರಸ್ ಚಿತ್ರವನ್ನ ಉತ್ತರ ಭಾರತದಾದ್ಯಂತ ಹಂಚುವ ಮಹತ್ತರ ಜವಾಬ್ದಾರಿಯನ್ನ ಹೊತ್ತಿದೆ.
ಇದ್ರಲ್ಲಿ ಇನ್ನೊಂದು ವಿಶೇಷವೆಂದರೆ ಈ ಸಂಸ್ಥೆಯಲ್ಲಿ ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಕೂಡಾ ಪಾಲುದಾರರಾಗಿದ್ದಾರೆ. ಬನಾರಸ್ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ, ಭರವಸೆಯಿಂದ ಸದರಿ ಸಂಸ್ಥೆಯು ಬನಾರಸ್ನ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿದ್ದು, ಈ ಸಂಗತಿ ಇಡೀ ಚಿತ್ರತಂಡವನ್ನ ಪುಳಕಿತಗೊಳಿಸಿದೆ. ಈ ಮೂಲಕ ಬಾಲಿವುಡ್ ಮಟ್ಟದಲ್ಲಿ ಬಹುದೊಡ್ಡ ಹೆಸರು ಮಾಡಿರುವ ವಿತರಣಾ ಸಂಸ್ಥೆ ಪನೋರಮಾ ಸ್ಟುಡಿಯೋಸ್
ಖರೀದಿಸಿರೋದು ಬನಾರಸ್ ಬಗೆಗಿನ ನಿರೀಕ್ಷೆಯನ್ನ ದಿನದಿಂದ ಹೆಚ್ಚಿಸುತ್ತಲೇ ಇದೆ. ನವ ನಾಯಕ ಝೈದ್ ಖಾನ್ ಚೊಚ್ಚಲ ಚಿತ್ರಕ್ಕೆ ಎಲ್ಲೆಡೆ ಇಂಥಹ ರೆಸ್ಪಾನ್ಸ್ ಸಿಗುತ್ತಿರೋದು ಆರಂಭಿಕ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಈ ವಿದ್ಯಮಾನದಿಂದ ಚಿತ್ರದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್, ನಾಯಕ ನಟ ಝೈದ್ ಖಾನ್, ನಾಯಕಿ ಸೋನಲ್ ಮೊಂಥೇರೋ, ನಿರ್ದೇಶಕ ಜಯತೀರ್ಥ ಸೇರಿದಂತೆ ಒಂದಿಡೀ ಚಿತ್ರತಂಡವೇ ಖುಷಿಯಲ್ಲಿ ತೇಲುವಂತಾಗಿದೆ. ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ಪ್ರತಿಭಾನ್ವಿತ ತಾಂತ್ರಿಕ ವರ್ಗ, ನುರಿತ ಕಲಾವಿದರ ಬನಾರಸ್ ನ ಭಾಗವಾಗಿದೆ, ಇದೇ ನವೆಂಬರ್ 4 ಕ್ಕೆ ಬನಾರಸ್ ದೇಶಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಗೊಳ್ಳಲಿದೆ.