
ರಾಕಿಂಗ್ ಸ್ಟಾರ್ , ಪ್ಯಾನ್ ಇಂಡಿಯಾ ಹೀರೋ, ರಾಕಿ ಭಾಯ್ ಹೀಗೆ ನಾನಾಹೆಸರುಗಳಿಂದ ಕರೆಸಿಕೊಳ್ಳುವ ಕೆಜಿಎಫ್ ಸ್ಟಾರ್ ಯಶ್ (Yash) ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಯಶ್ ಮುಂದಿನ ಸಿನಿಮಾ ಅನೌನ್ಸ್ ಮಾಡುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ. ಹೌದು, ಯಶ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಇನ್ನು ರಿವೀಲ್ ಆಗಿಲ್ಲ. ಆದರೆ ಆಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಕೆಜಿಎಫ್-2 (KGF 2) ಬಳಿಕ ಯಶ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇನ್ನು ಹೆಚ್ಚಾಗಿದೆ.
ಈಗಾಗಲೇ ಯಶ್ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಯಶ್ ಮುಂದಿನ ಸಿನಿಮಾ ತೆಲುಗು ಸ್ಟಾರ್ ನಿರ್ದೇಶಕರ ಜೊತೆ ಮಾಡುತ್ತಿದ್ದಾರೆ, ಯಶ್ ಸಿನಿಮಾಗೆ ಪರಭಾಷೆಯ ಖ್ಯಾತ ನಿರ್ಮಾಪಕರು ಬಂಡವಾಳ ಹೂಡುತ್ತಿದ್ದಾರೆ, ಬಾಲಿವುಡ್, ಕಾಲಿವುಡ್ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರೆ ಹೀಗೆ ತರವೇವಾರಿ ಸುದ್ದಿಗಳು ಕೇಳಿಬರುತ್ತಿದೆ. ಆದರೆ ಯಶ್ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸಿನಿಮಾ ಅನೌನ್ಸ್ ಮಾಡುವುದಕ್ಕೂ ಮೊದಲು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
Yash19 ಟ್ರೆಂಡಿಂಗ್
ಅಂದಹಾಗೆ ಯಶ್ ಈಗಾಗಲೇ 18 ಸಿನಿಮಾಗಳಲ್ಲಿ ನಟಿಸಿದ್ದಾರೆ. 19ನೇ ಸಿನಿಮಾ ಘೋಷಣೆ ಮಾಡಬೇಕಿದೆ. ಅಭಿಮಾನಿಗಳು ಯಶ್ ಹೊಸ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್-2 ರಿಲೀಸ್ ಆಗಿ ಅನೇಕ ತಿಂಗಳಾದರೂ ಯಶ್ ಹೊಸ ಸಿನಿಮಾ ಇನ್ನು ಅನೌನ್ಸ್ ಆಗಿಲ್ಲ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಟ್ ಮಾಡುತ್ತಿದ್ದಾರೆ. Yash19 ಎಂದು ಬರೆದು ಹ್ಯಾಟ್ ಹಾಕಿ ವೈರಲ್ ಮಾಡುತ್ತಿದ್ದಾರೆ. ಇಷ್ಟೆಲ್ಲ ವೈರಲ್ ಆಗಿದ್ದರು ಯಶ್ ಮತ್ತು ಅವರ ತಂಡದ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಯಶ್ ಸಿನಿಮಾಗಾಗಿ ಸಾವಿರ ಕೋಟಿ ಇನ್ವೆಸ್ಟ್ ಮಾಡಲು ನಿಂತ್ರು ಪ್ರೊಡ್ಯೂಸರ್ಸ್!
ಮಫ್ತಿ ನಿರ್ದೇಶಕರ ಜೊತೆ ಯಶ್ ಸಿನಿಮಾ?
ಅಂದಹಾಗೆ ಯಶ್ ಮುಂದಿನ ಸಿನಿಮಾಗೆ ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಮುಂದಿನ ಸಿನಿಮಾ ಕೆಲಸ ನಡೆಯುತ್ತಿದೆ ಎಂದು ಯಶ್ ಈ ಮೊದಲೇ ಹೇಳಿದ್ದರು. ಆದರೆ ಯಾರ ಜೊತೆ ಎನ್ನುವ ಬಗ್ಗೆ ಬಹಿರಂಗ ಪಡಿಸಿರಲಿಲ್ಲ. ತೆರೆಮರೆಯಲ್ಲಿ ಯಶ್ 19ನೇ ಸಿನಿಮಾದ ಕೆಲಸ ನಡೆಯುತ್ತಿದೆ. ಆದರೆ ಯಾವಾಗ ಅನೌನ್ಸ್ ಮಾಡುತ್ತಾರೆ ಎನ್ನುವ ಮಾಹಿತಿ ಇನ್ನು ಬಹಿರಂಗವಾಗಿಲ್ಲ.
ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'KGF Chapter 2'
ದಿಲ್ ರಾಜ್, ಶಂಕರ್ ಜೊತೆ ಯಶ್ ಸಿನಿಮಾ?
ಅಂದಹಾಗೆ ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಯಶ್ ಮುಂದಿನ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡುತ್ತಾರೆ ಎನ್ನಲಾಗುತ್ತಿದೆ. ಇನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಯಶ್ ಕಡೆಯಿಂದ ಯಾವುದೇ ಉತ್ತರವಿಲ್ಲ. ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಶ್ ಮುಂದಿನ ಸಿನಿಮಾಗಾಗಿ ಭಾರತದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇಷ್ಟೆಲ್ಲ ಸುದ್ದಿ ವೈರಲ್ ಆಗುತ್ತಿದ್ದರು ಯಶ್ ಕೆಜಿಎಫ್-2 ಸಕ್ಸಸ್ ಬಳಿಕ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಆಗಾಗ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿರುವ ಫೋಟೋ ಮತ್ತು ವಿಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಯಶ್ ಕಡೆಯಿಂದ ಹೊಸ ಸಿನಿಮಾದ ಮಾಹಿತಿ ಯಾವಾಗ ಹೊರಬೀಳಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.