ಚಿರಂಜೀವಿ ಸರ್ಜಾ ಕೊನೆಯ ಅಭಿಯನಯದ ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿ ಫ್ಯಾನ್ಸ್ ಭಾವುಕರಾಗಿದ್ದಾರೆ.
ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದಿವೆ. 2020ರ ಜೂನ್ 7ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಶಾಕ್ ಆಗಿತ್ತು. ಚಿರಂಜೀವಿ ಸರ್ಜಾ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಬ್ಬರ ಬಾಂಧವ್ಯ ಎಲ್ಲರಿಗೂ ಗೊತ್ತೇ ಇದೆ. ಅಣ್ಣ ಚಿರಂಜೀವಿ ಸರ್ಜಾ ಅಂದರೆ ಧ್ರುವಾ ಅವರಿಗೆ ಅಷ್ಟೊಂದು ಬಾಂಧವ್ಯವಿತ್ತು. ದಿಢೀರನೇ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದಾಗ, ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು. ಇವರಿಬ್ಬರು ಕೇವಲ ಅಣ್ಣ ತಮ್ಮ ಆಗಿರಲಿಲ್ಲ, ಬದಲಿಗೆ ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತವರು. ಅಣ್ಣನ ನೆನಪಿಗೆ ಧ್ರುವ ಅವರು ಕನಕಪುರ ರಸ್ತೆಯ ನೆಲಗುಳಿಯ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ಸಮಾಧಿ ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್ ಹಾಕಿಕೊಂಡು ಮಲಗಿದ್ದರು. ಇದೀಗ ಚಿರು ಅವರ ಕೊನೆಯ ಚಿತ್ರ ರಾಜಮಾರ್ತಾಂಡ ಬಿಡುಗಡೆಗೆ ಸಜ್ಜಾಗಿದ್ದು, ಅದರ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿ ಫ್ಯಾನ್ಸ್ ಭಾವುಕರಾಗಿದ್ದು ಕಣ್ಣೀರು ಸುರಿಸುತ್ತಿದ್ದಾರೆ.
ಈ ಸಿನಿಮಾದ ಶೂಟಿಂಗ್ ಚಿರು ಇರುವಾಗಲೇ ಮುಗಿದಿತ್ತು. ಆದರೆ ಡಬ್ಬಿಂಗ್ ಮಾತ್ರ ಮುಗಿದಿರಲಿಲ್ಲ. ಆದರೆ ಇದೀಗ ಅದನ್ನು ಚಿರು ಸಹೋದರ, ನಟ ಧ್ರುವ ಸರ್ಜಾ ಅವರು ಕಂಪ್ಲೀಟ್ ಮಾಡಿಕೊಡಲಿದ್ದಾರೆ. ಚಿತ್ರದಲ್ಲಿ ಅಣ್ಣ ಚಿರಂಜೀವಿ ಸರ್ಜಾ ಅವರಿಗೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಾಹಸಮಯ ದೃಶ್ಯಗಳಿರುವ ಟ್ರೈಲರ್ ಕುರಿತು ಆನ್‌ಲೈನ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಾರ ರಾಜಮಾರ್ತಾಂಡ ಚಿತ್ರವು ತೆರೆ ಕಾಣಲಿದೆ. ಧ್ರುವ ಸರ್ಜಾರ ಹುಟ್ಟುಹಬ್ಬದಂದೇ ಅಣ್ಣ ಚಿರಂಜೀವಿ ಸರ್ಜಾರ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. ಇದಕ್ಕೆ ಪೂರ್ವಭಾವಿಯಾಗಿ ಚಿತ್ರತಂಡವು ಟ್ರೈಲರ್ ಬಿಡುಗಡೆ ಮಾಡಿದೆ. ರಾಮ್‌ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರ ಧ್ವನಿಯಿದೆ. ಅಣ್ಣ ಅಕಾಲಿಕವಾಗಿ ಮೃತಪಟ್ಟ ಬಳಿಕ ತಮ್ಮ ಧ್ರುವ ಸರ್ಜಾ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು.
