ಸುದೀಪ್​ ಪುತ್ರಿ ಸಾನ್ವಿ ಭರ್ಜರಿ ಡ್ಯಾನ್ಸ್​: ಸ್ಯಾಂಡಲ್​ವುಡ್​ ಹೊಸ ಹೀರೋಯಿನ್​ ಫಿಕ್ಸ್​ ಅಂತಿದ್ದಾರೆ ಫ್ಯಾನ್ಸ್​

Published : Oct 03, 2023, 01:56 PM IST
ಸುದೀಪ್​ ಪುತ್ರಿ ಸಾನ್ವಿ ಭರ್ಜರಿ ಡ್ಯಾನ್ಸ್​: ಸ್ಯಾಂಡಲ್​ವುಡ್​ ಹೊಸ ಹೀರೋಯಿನ್​ ಫಿಕ್ಸ್​ ಅಂತಿದ್ದಾರೆ ಫ್ಯಾನ್ಸ್​

ಸಾರಾಂಶ

ಕಿಚ್ಚ ಸುದೀಪ್​ ಅವರ ಪುತ್ರಿ ಸಾನ್ವಿ ಅವರು ಹೊಸ ರೀಲ್ಸ್​ ಮಾಡಿ ವಿಡಿಯೋ ಶೇರ್​ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿ ಸ್ಯಾಂಡಲ್​ವುಡ್​ಗೆ ಹೊಸ ನಾಯಕಿ ಫಿಕ್ಸ್​ ಅಂತಿದ್ದಾರೆ ಫ್ಯಾನ್ಸ್​  

ಸ್ಯಾಂಡಲ್​ವುಡ್​ ನಟ ಸುದೀಪ್​ (Kicchaa Sudeep) ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇಂದಿಗೂ ಅವರಿಗೆ ಸಕತ್​ ಬೇಡಿಕೆ ಇದೆ. ಅವರಿಗೆ 19 ವರ್ಷದ ಕ್ಯೂಟ್​ ಮಗಳಿರೋ ವಿಷಯ ಸಿನಿ ಪ್ರಿಯರಿಗೆ ತಿಳಿದದ್ದೇ. ಸಾನ್ವಿ ಸುದೀಪ್​ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸ್ಟಾರ್​ ಕಿಡ್​ ಎಂದಾಕ್ಷಣ ಎಲ್ಲರ ಕಣ್ಣು ಅವರ ಮೇಲೆಯೇ ಇರುವುದು ಸಹಜ. ಸ್ಟಾರ್ ನಟರಿಗೆ ಮಕ್ಕಳು ಹುಟ್ಟಿದಾಕ್ಷಣ, ಅವರು ಯಾವಾಗ ಸಿನಿ ರಂಗಕ್ಕೆ ಎಂಟ್ರಿ ಕೊಡ್ತಾರೆ ಎಂದು ಕಾಯುತ್ತಿರುವವರೇ ಹೆಚ್ಚು. ಮಕ್ಕಳು ಸ್ವಲ್ಪ ಪ್ರೌಢಾವಸ್ಥೆಗೆ ಬಂದರಂತೂ ಮುಗಿದೇ ಹೋಯ್ತು. ನಾಯಕ-ನಾಯಕಿ ಯಾವಾಗ ಆಗ್ತಾರೆ ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ಈಗ ಸುದೀಪ್​ ಅವರ  ಪುತ್ರಿ ಸಾನ್ವಿಯ ವಿಷಯದಲ್ಲಿಯೂ ಸಿನಿ ಪ್ರಿಯರು ಬಹಳ ಕಾತರರಾಗಿದ್ದಾರೆ.  ಕಂಠಸಿರಿಯ ಮೂಲಕ ಮೋಡಿ ಮಾಡುತ್ತಿರುವ ಸಾನ್ವಿ ಚಿತ್ರರಂಗಕ್ಕೆ ನಾಯಕಿಯಾಗಿ ಯಾವಾಗ ಕಾಲಿಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು.

ಸಾನ್ವಿ ಸುದೀಪ್‌ ಇತ್ತೀಚೆಗೆ ಜಿಮ್ಮಿ (Gymmi) ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದು, ಗಾಯಕಿಯಾಗಿ ಸಾನ್ವಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತುಂಬಾ ಉತ್ತಮ ಕಂಠವುಳ್ಳ ಸಾನ್ವಿ ಈ ಚಿತ್ರದಲ್ಲಿ ಹಾಡಿರುವ ಹಾಡಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.  ಜಿಮ್ಮಿ ಚಿತ್ರದಲ್ಲಿ  ಸುದೀಪ್ ಅವರ ಸೋದರಳಿಯ ಅಂದರೆ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸಿದ್ದಾರೆ. ಅಂತೂ ಚಿತ್ರರಂಗಕ್ಕೆ ಹಾಡಿನ ಮೂಲಕ ಎಂಟ್ರಿ ಕೊಟ್ಟಾಗಿದೆ. ನಾಯಕಿಯಾಗಿ ಯಾವಾಗ ಎಂಟ್ರಿ ಎಂದು ಕೇಳುತ್ತಲೇ ಇದ್ದಾರೆ ಫ್ಯಾನ್ಸ್​. ಕೆಲ ದಿನಗಳ ಹಿಂದೆ,  ಸಾನ್ವಿ ಅವರು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬಗೆಬಗೆ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಶೇರ್​ ಮಾಡಿದ್ದರು. ಜೊತೆಗೆ ವಿಡಿಯೋ ಕೂಡ ಅಪ್​ಲೋಡ್​ ಮಾಡಿದ್ದರು.  ಇವೆಲ್ಲವುಗಳನ್ನು ನೋಡುತ್ತಿದ್ದರೆ, ಸಾನ್ವಿ ಖಂಡಿತವಾಗಿಯೂ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದೇ ಅಭಿಮಾನಿಗಳು ಹೇಳುತ್ತಿದ್ದಾರೆ.

