ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಧಿಕಾ ಕುಮಾರಸ್ವಾಮಿ? ಜಾತಕದ ಬಗ್ಗೆ ನಟಿ ಹೇಳಿದ್ದೇನು?

By Suchethana D  |  First Published Sep 8, 2024, 12:18 PM IST

ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ನಟಿಯ ಜಾತಕದಲ್ಲಿ ಏನಿದೆ? ಸಂದರ್ಶನದಲ್ಲಿ ಎಲ್ಲಾ ವಿವರಿಸಿದ ನಟಿ ಹೇಳಿದ್ದೇನು? 
 


ಎವರ್​ಗ್ರೀನ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ರಾಧಿಕಾ ಕುಮಾರಸ್ವಾಮಿ ಹಲವು ವರ್ಷಗಳ ಗ್ಯಾಪ್​ ಬಳಿಕ ಸಿನಿಮಾಕ್ಕೆ ಮತ್ತೆ ಮರಳಿ ಸೂಪರ್​ಹಿಟ್​ ಚಿತ್ರಗಳನ್ನು ನೀಡುತ್ತಿದ್ದಾರೆ. ಇದೀಗ ಅವರ ಬಹು ನಿರೀಕ್ಷಿತ ಭೈರಾದೇವಿ ಚಿತ್ರ ರಿಲೀಸ್​ಗೆ ರೆಡಿಯಾಗಿದೆ. ಬರುವ ಅಕ್ಟೋಬರ್ 3 ರಂದು ಸಿನಿಮಾ ರಿಲೀಸ್ ಆಗಲಿದೆ. ದೇವಿ ಭಕ್ತೆ ಆಗಿರುವ ರಾಧಿಕಾ  ಈ ಚಿತ್ರದಲ್ಲಿ  ಕಾಳಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ಅಘೋರಿಯಾಗಿ ಪಾತ್ರ ಮಾಡುವ ಮೂಲಕ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಈ ಸಮಯದಲ್ಲಿ ನಟಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ತಮ್ಮ ಬದುಕಿನ ಹಲವು ಮಜಲುಗಳ ಬಗ್ಗೆ ತೆರೆದಿಟ್ಟಿದ್ದಾರೆ. ಖಾಸಗಿ ಜೀವನ, ಸಿನಿಮಾ ರಂಗ, ಕುಟುಂಬ... ಹೀಗೆ ಎಲ್ಲವುಗಳ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.

ಇದೇ ಸಮಯದಲ್ಲಿ ಅವರಿಗೆ ಎದುರಾದದ್ದು ರಾಜಕೀಯಕ್ಕೆ ಎಂಟ್ರಿ ಕೊಡುತ್ತೀರಾ ಎನ್ನುವ ವಿಷಯ. ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಅವರ ತವರಿನಲ್ಲಿ ಯಾರಿಗೂ ರಾಜಕೀಯದ ನಂಟು ಇಲ್ಲ. ಅಷ್ಟಕ್ಕೂ ಸಿನಿಮಾ ನಂಟು ಕೂಡ ಇಲ್ಲ. ಆದರೂ ರಾಧಿಕಾ ಅವರು ಸಿನಿಮಾಕ್ಕೆ ಎಂಟ್ರಿ ಕೊಟ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.  ಆದರೆ ರಾಧಿಕಾ ಅವರಿಗೆ ರಾಜಕೀಯದ ಎಂಟ್ರಿಯ ಬಗ್ಗೆ ಪ್ರಶ್ನೆಗಳು ಸಹಜವಾಗಿಯೇ ಕೇಳಲಾಗುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ಸಂದರ್ಶನದ ಸಮಯದಲ್ಲಿ ರಾಧಿಕಾ ಅವರು, ತಾವು  ರಾಜಕೀಯಕ್ಕೆ ಬರುವ ಸುದ್ದಿಗಳನ್ನು ನಿರಾಕರಿಸಿದ್ದರು.   ನನ್ನ ಕುಟುಂಬದವರು ರಾಜಕೀಯಕ್ಕೆ ಬಾ ಎಂದು ಒತ್ತಡ ಹಾಕುತ್ತಿದ್ದಾರೆ.  ಆದರೆ, ಸದ್ಯಕ್ಕೆ ನಾನು ಸಿನಿಮಾ ಮಾಡಬೇಕು ಎಂಬ ಆಸೆಯಲ್ಲಿದ್ದೇನೆ.  ಆಮೇಲೆ ರಾಜಕೀಯ ನೋಡೋಣ. ರಾಜಕೀಯಕ್ಕೆ ಬರಲೇಬೇಕು ಎಂಬ ಉದ್ದೇಶ ಸದ್ಯಕ್ಕಂತೂ ಇಲ್ಲ ಎಂದು ಹೇಳಿದ್ದರು. ಈ ಮೂಲಕ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡುವುದೇ ಇಲ್ಲ ಎಂದೇನೂ ಹೇಳಿರಲಿಲ್ಲ. 

Tap to resize

Latest Videos

undefined

ಶಮಿಕಾ ಭೈರಾದೇವಿಗೆ ಕೊಟ್ಟ ಆಡಿಷನ್ ನೋಡಿ ಅತ್ತುಬಿಟ್ಟೆ... ಸಿನಿಮಾಕ್ಕೆ ಪುತ್ರಿ ಎಂಟ್ರಿಗೆ ರಾಧಿಕಾ ಹೇಳಿದ್ದೇನು?

