
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ 2019ರ ಸಾಲಿನ ರಾಜ್ಯ ಪ್ರಶಸ್ತಿ (Karnataka Stae Award 2019) ಬಂದಿರೋದು, ಅವರು ಅದನ್ನು ನಿರಾಕರಿಸಿ ಪತ್ರ ಬರೆದಿರೋದು ಎಲ್ಲವೂ ಈಗ ಬಹುತೇಕರಿಗೆ ಗೊತ್ತಿರುವ ಸುದ್ದಿ. 2019ರ ಸಾಲಿನ ವಾರ್ಷಿಕ ರಾಜ್ಯ ಪ್ರಶಸ್ತಿಯು ನಟ ಸುದೀಪ್ ಅವರಿಗೆ 'ಪೈಲ್ವಾನ್' ಚಿತ್ರಕ್ಕಾಗಿ ಬಂದಿತ್ತು. ಆದರೆ ಅದನ್ನು ನಯವಾಗಿ ನಟ ಸುದೀಪ್ ತಿರಸ್ಕರಿಸಿದ್ದಾರೆ. ಆದರೆ ನಟ ಕಿಚ್ಚ ಸುದೀಪ್ ಅವರ ಈ ನಿರ್ಧಾರದ ಹಿಂದೆ ಹಳೆಯ ನೋವಿದೆ!
ಹೌದು, ನಟ ಕಿಚ್ಚ ಸುದೀಪ್ ಅವರು ಸುಮ್ಮನೆ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿಲ್ಲ. ಅವರಿಗೆ ಹಲವು ವರ್ಷಗಳ ಹಿಂದೆ ಈ ರಾಜ್ಯ ಪ್ರಶಸ್ತಿ ವಿಷಯದಲ್ಲಿ ಅವಮಾನ ಆಗಿತ್ತು. ಅದನ್ನು ಅವರು ಮರೆತಿಲ್ಲ, ಮರೆಯುವುದೂ ಇಲ್ಲ ಎನ್ನಬಹುದು. ಸುದೀಪ್ ಅಭಿನಯದ 'ರಂಗ ಎಸ್‌ಎಸ್‌ಎಲ್ ಸಿ (Ranga SSLC)' ಹಾಗೂ 'ಮುಸ್ಸಂಜೆ ಮಾತು (Mussanje Mathu)' ಸಿನಿಮಾಗಳಿಗೆ ನಟ ಸುದೀಪ್ ಅವರಿಗೆ ಪ್ರಶಸ್ತಿ ಸಿಗಬೇಕಿತ್ತು.
ಭಾರೀ ಬಿಗ್ ಡೀಲ್‌ಗೆ ಕೈ ಹಾಕಿರೋ ಕಿಚ್ಚ ಸುದೀಪ್, ಸದ್ಯದಲ್ಲೇ ಅದು ರಿವೀಲ್!
ಆ ಎರಡೂ ಸಿನಿಮಾಗಳ ನಟನೆಗೆ ನಟ ಕಿಚ್ಚ ಸುದೀಪ್ ಅವರಿಗೆ ಪ್ರಶಸ್ತಿ ಬಂದಿತ್ತು. ಹಾಗೂ, ಅದನ್ನು ಸ್ವತಃ ಪ್ರಶಸ್ತಿ ಕಮಿಟಿಯೇ ನಟಸುಧಿಪ್ ಅವರಿಗೆ ಕಾಲ್ ಮಾಡಿ ಹೇಳಿತ್ತು. ಆದರೆ, ಕರ್ನಾಟಕ ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ನಟ ಸುದೀಪ್ ಬೇರೆ ನಟರಿಗೆ ಆ ಪ್ರಶಸ್ತಿ ನೀಡಲಾಗಿತ್ತು. ಸಿನಿಮಾ ಪ್ರಶಸ್ತಿಯಲ್ಲೂ ನಡೆದ ರಾಜಕೀಯ ಹಾಗೂ ತಾರತಮ್ಯಗಳಿಂದ ಬೇಸತ್ತ ನಟ ಸುದೀಪ್ ಅವರು ಆ ಬಳಿಕ ಪ್ರಶಸ್ತಿಗಳು, ಪ್ರಶಸ್ತಿ ಸಮಾರಂಭಗಳು ಹಾಗೂ ಗೌರವ ಡಾಕ್ಟರೇಟ್ ಈ ಎಲ್ಲವುಗಳಿಂದ ದೂರ ಇರುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
ಆದರೆ, ಅವರು ಈ ಸಂಗತಿಯನ್ನು ನೇರವಾಗಿ ತಮ್ಮ ಪತ್ರದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಬದಲಾಗಿ, 2019ರ ಸಾಲಿನ ಶ್ರೇಷ್ಠ ನಟ ರಾಜ್ಯ ವಾರ್ಷಿಕ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿ ಹೀಗೆ ಹೇಳಿದ್ದಾರೆ. 'ನನಗೆ ಅತ್ಯುತ್ತಮ ನಟ ವಿಭಾಗದಲ್ಲಿ 2019ರ ರಾಜ್ಯ ಪ್ರಶಸ್ತಿ ಸಿಕ್ಕಿರೋದು ನಿಜಕ್ಕೂ ಒಂದು ಗೌರವದ ವಿಷಯ. ಈ ಗೌರವ ನೀಡಿದ್ದಕ್ಕಾಗಿ ನಾನು ತೀರ್ಪುಗಾರರಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ನಾನು ಅನೇಕ ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯೋದನ್ನು ನಿಲ್ಲಿಸಿದ್ದೇನೆ.