ಕುಂತಲ್ಲೇ ಕುಣಿದ ಕಿಚ್ಚ ಸುದೀಪ್ ಪುತ್ರಿ; ಸಾನ್ವಿ ವಿಡಿಯೋ ವೈರಲ್!

ಇದರ ಮಧ್ಯೆಯೇ ಈಗ ಸಾನ್ವಿ ಅವರು ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ಅಕ್ಕಾ ಡ್ಯಾನ್ಸ್​ ಸೂಪರ್​ ಎಂದರೆ, ಇನ್ನು ಕೆಲವರು ಕನ್ನಡದ ಹಾಡಿಗೂ ರೀಲ್ಸ್​ ಮಾಡಿ ಮೇಡಂ ಎನ್ನುತ್ತಿದ್ದಾರೆ. ಮತ್ತೆ ಹಲವರು ಸಿನಿಮಾಕ್ಕೆ ಎಂಟ್ರಿ ಯಾವಾಗ ಎಂಬ ಪ್ರಶ್ನೆಯನ್ನು ಪುನಃ ಮುಂದಿಟ್ಟಿದ್ದಾರೆ. ನಿಮ್ಮ ಬಳಿ ಇನ್ನೂ ಏನೇನು ಟ್ಯಾಲೆಂಟ್​ ಇದೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ನಿಮ್ಮನ್ನು ಸಿನಿಮಾದಲ್ಲಿ ನೋಡುವ ಆಸೆ ಎನ್ನುತ್ತಿದ್ದಾರೆ ಕೆಲವರು. ನಿಮ್ಮ ಟ್ಯಾಲೆಂಟ್​ ಹಾಡಿಗಷ್ಟೇ ಸೀಮಿತ ಮಾಡಿಕೊಳ್ಳದೇ ಆ್ಯಕ್ಟಿಂಗ್​ನಲ್ಲಿಯೂ ತೋರಿಸಿ, ಆ ದಿನ ಬೇಗ ಬರುವಂತಾಗಲಿ ಎಂದು ಕೆಲವರು ಹೇಳಿದ್ದಾರೆ. ಇಂದಿನ ಎಷ್ಟೋ ಕನ್ನಡ ಹೀರೋಯಿನ್​ಗಳಿಗಿಂತಲೂ ನಿಮ್ಮ ಡ್ಯಾನ್ಸ್​ ಸೂಪರ್​ ಎಂದಿದ್ದಾರೆ ಕೆಲವರು. 

ಇವರ ಕಂಠಸಿರಿಗೆ ಇದಾಗಲೇ ಲಕ್ಷಾಂತರ ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜಿಮ್ಮಿ’ ಚಿತ್ರದ ಟೀಸರ್‌ ಹಾಡನ್ನು ಕೇಳಿದಾಗ ಖುದ್ದು ಸುದೀಪ್​ ಅವರೇ ಅಚ್ಚರಿಪಟ್ಟಿದ್ದರು. ಈ ಬಗ್ಗೆ ಅವರು ಹೇಳಿಕೊಂಡಿದ್ದರು ಕೂಡ.  ‘ನನ್ನ ಮಗಳು ಹಾಡುತ್ತಾಳೆ ಅಂತ ಗೊತ್ತಿತ್ತು, ಇಷ್ಟು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತಿರಲಿಲ್ಲ’ ಎಂದಿದ್ದರು. ಅಲ್ಲಿಗೆ ಸೂಪರ್‌ಸ್ಟಾರ್‌ ತಂದೆಯ ಮಗಳು ಸೂಪರ್ ಗಾಯಕಿಯಾಗಿ ಚಿತ್ರರಂಗಕ್ಕೆ ಬರುವ ಲಕ್ಷಣಗಳು ದಟ್ಟವಾಗಿರುವುದು ತಿಳಿದಿತ್ತು. ಆದರೆ ಇದೀಗ ವಿಡಿಯೋ ಹಾಗೂ ಫೋಟೋ ಶೂಟ್​ಗಳನ್ನು (Photoshoot) ನೋಡಿದರೆ ನಾಯಕಿಯಾಗಿಯೇ ಎಂಟ್ರಿ ಕೊಡುವ ಲಕ್ಷಣ ಕಾಣುತ್ತಿದೆ ಅಂತಿದ್ದಾರೆ ಸುದೀಪ್​ ಮತ್ತು ಸಾನ್ವಿ ಫ್ಯಾನ್ಸ್​.

ರೌಡಿಬೇಬಿ ಲುಕ್‌ನಲ್ಲಿ ಕಿಚ್ಚನ ಪುತ್ರಿ:ಸಾನ್ವಿ ಮಾಸ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್