
ನಟ ಕಿಚ್ಚ ಸುದೀಪ್ ಅವರು ʼಪೈಲ್ವಾನ್ʼ ಸಿನಿಮಾದಲ್ಲಿನ ನಟನೆಗೆ 2019ರ ʼಅತ್ಯುತ್ತಮ ನಟʼ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಆದರೆ ಕಿಚ್ಚ ಸುದೀಪ್ ಅವರು ಈ ಪ್ರಶಸ್ತಿಯನ್ನು ನಿರಾಕರಣೆ ಮಾಡಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆಯನ್ನು ಕೂಡ ನೀಡಿದ್ದು, ʼಬಿಗ್ ಬಾಸ್ʼ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಏನಂದ್ರು?
“ಸ್ವಾಗತಾರ್ಹ ನಿರ್ಧಾರ....ಗೌರವ ಡಾಕ್ಟರೇಟ್ ನಿರಾಕರಣೆಗಿದ್ದ ಕಾರಣ ಇಲ್ಲೂ ಮುಂದುವರಿದಿದೆ ಅಷ್ಟೆ…! ಇತ್ತೀಚಿನ ವರ್ಷಗಳಲ್ಲಿ ಸೈಮಾ ಅಥವಾ ಬೇರೆ ಯಾವುದೇ ಖಾಸಗಿ ಸಂಸ್ಥೆಗಳ ಬಹುಮತಿ ಸನ್ಮತಿ ಸ್ವೀಕರಿಸಿಲ್ಲ..ಕಳೆದ ವರ್ಷಸೈಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಷ್ಟೆ. ನಿರಾಕರಣೆ ಮತ್ತು ಬದ್ಧತೆಗೆ ಅಂತಶಕ್ತಿ ಬೇಕು.ಒಂದು ಕೌತುಕ -ಬೆರಗು ಆಶ್ಚರ್ಯಗಳ ಸಂಕಲನವೇ.. ನಮ್ಮ ಬಾದ್ ಶಾ ಕಿಚ್ಚ ಸುದೀಪ” ಎಂದು ʼಬಿಗ್ ಬಾಸ್ʼ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ತಿರಸ್ಕರಿಸಿದ ಕಿಚ್ಚ ಸುದೀಪ; ಅತ್ಯುತ್ತಮ ನಟನ ಕಾರಣ ಹೀಗಿದೆ!
ಕಿಚ್ಚ ಸುದೀಪ್ ಏನು ಹೇಳಿದ್ದಾರೆ?
“ನನಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಸಿಕ್ಕಿರೋದು ನಿಜಕ್ಕೂ ಒಂದು ಗೌರವದ ವಿಷಯ. ಈ ಗೌರವಕ್ಕಾಗಿ ನಾನು ತೀರ್ಪುಗಾರರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಆದರೆ ನಾನು ಅನೇಕ ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯೋದನ್ನು ನಿಲ್ಲಿಸಿದ್ದೇನೆ. ವೈಯಕ್ತಿಕ ಕಾರಣಗಳಿಂದ ನಾನು ಈ ನಿರ್ಧಾರವನ್ನು ತಗೊಂಡಿದ್ದೇನೆ. ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅನೇಕ ಕಲಾವಿದರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ನಾನು ಮೆಚ್ಚುತ್ತೇನೆ. ಆದರೆ ನಾನು ಈ ಪ್ರಶಸ್ತಿಯನ್ನು ಸ್ವೀಕಾರ ಮಾಡೋದಕ್ಕಿಂತ ಅರ್ಹರೊಬ್ಬರು ಪ್ರಶಸ್ತಿ ಪಡೆಯೋದನ್ನು ನೋಡೋದು ನನಗೆ ತುಂಬ ಖುಷಿ ಕೊಡುತ್ತದೆ” ಎಂದು ನಟ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್ ಸಿನಿಮಾಗೂ ಅವಾರ್ಡ್!
