ಚಂದನ್ ಶೆಟ್ಟಿ ಆಗ್ರಾ ಸವಾರಿ, ಓಡ್ತಿರೋ ಕಾರಲ್ಲಿ ಏನ್ ಮಾಡ್ತಿದಾರೆ ಗುರೂ..?!

Published : Jan 23, 2025, 11:06 PM ISTUpdated : Jan 23, 2025, 11:12 PM IST
ಚಂದನ್ ಶೆಟ್ಟಿ ಆಗ್ರಾ ಸವಾರಿ, ಓಡ್ತಿರೋ ಕಾರಲ್ಲಿ ಏನ್ ಮಾಡ್ತಿದಾರೆ ಗುರೂ..?!

ಸಾರಾಂಶ

ಚಂದನ್ ಶೆಟ್ಟಿ ಸದ್ಯ ಹಿಮಾಚಲ ಪ್ರದೇಶಕ್ಕೆ ಟೂರ್ ಹೋಗುತ್ತಿದ್ದಾರೆ. ಸದ್ಯ ಅವರು ಬೆಂಗಳೂರಿನಿಂದ 2500 ಕೀಲೋ ಮೀಟರ್ ದೂರದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಬಗ್ಗೆ ಚಂದನ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ..

ಸಿಂಗರ್, ನಟ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ (Chandan Shetty) ಇದೀಗ ಹಿಮಾಚಲ ಪ್ರದೇಶಕ್ಕೆ ಟೂರ್ ಹೋಗಿದ್ದಾರೆ. ಸದ್ಯ ಅವರು ಬೆಂಗಳೂರಿನಿಂದ 2500 ಕೀಲೋ ಮೀಟರ್ ದೂರದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಬಗ್ಗೆ ಚಂದನ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಅವರೇನು ಬರೆದಿದ್ದಾರೆ ನೋಡಿ.. 

'ಇವತ್ತಿಗೆ 2500km complete ಮಾಡಿದೀವಿ.. ಈ ಪ್ರಯಾಣ ತುಂಬಾ ಖುಷಿ ಕೊಡ್ತಿದೆ..ಮೊದಲ ಬಾರಿ ಓಡೋ ಕಾರ್ ಅಲ್ಲಿ ಸಾಂಗ್ ಕಪೋಸ್ ಮಾಡಿ.. ಸಾಹಿತ್ಯ ಬರೆದು, ಹಾಡಿ ವಿಡಿಯೋ ಮಾಡ್ತಿರೋದು.. ನಿಮಗೆ ಇಷ್ಟ ಆಗುತ್ತೆ ಅಂತ ಅನ್ಕೋತೀನಿ... ಇನ್ನಷ್ಟು ಹೊಸ ಮೈಕ್ರೋ ಸಾಂಗ್ಸ್ ಅಪ್ಲೋಡ್ ಮಾಡ್ತಿನಿ..' ಎಂದು ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ ಚಂದನ್ ಶೆಟ್ಟಿ.

ಎಲ್ಲಾ ಪ್ಯಾಕ್ ಮಾಡ್ಕೊಂಡು ಇದ್ದಕ್ಕಿದ್ದಂತೆ ಹಿಮಾಚಲ ಪ್ರದೇಶಕ್ಕೆ ಹೊರಟ ಚಂದನ್ ಶೆಟ್ಟಿ! 

ಸ್ನೇಹಿತರ ಜೊತೆಗೂಡಿ ಸಾಹಸ ಟೂರ್‌ಗೆ ಹೋಗಿರುವ ಚಂದನ್ ಶೆಟ್ಟಿ ಸದ್ಯ ಕಾಟನ್ ಕ್ಯಾಂಡಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ತಮ್ಮ ಕಾಟನ್ ಕ್ಯಾಂಡಿ ಮ್ಯೂಸಿಕ್ ಆಲ್ಬಂ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ಈಗ ಎಂಜಾಯಿಂಗ್ ಮೂಡ್‌ನಲ್ಲಿ ಇದ್ದಾರೆ. ಇದೀಗ ಅವರು ಹಿಮಾಚಲ ಪ್ರದೇಶದ ಕಡೆ ಮುಖ ಮಾಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಹೊರಟಾಗ ದಾರಿ ಮಧ್ಯೆ ಬಹಳಷ್ಟು ಸ್ಥಳಗಳನ್ನು ಅವರು ಕ್ರಾಸ್ ಮಾಡಲಿದ್ದು, ಅಲ್ಲೆಲ್ಲಾ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. 

