'ಬಿಲ್ಲ ರಂಗ ಭಾಷ'ದಲ್ಲಿ ಸುದೀಪ್ ಪಾತ್ರ ಏಂಥದ್ದು? ನಿರ್ದೇಶಕ ಅನೂಪ್ ಭಂಡಾರಿ ಬಿಚ್ಚಿಟ್ಟ ಸೀಕ್ರೆಟ್ ನೋಡಿ!

By Shriram Bhat  |  First Published Sep 8, 2024, 1:39 PM IST

ಬಿಲ್ಲ ರಂಗ ಭಾಷಾ ವಿಭಿನ್ನ ಸಿನಿಮಾ. ಫ್ಯೂಚರ್‌ನಲ್ಲಿ ಸೆಟ್ ಆಗಿರೋ ಸಿನಿಮಾ, ಡಿಸ್ಟೋಪಿಯನ್ ವರ್ಲ್ಡ್‌ನಲ್ಲಿ ಸೆಟ್ ಆಗಿರೋ ಸಿನಿಮಾ. ಅದಕ್ಕೆ ಅದ್ರದ್ದೇ ಆದ ಚಾಲೆಂಜಸ್‌ ಇದೆ.  ಈ ಸಿನಿಮಾದಲ್ಲಿ ಇರೋ ಎಕ್ಸೈಟ್‌ಮೆಂಟ್..


ಸೆಪ್ಟೆಂಬರ್ 02ರಂದು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಗೊತ್ತೇ ಇದೆ. ಅಂದೇ ಅನೂಪ್ ಭಂಡಾರಿ (Anup Bhandari) ನಿರ್ದೇಶನದಲ್ಲಿ ನಟ ಸುದೀಪ್ ನಾಯಕತ್ವದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಅದೇ 'ಬಿಲ್ಲ ರಂಗ ಭಾಷಾ.' ಈ ಸಿನಿಮಾ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿದ್ದಾರೆ. ನಮ್ಮ ಏಷ್ಯಾನೆಟ್ ಸೂವರ್ಣಾ ಜತೆ ಮಾತನಾಡಿರುವ ಅನೂಪ್ ಭಂಡಾರಿ ಆ ಸಿನಿಮಾ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 

ಬಿಲ್ಲ ರಂಗ ಭಾಷಾ ವಿಭಿನ್ನ ಸಿನಿಮಾ. ಫ್ಯೂಚರ್‌ನಲ್ಲಿ ಸೆಟ್ ಆಗಿರೋ ಸಿನಿಮಾ, ಡಿಸ್ಟೋಪಿಯನ್ ವರ್ಲ್ಡ್‌ನಲ್ಲಿ ಸೆಟ್ ಆಗಿರೋ ಸಿನಿಮಾ. ಅದಕ್ಕೆ ಅದ್ರದ್ದೇ ಆದ ಚಾಲೆಂಜಸ್‌ ಇದೆ.  ಈ ಸಿನಿಮಾದಲ್ಲಿ ಇರೋ ಎಕ್ಸೈಟ್‌ಮೆಂಟ್ ಆಗುವಂಥ ಅಂಶ ಅಂದ್ರೆ, ಸುದೀಪ್ ಅವ್ರನ್ನ ಬೇರೆ ಬೇರೆ ಶೇಡ್‌ನಲ್ಲಿ ನೋಡಬಹುದು. ನಾನು ಯಾವತ್ತೂ ಹೇಳ್ತೀನಿ, ಸುದೀಪ್ ಅವ್ರು ತುಂಬಾ ವರ್ಸಟೈಲ್ ಆಕ್ಟರ್. ಅವ್ರು ಯಾವುದೇ ಪಾತ್ರವನ್ನ ತುಂಬಾ ಈಸಿಯಾಗಿ ಅಭಿನಯಿಸ್ತಾರೆ. ಪಾತ್ರದೊಳಗೆ ಹೋಗ್ತಾರೆ ಅಂತ. 

Latest Videos

undefined

ಅಘೋರಿ ಪಾತ್ರಕ್ಕಾಗಿ ವಿಭೂತಿ ಬಳಿದುಕೊಂಡಿದ್ದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಏನಾಗಿತ್ತು ಗೊತ್ತಾ?

ಕ್ಯಾಮೆರಾ ಆನ್ ಆದಾಗ ಅವ್ರು ಯಾವ್ ಥರ ಟ್ರಾನ್ಸ್‌ಫಾರ್ಮ್‌ ಆಗ್ತಾರೆ ಅನ್ನೋದನ್ನ ನೋಡೋದಕ್ಕೆ ನಾನೂ ಕುತೂಹಲದಿಂದ ಕಾಯ್ತಾ ಇದೀನಿ. ಈ ಸಿನಿಮಾದಲ್ಲಿ ನಾನು ಒಂದು ಚಿಕ್ಕ ರೋಲ್‌ನಲ್ಲಿ ಕಾಣಿಸಿಕೊಳ್ತೀನಿ. ಅದು ಸಿಗ್ನೇಚರ್ ಹಾಕಿದ ಹಾಕೆ ಅಷ್ಟೇ. ನನ್ ತಮ್ಮ ನಿರೂಪ್ ಭಂಡಾರಿ ಈ ಸಿನಿಮಾದಲ್ಲಿ ನಟಿಸ್ತಾ ಇಲ್ಲ. ಆದರೆ, ಕ್ಯಾಮೆರಾ ಹಿಂದೆ ಅವ್ನ ಇನ್‌ವಾಲ್ವ್‌ಮೆಂಟ್ ಇದೆ. ಅವ್ನ ಜೊತೆ ಸ್ಟೋರಿ ಡಿಸ್ಕಶನ್ ಮಾಡಿದೀನಿ. ಸಜೆಶನ್ ಕೂಡ ಕೊಟ್ಟಿದಾನೆ.' ಎಂದಿದ್ದಾರೆ 'ರಂಗಿ ತರಂಗ' ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ. 

 

ಈ ಮೊದಲು ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗು ಅನೂಪ್ ಭಂಡಾರಿ ಕಾಂಬಿನೇಶನ್‌ ಇತ್ತು. ಆ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಸಹ ಇಡಲಾಗಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೆಚ್ಚುಗೆ ಗಳಿಸಲಿಲ್ಲ, ಕಲೆಕ್ಷನ್ ಮಾಡಲಿಲ್ಲ. ಇದೀಗ ಮತ್ತೆ ಅನೂಪ್ ಹಾಗೂ ಸುದೀಪ್ ಇಬ್ಬರೂ ಒಂದಾಗಿದ್ದಾರೆ. ಮತ್ತೊಮ್ಮೆ ನಿರೀಕ್ಷೆ ಗರಿಗೆದರಿದೆ. ಆದರೆ, ಸಿನಿಮಾ ಈಗಷ್ಟೇ ಸೆಟ್ಟೇರಿದೆ, ಶೂಟಿಂಗ್ ಬಳಿಕ ತೆರೆಗೆ ಬರಬೇಕು, ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು. 

ದಿವ್ಯಾ ವಸಂತ 'ಗೌರಿ-ಗಣೇಶ' ಹಬ್ಬಕ್ಕೆ ವಿಶ್ ಮಾಡಿ, ವೀಡಿಯೋದಲ್ಲಿ ಹೇಳಿದ್ದೇನು ನೋಡಿ!

click me!