“ಜನರನ್ನು ರಂಜಿಸೋದು ನನ್ನ ಕೆಲಸ. ಇಷ್ಟು ವರ್ಷಗಳಿಂದ ಈ ಕೆಲಸ ಯಾವುದೇ ಪ್ರಶಸ್ತಿಗಳ ನಿರೀಕ್ಷೆ ಇಲ್ಲದೆ ಸಾಗುತ್ತ ಬಂದಿದೆ. ತೀರ್ಪುಗಾರರ ಈ ನಿರ್ಧಾರವು ನನ್ನನ್ನು ಇನ್ನಷ್ಟು ಸಿನಿಮಾದಲ್ಲಿ ತೊಡಗಿಸಿಕೊಳ್ಳಲು, ಕೆಲಸ ಮಾಡಲು, ಮುಂದುವರೆಯಲು ಇನ್ನಷ್ಟು ಹೆಚ್ಚಿನ ಉತ್ತೇಜನ ನೀಡುತ್ತದೆ.
2019ರ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನನ್ನು ನೀವೆಲ್ಲ ಆಯ್ಕೆ ಮಾಡಿದ್ದಕ್ಕಾಗಿ ಪ್ರತಿಯೊಬ್ಬ ತೀರ್ಪುಗಾರರಿಗೂ ಕೃತಜ್ಞತೆ ಸಲ್ಲಿಸುವೆ. ನನ್ನ ಈ ನಿರ್ಧಾರದಿಂದ ತೀರ್ಪುಗಾರರು, ರಾಜ್ಯ ಸರ್ಕಾರಕ್ಕೆ ನೋವಾದರೆ, ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುವೆ. ನೀವು ನನ್ನ ಈ ನಿರ್ಧಾರವನ್ನು ಗೌರವಿಸುತ್ತೀರಿ, ನನ್ನ ಆಯ್ಕೆಯಲ್ಲಿ ಸಾಗಲು ನನ್ನನ್ನು ಬೆಂಬಲಿಸುತ್ತೀರಿ ಅಂತ ನಂಬಿರುವೆ. ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿ ಕೊಡಲು ನಿರ್ಧಾರಮಾಡಿದವರಿಗೆ, ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುವೆ” ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಭಾರೀ ಬಿಗ್ ಡೀಲ್‌ಗೆ ಕೈ ಹಾಕಿರೋ ಕಿಚ್ಚ ಸುದೀಪ್, ಸದ್ಯದಲ್ಲೇ ಅದು ರಿವೀಲ್!
ʼಪೈಲ್ವಾನ್ʼ ಸಿನಿಮಾ ವಿಶೇಷತೆ ಏನು?
ʼಪೈಲ್ವಾನ್ʼ ಸಿನಿಮಾವನ್ನು ಕೃಷ್ಣ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರಕ್ಕಾಗಿ ನಟ ಕಿಚ್ಚ ಸುದೀಪ್ ಅವರು ಜಿಮ್‌ನಲ್ಲಿ ಸಖತ್ ಬೆವರು ಹರಿಸಿ, ಬೇರ್ ಬಾಡಿಯಲ್ಲಿ ಕಾಣಿಸಿಕೊಂಡಿದ್ದರು. ಆಕಾಂಕ್ಷಾ ಸಿಂಗ್ ಅವರು ಈ ಸಿನಿಮಾ ನಾಯಕಿಯಾಗಿದ್ದು, ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಯೆಲಂದೂರು, ಶರತ್ ಲೋಹಿತಾಶ್ವ, ರಮೇಶ್ ಅರವಿಂದ್ ಅವರು ಈ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಸ್ವಪ್ನಾ ಕೃಷ್ಣ ಅವರು ಈ ಚಿತ್ರ ನಿರ್ಮಾಣ ಮಾಡಿದ್ದರು. ಅರ್ಜುನ್ ಜನ್ಯ ಅವರು ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.