
ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿರುವ 777 ಚಾರ್ಲಿ ಸಿನಿಮಾದಲ್ಲಿ ಸಿನಿ ರಸಿಕರ ಗಮನ ಸೆಳೆದಿದ್ದು ಪುಟ್ಟ ಹುಡುಗಿ ಶಾರ್ವರಿ. ಪಪ್ಪಿ ಪಾರ್ಕಲ್ಲಿತ್ತು ಅಂದುಕೊಂಡು ಎಲ್ಲರ ಮನೆ ಮಗಳಾಗಿಬಿಟ್ಟಿದ್ದಾಳೆ ಈ ಹುಡುಗಿ. ವಿದ್ಯಾಭ್ಯಾಸದ ಜೊತೆಗೆ ನಟನೆ, ನೃತ್ಯ, ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಶಾರ್ವರಿಗೆ ಪುನೀತ್ ರಾಜ್‌ಕುಮಾರ್ ಅಂದ್ರೆ ತುಂಬಾನೇ ಇಷ್ಟವಂತೆ. ಅವರ ಜೊತೆ ನಟಿಸುವು ಅವಕಾಶವೂ ಸಿಕ್ಕಿತ್ತಂತೆ, ಅವರು ಕೊಟ್ಟ ಹಣ ಎನು ಮಾಡಬೇಕು ಎಂದು ಪೋಷಕರು ಚಿಂತಿಸುತ್ತಿದ್ದಾರೆ.
'ಪುನೀತ್ ರಾಜ್‌ಕುಮಾರ್ ಸರ್‌ನ ನಾನು ಎರಡು ಸಲ ಭೇಟಿ ಮಾಡಿದ್ದೀನಿ. ಒಂದು ಪೈಲ್ವಾನ್ ಸಿನಿಮಾ ಕಾರ್ಯಕ್ರಮದಲ್ಲಿ ಮತ್ತೊಂದು ಸಲ ಖಾಸಗಿ ಹೋಟೆಲ್‌ನಲ್ಲಿ. ಅವರೇ ನನ್ನ ಬೆನ್ನು ತಟ್ಟಿ ನೀನು ಡ್ರಾಮ ಜ್ಯೂನಿಯರ್ಸ್ ಶಾರ್ವರಿ ಅಲ್ವಾ ಎಂದು ಕೇಳಿದ್ದರು. ಅವರು ನನ್ನ ಹೆಸರು ನೆನಪು ಇಟ್ಟಿಕೊಂಡಿದ್ದು ನೋಡಿ ಭಾವುಕಳಾದೆ. ಅಪ್ಪು ಸರ್ ಇದ್ದಾಗಲೇ ನನಗೆ ದ್ವಿತ್ವ ಸಿನಿಮಾ ಆಫರ್ ಬಂದಿತ್ತು' ಎಂದು ಶಾರ್ವರಿ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.
'ಅಪ್ಪು ಸರ್ ಜೊತೆ ಅಭಿನಯಿಸಬೇಕು ಅನ್ನೋದು ಆಕೆಯ ದೊಡ್ಡ ಕನಸು. ಅವರಿಲ್ಲ ಎಂದು ತಿಳಿದ ಮೇಲೆ ಅವರ ಜರ್ನಿನೇ ಸಾಕು ಮಾಡಬೇಕು ಅಂದುಕೊಂಡಿದ್ದೆ ಅಷ್ಟು ಬೇಸರ ಆಗಿತ್ತು. ದ್ವಿತ್ವ ಮೊದಲು ಶಾರ್ವರಿಗೆ O2 ಸಿನಿಮಾದಲ್ಲಿ ಆಫರ್ ಬಂದಿತ್ತು.ನಾಯಕಿಯ ಬಾಲ್ಯದ ಪಾತ್ರದಲ್ಲಿ ಶಾರ್ವರಿ ಕಾಣಿಸಿಕೊಳ್ಳಬೇಕಿತ್ತು. ಅವರ ಅಸಿಸ್ಟೆಂಟ್ ಕರೆ ಮಾಡಿ ನನಗೆ ಅಕೌಂಟ್ ನಂಬರ್ ಕೇಳಿ ಹಣ ಸೆಂಡ್ ಮಾಡಿದ ತಕ್ಷಣವೇ ಹಣ ಹಾಕಿ ಕರೆ ಮಾಡಿ ಹೇಳಿದ್ದರು. ಪಿಆರ್‌ಕೆ ಸಂಸ್ಥೆಯಲ್ಲಿ ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ನೋಡಿ. ಮೂರು ದಿನದ ಚಿತ್ರೀಕರಣ ಪುಟ್ಟ ಹುಡುಗಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ನೋಡಿ' ಎಂದು ಶಾರ್ವರಿ ತಾಯಿ ಮಾತನಾಡಿದ್ದಾರೆ.