ಧ್ರುವ ಸರ್ಜಾ ಮಗಳಿಗೆ ಒಂದು ವರ್ಷ: ತಂಗಿಯ ಜೊತೆ ಚಿರು ಪುತ್ರನ ಕ್ಯೂಟ್ ಮಾತುಕತೆ ವೈರಲ್
ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ಚಿರು ಪತ್ನಿ, ನಟಿ ಮೇಘನಾ ರಾಜ್, 'ಅದ್ಯಾಕೋ ಗೊತ್ತಿಲ್ಲ. ಚಿರಂಜೀವಿ ಸರ್ಜಾ ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಸೆಟ್‌ನಲ್ಲಿ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗುತ್ತಿದ್ದರು. ಆದರೆ ರಾಜಮಾರ್ತಾಂಡ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಈ ಚಿತ್ರವನ್ನು ಅವರು ಅಷ್ಟೊಂದು ಹಚ್ಚಿಕೊಂಡಿದ್ದರು. ಅವರು ನಮ್ಮೊಂದಿಗೆ ಇಲ್ಲದ ಈ ಸಮಯದಲ್ಲಿ ರಾಜಮಾರ್ತಾಂಡ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ' ಎಂದು ಸ್ಮರಿಸಿಕೊಂಡಿದ್ದರು.
ಅಣ್ಣನ ಚಿತ್ರಕ್ಕೆ ಡಬ್ಬಿಂಗ್ ಮಾಡೋದೇ ಖುಷಿನೇ. ಆದರೆ ಅಣ್ಣನಿಲ್ಲದೇ ಹೇಗೆ ಅನ್ನೋ ನೋವು ಕಾಡಿದ್ದು ಇದೆ. ಅದು ಡಬ್ಬಿಂಗ್ ವೇಳೆ ಇನ್ನೂ ಹೆಚ್ಚಾಗಿತ್ತು. ಆ ಕಾರಣಕ್ಕೇನೆ ಡಬ್ಬಿಂಗ್ ಮಾಡೋವಾಗ ಅಣ್ಣನನ್ನ ನೆನೆದು ಧ್ರುವ ತುಂಬಾ ಭಾವುಕರಾಗಿದ್ದರು. ಅಂದಹಾಗೆ ಟ್ರೇಲರ್ನಲ್ಲಿ, ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತ ಸ್ನೇಹಿತನೊಬ್ಬ ತಾನೇ ಆ ಊರಿಗೆ ರಾಜನಾಗಬೇಕೆಂದು ಹೊಂಚು ಹಾಕಿ ಸಂಚು ಮಾಡಿದ ಎಂದು ಅಜ್ಜಿ ಹೇಳುವುದರೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ದೇವರಾಜ್, ಶಂಕರ್ ಅಶ್ವಥ್ ಮೊದಲಾದವರೂ ಕಾಣಿಸುತ್ತಾರೆ. ಬಳಿಕ ಅಜ್ಜಿ, ಈ ಯುವ ಸಾಮ್ರಾಟನ ಮುಂದೆ ನಿಂತು ಸಮರ ಸಾರುತ್ತಿರುವ ಸಿಂಗಳಿಕನೇ ಎಂದು ಚಿರಂಜೀವಿ ಸರ್ಜಾರ ಆಕ್ಷನ್ ಸೀನ್‌ಗಳು ಆರಂಭವಾಗುತ್ತದೆ. ನಿನ್ನ ಶವ ಯಾತ್ರೆ ಅಲ್ಲಿ ಸಿದ್ಧವಾಗಿದೆ ಎಂದು ಶತ್ರುಗಳನ್ನು ಸದೆ ಬಡಿಯಲಾಗುತ್ತದೆ. ನಂತರ ನಾಯಕಿ ದೀಪ್ತಿ ಸಾಥಿ ಎಂಟ್ರಿ ಆಗುತ್ತದೆ. ನಿನ್ನನ್ನು ನೋಡಿದ ಬಳಿಕ ನನಗೆಲ್ಲ ಒಳ್ಳೆಯದೇ ಆಗುತ್ತದೆ ಎಂದು ಲವ್ ಸ್ಟೋರಿ ಆರಂಭವಾಗುತ್ತದೆ. ಆಗ ಸಂಭಾಳಿಸು, ಸಂಭಾಳಿಸು, ನೀನು ಚೂರಾದರೂ ನನ್ನ ಸಂಭಾಳಿಸು ಹಾಡಿನ ದೃಶ್ಯವಿದೆ. ಈ ಜಾಗದ ನಿಜವಾದ ಓನರ್ ಬಂದಿದ್ದಾನೆ ಎಂದು ಚಿಕ್ಕಣ್ಣನ ಎಂಟ್ರಿ ಆಗುತ್ತದೆ. ಇಲ್ಲಿಂದ ಬಳಿಕ ಮೆಂಟಲ್ ಶಿವನಾಗಿ ಭಜರಂಗಿ ಲೋಕಿಯ ಎಂಟ್ರಿ ಆಗುತ್ತದೆ. ಇವಿಷ್ಟೂ ನೋಡಬಹುದು.
GHOST: ಸಾಮಾನ್ಯವಾಗಿ ಯಾರ್ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್ ಪಂಚ್