ಇತ್ತಿಚೆಗಷ್ಟೇ ವಿಜಯಪುರದ ಸ್ಟೇಜ್‌ ಶೋ ಮುಗಿಸಿ ಬಂದಿದ್ದರು ಸಿಂಗರ್ ಚಂದನ್ ಶೆಟ್ಟಿ. ಅಲ್ಲಿ ಈವೆಂಟ್‌ನಲ್ಲಿ ಮಿಂಚಿದ್ದ ಚಂದನ್ ಶೆಟ್ಟಿ ಅಲ್ಲಿಂದ ಬಂದವರೇ ಹಿಮಾಚಲ ಪ್ರದೇಶಕ್ಕೆ ಟೂರ್ ಹೊರಟಿದ್ದು, ಅದನ್ನು ಅಡ್ವೆಂಚರ್ ಟೂರ್ ಎಂದೇ ಕರೆದಿದ್ದಾರೆ. ತಮ್ಮ ಎಂದಿನ ಪಾಪ್ ಶೈಲಿಯಲ್ಲಿ ಹಾಡಿನ ಹಿನ್ನೆಲೆಯಲ್ಲಿ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ಚಂದನ್ ಶೆಟ್ಟಿ. 

ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!

ಆಗಾಗ ದೇಶ-ವಿದೇಶಗಳ ಟ್ರಿಪ್ ಮಾಡುತ್ತಾರೆ ಸಿಂಗರ್ ಚಂದನ್ ಶೆಟ್ಟಿ. ಅದು ಅವರ ಹವ್ಯಾಸ ಎಂದು ಕೂಡ ಹೇಳಬಹುದು. ಕಳೆದ ವರ್ಷ ಆಸ್ಟ್ರೇಲಿಯಾದ ಸಿಡ್ನಗೆ ಹೋಗಿ, ಅಲ್ಲಿ ತಮ್ಮ ಬಾಲ್ಯದ ಕನಸು 'ಫ್ಲೈಟ್ ಹಾರಿಸಿ' ಅದನ್ನು ನನಸು ಮಾಡಿಕೊಂಡು ಬಂದಿದ್ದಾರೆ. ತಾವೇನೇ ಮಾಡಿದರು ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡುವ ಅಭ್ಯಾಸವನ್ನು ಚಂದನ್ ಶೆಟ್ಟಿಯವರು ಹೊಂದಿದ್ದಾರೆ. ಅದರಂತೆ ಈಗ ಹಿಮಾಚಲ ಪ್ರದೇಶ ಟ್ರಿಪ್ ಕೂಡ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ. 

ಸದ್ಯ ಬೆಂಗಳೂರಿನಿಂದ ಹೊರಟಿರುವ ಚಂದನ್ ಶೆಟ್ಟಿಯವರು ಅದೆಷ್ಟು ದಿನ ಹಿಮಾಚಲ ಪ್ರದೇಶದಲ್ಲಿ ಬೀಡು ಬಿಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಅಲ್ಲಿಂದ ಮುಂದೆ ಮತ್ತೆಲ್ಲಿಗೆ ಪ್ರಯಾಣ ಮಾಡುತ್ತಾರೆ, ಏನೇನೆಲ್ಲಾ ನೋಡುತ್ತಾರೆ, ಎಲ್ಲೆಲ್ಲಿ ಸುತ್ತಿ ಬರುತ್ತಾರೆ ಎಂಬ ಡೀಟೇಲ್ಸ್ ಅಪ್ಡೇಟ್ ಮಾಡಲಾಗುತ್ತದೆ. ನೀವು, ಚಂದನ್ ಶೆಟ್ಟಿಯವರ ಫ್ಯಾನ್ಸ್‌ ಈ ಬಗ್ಗೆ ಕುತೂಹಲದಿಂದ ಕಾಯುತ್ತಿರಿ, ನಿಮಗೆ ಎಲ್ಲವೂ ಕಾಲಕ್ಕೆ ಸರಿಯಾಗಿ ಮಾಹಿತಿ ಸಿಗಲಿದೆ. 