'777 ಚಾರ್ಲಿ'ಯ ಡಿಲೀಟ್ ದೃಶ್ಯವನ್ನು ರಿಲೀಸ್ ಮಾಡಿದ ರಕ್ಷಿತ್ ಟೀಂ; ವಿಡಿಯೋ ವೈರಲ್
'ಅಪ್ಪು ಸರ್‌ಗೆ ಈ ರೀತಿ ಆದ ಮೇಲೆ ನಾವು ಪಿಆರ್‌ಕೆ ಸಂಸ್ಥೆ ಅವರಿಗೆ ಕರೆ ಮಾಡಿ ನೀವು ಕೊಟ್ಟಿರುವ ಹಣ ನಮ್ಮ ಬಳಿ ಇದೆ ಏನು ಮಾಡಬೇಕು ಹೇಳಿ? ವಾಪಸ್ ಸೆಂಡ್ ಮಾಡೋದ ಎಂದು ಕೇಳಿದೆವು. ಅವರು ಹೇಳಿದ್ದರು ಯಾವುದೋ ಸಿನಿಮಾ ಮಾಡಬೇಕು ಅಂತಿದೆ, ಈಗ ಇರುವ ಪ್ರಾಜೆಕ್ಟ್‌ಗಳನ್ನು ಮುಗಿಸಿಕೊಂಡು ಅದನ್ನು ಶುರು ಮಾಡೋಣ ಸದ್ಯಕ್ಕೆ ನೀವು ದುಡ್ಡು ಹಾಕುವ ಮಾತುಗಳು ಬೇಡಿ ಅಂದ್ರು. ನೋಡಿ ಇಷ್ಟು ಒಳ್ಳೆಯ ಜನರು ನಮ್ಮ ಜೊತೆ ಇದ್ದಾರೆ ಅವರು ಇನ್ನೂ 100 ವರ್ಷ ಇರಬೇಕಿತ್ತು. ಚಿತ್ರರಂಗಕ್ಕೆ ಅಪ್ಪು ಸರ್ ರೀತಿ ಜನರು ಬೇಕು. ಹಣ ಹಾಕಿದ್ದೀವಿ ಅಂತ ಅವರು ಕರೆ ಮಾಡಲ್ಲ ಅವರು. ಆದರೆ ಆ ಹಣ ಈಗಲ್ಲೂ ಹಾಗೆ ಇಟ್ಟುಕೊಂಡಿದ್ದೀವಿ. ಸಿನಿಮಾ ಆದರೆ ಅಶ್ವಿನಿ ಮೇಡಂನ ಭೇಟಿ ಮಾಡುವ ಅವಕಾಶ ಸಿಗುತ್ತೆ ಇಲ್ಲವಾದರೆ ಆ ಹಣದಿಂದ ಸೇವ ಕಾರ್ಯ ಮಾಡುತ್ತೀವಿ' ಎಂದು ಶಾರ್ವರಿ ತಾಯಿ ಹೇಳಿದ್ದಾರೆ.
ಒಟಿಟಿಯಲ್ಲಿ ಬರ್ತಿದೆ ರಕ್ಷಿತ್ ಶೆಟ್ಟಿಯ '777 ಚಾರ್ಲಿ'; ಯಾವಾಗ?
'ಜೇಮ್ಸ್ ಸಿನಿಮಾದಲ್ಲಿ ಅಪ್ಪು ಸರ್ ಜೊತೆ ಅಭಿನಯಿಸಲು ನನ್ನ ಮಗಳಿಗೆ ಅವಕಾಶ ಕೊಟ್ಟರು ನಾನು ತಪ್ಪು ಮಾಡಿದೆ. ಕೊರೋನಾ ಮೊದಲನೇ ಅಲೆ ಅಲ್ವಾ ವ್ಯಾಕ್ಸಿನ್ ಕೂಡ ಇರಲಿಲ್ಲ ಆ ಭಯದಲ್ಲಿ ನಾನು ಸಿನಿಮಾ ರಿಜೆಕ್ಟ್ ಮಾಡಿದೆ. ಈ ಸಮಯದಲ್ಲಿ ಸಿನಿಮಾ ಬೇಡ ಅಂದಿದಕ್ಕೆ ಆಕೆ ತುಂಬಾನೇ ಸತ್ತಿದ್ದಳು. ಈಗ ಆ ಘಟನೆ ನನಪು ಮಾಡಿಕೊಂಡರೆ ಬೇಸರ ಆಗುತ್ತದೆ. ಕೆಲವು ದಿನಗಳ ಹಿಂದೆ ಆಕೆ ಒಂದು ವಿಚಾರ ಹೇಳಿದ್ದಳು. ನನಗೆ ನಾಲ್ಕು ಕನಸು ಇತ್ತು. ಒಂದು ಮೋದಿ ಸರ್‌ನ ಭೇಟಿ ಮಾಡಿದ್ದೀನಿ, ಒಂದು ನಾಯಿ ಜೊತೆ ಸಿನಿಮಾ ಮಾಡಿದ್ದೀನಿ, ಒಂದು ದೇವಿ ಪಾತ್ರ ಮಾಡಬೇಕು ಮತ್ತೊಂದು ಅಪ್ಪು ಸರ್ ಜೊತೆ ಸಿನಿಮಾ ಮಾಡಬೇಕು ಅಂತ. ಮೋದಿ ಅವರನ್ನು ಭೇಟಿ ಮಾಡಿದ್ದೀನಿ ನಾಯಿ ಜೊತೆ ಸಿನಿಮಾ ಮಾಡಿದ್ದೀವಿ ಒಂದಲ್ಲ ಒಂದು ದಿನ ದೇವಿ ಪಾತ್ರ ಮಾಡಬಹುದು ಆದರೆ ಎಂದೂ ಜೀವನದಲ್ಲಿ ನಾನು ಅಪ್ಪು ಸರ್ ಜೊತೆ ಸಿನಿಮಾ ಮಾಡಲು ಆಗುವುದಿಲ್ಲ ಎಂದಳು' ಎಂದಿದ್ದಾರೆ ಶಾರ್ವರಿ ತಾಯಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.