ಆದರೆ, ಇದೀಗ ರಾಧಿಕಾ ಅವರ ನಿಲುವು ಸ್ವಲ್ಪ ಭಿನ್ನವಾಗಿದೆ. ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯನ್ನು ಕೊಟ್ಟಿದ್ದಾರೆ. ಇಲ್ಲಿಯವರೆಗೂ ಸಿನಿಮಾದ ಬಗ್ಗೆ ಗಮನ ಹರಿಸಿದ್ದೆ. ಆದರೆ ಹಣೆಬರಹ ಏನು ಎಂದು ಹೇಳಲು ಆಗುವುದಿಲ್ಲವಲ್ಲ. ಒಂದು ವೇಳೆ ಸಂದರ್ಭ ಬಂದರೆ ರಾಜಕೀಯ ಬೇಡ ಎಂದು ಹೇಳಲ್ಲ. ಆದರೆ ಸದ್ಯ ಅದರ ಬಗ್ಗೆ ಏನೂ ಪ್ಲ್ಯಾನ್​ ಇಲ್ಲ ಎಂದಿದ್ದಾರೆ. ಹಾಗೆ ನೋಡಿದರೆ, ನನ್ನ ಇಡೀ ಕುಟುಂಬದಲ್ಲಿ ಸಿನಿಮಾದಲ್ಲಿ ಯಾರೂ ಗುರುತಿಸಿಕೊಂಡಿರಲಿಲ್ಲ, ರಾಜಕೀಯದವರೂ ಇಲ್ಲ. ಆದರೆ ನನ್ನ ಜಾತಕದಲ್ಲಿ ನಾನು ಸಿನಿಮಾಕ್ಕೆ ಬರುತ್ತೇನೆ ಎಂದು ಇತ್ತು, ಆದ್ದರಿಂದ ಬಂದಿದ್ದೇನೆ. ಇನ್ನು ಜಾತಕದಲ್ಲಿ ರಾಜಕೀಯದಲ್ಲಿ ನಾನು ಗುರುತಿಸಿಕೊಳ್ಳುವೆ ಎಂದೂ ಇದೆ. ನೋಡೋಣ, ಹೇಗೆ ಸಂದರ್ಭ ಬರುತ್ತದೆಯೋ ಈಗ ಹೇಳುವುದು ಕಷ್ಟ ಎನ್ನುವ ಮೂಲಕ ಶೀಘ್ರದಲ್ಲಿಯೇ ರಾಜಕೀಯ ಸೇರುವ ಕಾಮನೆಯನ್ನು ವ್ಯಕ್ತಪಡಿಸಿದ್ದಾರೆ ರಾಧಿಕಾ ಕುಮಾರಸ್ವಾಮಿ. 

ನನಗೆ ಈಗಲೂ ಚುನಾವಣೆ ಸಂದರ್ಭಗಳಲ್ಲಿ ಪ್ರಚಾರಕ್ಕೆ ಆಹ್ವಾನ ಬರುತ್ತದೆ. ಅದರೆ ನನಗೆ ಸಿನಿಮಾಕ್ಕೇ ಟೈಮ್​  ಕೊಡಲು ಆಗ್ತಿಲ್ಲ. ಆದ್ದರಿಂದ ಇನ್ನು ಪ್ರಚಾರಕ್ಕೆ ಹೋಗುವುದು ಕಷ್ಟ. ಬೇರೆಯವರ ಪ್ರಚಾರ ಮಾಡುವುದಕ್ಕಿಂತಲೂ ನಾನು ರಾಜಕೀಯಕ್ಕೆ ಬಂದಾಗ, ನನ್ನ ಪ್ರಚಾರ ನಾನು ಮಾಡಿಕೊಳ್ಳುವುದರಲ್ಲಿಯೇ ಖುಷಿ ಇದೆ ಎಂದು ಹೇಳುವ ಮೂಲಕ, ರಾಜಕೀಯ ಎಂಟ್ರಿ ಫಿಕ್ಸ್​ ಎಂಬಂತೆ ಮಾತನಾಡಿದ್ದಾರೆ. ಇದರ ಹೊರತಾಗಿಯೂ ರಾಜಕೀಯಕ್ಕಿಂತ ತಮಗೆ ಸಿನಿಮಾ ಅಂದ್ರೇನೇ ಇಷ್ಟ ಎಂದು ಹೇಳುವುದನ್ನೂ ಮರೆಯಲಿಲ್ಲ. ಸಿನಿಮಾ ಜೀವನ ಕಲರ್​ಫುಲ್​ ಆಗಿರುತ್ತದೆ, ತುಂಬಾ ಜನ ಇಷ್ಟ ಪಡ್ತಾರೆ, ಒಳ್ಳೊಳ್ಳೆ ಕಾಸ್ಟ್ಯೂಮ್​ ಹಾಕಿಕೊಳ್ಳಬಹುದು, ಲೈಫ್​ ಎಂಜಾಯ್​ ಮಾಡಬಹುದು, ಆದ್ದರಿಂದ ಸಿನಿಮಾ ಅಂದ್ರೆ ತುಂಬಾ ಇಷ್ಟ. ಹಾಗೆಂದು ರಾಜಕೀಯದ ಆಗುಹೋಗುಗಳ ಮೇಲೂ ಆಗಾಗ್ಗೆ ಗಮನ ಹರಿಸುತ್ತಲೇ ಇರುತ್ತೇನೆ ಎಂದಿದ್ದಾರೆ ರಾಧಿಕಾ. 

ಶೂಟಿಂಗ್​ನಲ್ಲಿ ಶ್ರೇಷ್ಠಾಳ ಮುಖಕ್ಕೆ ಬೂದಿ ಎರೆಚಿದಾಗ ಎಲ್ಲೆಲ್ಲೋ ಹೋಗಿ ಏನೇನಾಯ್ತು ನೋಡಿ...!

click me!