ಅನುಪಮಾಗೆ ಚಾನ್ಸ್ ಯಾಕಿಲ್ಲ? ದಾರಿನ ಅವ್ರೇ ಕಂಡ್ಕೊಂಡಿದಾರೆ, ಜಾಗ ಬಿಡಿ ಅಷ್ಟೇ!

ಅಂದಹಾಗೆ, ಇತ್ತೀಚೆಗೆ ವಿಜಯಪುರ (ವಿಜಾಪುರ)ಕ್ಕೆ ಹೋಗಿದ್ದರು. ಬಿಡುಗಡೆಯಾಗಿರುವ ತಮ್ಮ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ, ಅಲ್ಲಿ ಹೋಗಿ  ಚಂದನ್ ಸ್ಟೇಜ್‌ ಶೋ ಮಾಡಿದ್ದಾರೆ. ಅಲ್ಲಿ ಅಸಂಖ್ಯಾತ ಅಭಿಮಾನಿಗಳು ಅವರನ್ನು ಸುತ್ತುವರಿದಿದ್ದು ತುಂಬಾ ಪ್ರೀತಿ-ಅಭಿಮಾನ ಪ್ರದರ್ಶಿಸಿದ್ದಾರೆ. ಸ್ಟೇಜ್ ಶೋದಲ್ಲಿ ಕಾಟನ್ ಕ್ಯಾಂಡಿ ಆಲ್ಬಂ ಸಾಂಗ್‌ನಲ್ಲಿ ಅವರೊಂದಿಗೆ ಹೆಜ್ಜೆ ಹಾಕಿರುವ ನಟಿ ಸುಷ್ಮಿತಾ ಗೋಪಿನಾಥ್ ಸಹ ಹಾಜರಿದ್ದು, ಚಂದನ್‌ ಜೊತೆ 'ಥಕಧಿಮಿತ' ಮಾಡಿದ್ದಾರೆ. 

ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ (Cotton Candy) ರಿಲೀಸ್ ಆಗಿದೆ. ಈ ಮೊದಲಿನ ಎಲ್ಲದಕ್ಕಿಂತ ವಿಶೇಷವಾದ ಸಂಗೀತದ ರಸದೌತಣ ಇದರಲ್ಲಿದೆ ಎನ್ನಬಹುದು. ಕಾರಣ, ಈ ವಿಡಿಯೋವನ್ನು ಹೆಚ್ಚು ಅದ್ದೂರಿಯಾಗಿ ಶೂಟ್ ಮಾಡಲಾಗಿದೆ, ಈ ಮ್ಯೂಸಿಕ್ ಸಾಂಗ್‌ಗೆ ಹೆಚ್ಚಿನ ತಯಾರಿ ಮಾಡಿಕೊಂಡಿದ್ದರು ಚಂದನ್ ಶೆಟ್ಟಿ. ಈ ಮ್ಯೂಸಿಕ್ ವಿಡಿಯೋವನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶನ ಕೂಡ ಮಾಡಿದ್ದು ಚೆಂದಚೆಂದದ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿದ್ದಾರೆ. 

ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?

ಈ ಬಗ್ಗೆ ಚಂದನ್ ಶೆಟ್ಟಿ ಅವರು 'ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿರಲಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ಇದೊಂದು ಟ್ರೆಂಡ್ ಸಾಂಗ್ ಆಗಿದೆ. ಇದು ನಾನು ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್‌ ಗಳಿಗೆ ಕೊಟ್ಟ ನ್ಯೂ ಈಯರ್‌ ಗಿಫ್ಟ್' ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