ಅನುಪಮಾಗೆ ಚಾನ್ಸ್ ಯಾಕಿಲ್ಲ? ದಾರಿನ ಅವ್ರೇ ಕಂಡ್ಕೊಂಡಿದಾರೆ, ಜಾಗ ಬಿಡಿ ಅಷ್ಟೇ!
ನನ್ನದೇ ಆದ ಕೆಲವು ವೈಯಕ್ತಿಕ ಕಾರಣಗಳಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಟನೆ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅನೇಕ ಕಲಾವಿದರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ನಾನು ಮೆಚ್ಚುತ್ತೇನೆ. ಆದರೆ ನಾನು ಈ ಪ್ರಶಸ್ತಿಯನ್ನು ಸ್ವೀಕಾರ ಮಾಡೋದಕ್ಕಿಂತ ನನಗಿಂತಲೂ ಅರ್ಹರೊಬ್ಬರು ಪ್ರಶಸ್ತಿ ಪಡೆಯೋದನ್ನು ನೋಡೋದು ನನಗೆ ತುಂಬ ಖುಷಿ ಕೊಡುತ್ತದೆ' ಎಂದು ನಟ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ತಿಳಿಸಿದ್ದಾರೆ.
ಮುಂದುವರೆದು ಕಿಚ್ಚ ಸುದೀಪ್ 'ಸಿನಿಪ್ರೇಕ್ಷಕರನ್ನು ರಂಜಿಸೋದು ನನ್ನ ಕೆಲಸ. ಇಷ್ಟು ವರ್ಷಗಳಿಂದ ಈ ಕೆಲಸವನ್ನು ಯಾವುದೇ ಪ್ರಶಸ್ತಿ-ಪುರಸ್ಕಾರಗಳ ನಿರೀಕ್ಷೆಯೇ ಇಲ್ಲದೆ ಮಾಡುತ್ತ ಬಂದಿದ್ದೇನೆ. ತೀರ್ಪುಗಾರರ ಈ ನಿರ್ಧಾರವು ಸ್ವಾಗತಾರ್ಹ, ಇದು ನನ್ನನ್ನು ಇನ್ನಷ್ಟು ಹೆಚ್ಚು ಸಿನಿಮಾದಲ್ಲಿ ತೊಡಗಿಸಿಕೊಳ್ಳಲು, ಕೆಲಸ ಮಾಡಲು, ಮುಂದುವರೆಯಲು ಇನ್ನಷ್ಟು ಹೆಚ್ಚಾಗಿ ಪ್ರೇರೇಪಿಸುವುದು ಖಂಡಿತ.
ಕುಂಯ್‌ಕಾ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?
2019ರ ಅತ್ಯುತ್ತಮ ನಟ ಪ್ರಶಸ್ತಿಗೆ ನೀವೆಲ್ಲ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ತೀರ್ಪುಗಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಈ ನಿರ್ಧಾರದಿಂದ ತೀರ್ಪುಗಾರರು ಹಾಗು ರಾಜ್ಯ ಸರ್ಕಾರಕ್ಕೆ ನೋವಾದರೆ, ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಆದರೆ, ನೀವು ನನ್ನ ಈ ನಿರ್ಧಾರವನ್ನು ಗೌರವಿಸುತ್ತೀರಿ, ನನ್ನ ಆಯ್ಕೆಯಲ್ಲಿ ನಾನು ಸಾಗಲು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬಿರುವೆ.
ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿ ಕೊಡಲು ನಿರ್ಧಾರ ಮಾಡಿದವರಿಗೆ, ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಅಂದಹಾಗೆ, ಕಿಚ್ಚ ಸುದೀಪ್ ನಟನೆಯ ʼಪೈಲ್ವಾನ್ʼ ಸಿನಿಮಾವನ್ನು 'ಕೃಷ್ಣ' ನಿರ್ದೇಶನ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ದಾಖಲಿಸಿತ್ತು. ಈ ಚಿತ್ರಕ್ಕಾಗಿ ನಟ ಕಿಚ್ಚ ಸುದೀಪ್ ಜಿಮ್‌ನಲ್ಲಿ ಬಹಳಷ್ಟು ಬೆವರು ಹರಿಸಿ, ಬೇರ್ ಬಾಡಿಯಲ್ಲಿ ಕಾಣಿಸಿಕೊಂಡಿದ್ದರು.
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್ ಸಿನಿಮಾಗೂ ಅವಾರ್ಡ್!
ನಟಿ ಆಕಾಂಕ್ಷಾ ಸಿಂಗ್ ಈ ಸಿನಿಮಾ ನಾಯಕಿಯಾಗಿದ್ದರು. ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಸುನೀಲ್ ಶೆಟ್ಟಿ, ಅವಿನಾಶ್ ಯೆಲಂದೂರು, ಶರತ್ ಲೋಹಿತಾಶ್ವ, ರಮೇಶ್ ಅರವಿಂದ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಸ್ವಪ್ನಾ ಕೃಷ್ಣ ಈ ಚಿತ್ರ ನಿರ್ಮಾಣ ಮಾಡಿದದ್ದ ಈ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.