
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith shetty) ನಿರ್ಮಿಸಿ, ನಟನೆ ಮಾಡಿರುವ 777 ಚಾರ್ಲಿ (777 charlie) ಸಿನಿಮಾ ಬ್ಲಾಕ್ ಬಸ್ಟರ್ ಸಕ್ಸಸ್ ಕಂಡಿದೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ಬಂದಿರುವ 777 ಚಾರ್ಲಿ ಚಿತ್ರವನ್ನು ಎಲ್ಲಾ ಭಾಷೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಇತ್ತೀಚಿಗಷ್ಟೆ ಸಿನಿಮಾತಂಡ 25ನೇ ದಿನದ ಸಂಭ್ರಮವನ್ನು ಆಚರಣೆ ಮಾಡಿದ್ದರು. ಸಿನಿಮಾದ ಸಕ್ಸಸ್ ಪಾರ್ಟಿ ಹಮ್ಮಿಕೊಂಡಿದ್ದ ಸಿನಿಮಾತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ಸಂತಸವನ್ನು ಸಿನಿಮಾತಂಡ ಹಂಚಿಕೊಂಡಿತು. ಜೊತೆಗೆ ಸಿನಿಮಾದಿಂದ ಬಂದ ಲಾಭದ ಸ್ವಲ್ಪ ಪ್ರಮಾಣವನ್ನು ಚಿತ್ರಕ್ಕಾಗಿ ದುಡಿದ ತಂಡಕ್ಕೆ ಹಂಚುವುದಾಗಿ ಬಹಿರಂಗ ಪಡಿಸಿದ್ದರು.
777 ಚಾರ್ಲಿ ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾತಂಡ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದೆ. ಹೌದು, 777 ಚಾರ್ಲಿ ಸಿನಿಮಾದಿಂದ ಡಿಲೀಟ್ ಮಾಡಿದ್ದ ದೃಶ್ಯವನ್ನು ಚಿತ್ರತಂಡ ಶೇರ್ ಮಾಡಿದೆ. ಧರ್ಮ ಮತ್ತು ಚಾರ್ಲಿ ಇಬ್ಬರು ಆದ್ರಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ದೃಶ್ಯ ಇದಾಗಿದೆ. ಈ ದೃಶಶ್ಯ ಸಿನಿಮಾದಿಂದ ಡಿಲೀಟ್ ಮಾಡಲಾಗಿದೆ. ಆದರೀಗ ಸಿನಿಮಾ ಸಕ್ಸಸ್ ಆಗಿ ರನ್ ಆಗುತ್ತಿರುವ ಖುಷಿಯಲ್ಲಿ ಡಿಲೀಟ್ ಮಾಡಿದ್ದ ದೃಶ್ಯವನ್ನು ಅಭಿಮಾನಿಗಳ ಮುಂದಿದೆ ಚಿತ್ರಚಂಡ.
ಧರ್ಮನಿಗೆ ಕೆಲಸ ಬಿಟ್ಟರೆ ಬೇರೆ ಪ್ರಪಂಚನೆ ಇಲ್ಲ. ಮನೆ ಫ್ಯಾಕ್ಟರಿ ಎಂದು ಮುಳುಗಿದ್ದ ಧರ್ಮ ಲೈಫ್ ಗೆ ಚಾರ್ಲಿ ಎಂಟ್ರಿಯಾಗುತ್ತೆ. ನಂತರ ಧರ್ಮ ಹೇಗೆ ಬದಲಾಗುತ್ತಾನೆ ಎನ್ನುವುದೆ ಸಿನಿಮಾ. ಈ ಸಿನಿಮಾದಲ್ಲಿ ಆದ್ರಿಕಾ ಪಾತ್ರದಲ್ಲಿ ಬಾಲನಟಿ ಶಾರ್ವರಿ ನಟಿಸಿದ್ದಾರೆ. ಆದ್ರಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಧರ್ಮ ಮತ್ತು ಚಾರ್ಲಿ ಇಬ್ಬರು ಭೇಟಿನೀಡುವ ದೃಶ್ಯವನ್ನು ಸಿನಿಮಾತಂಡ ಶೂಟ್ ಮಾಡಿತ್ತು. ಆದರೆ ಅವಧಿ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಈ ದೃಶ್ಯವನ್ನು ಸಿನಿಮಾದಲ್ಲಿ ಸೇರಿಸಿರಲಿಲ್ಲ. ಆದರೀಗ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ ರಕ್ಷಿತ್ ಅಂಡ್ ಟೀಂ.
ಶ್ವಾನ ಪ್ರೀತಿಯಿಂದ ಗಳಿಸಿದ ಹಣವನ್ನು ಶ್ವಾನಕ್ಕೇ ಅರ್ಪಿಸಲು ಮುಂದಾದ ಸಿಂಪಲ್ ಸ್ಟಾರ್
ಸಿನಿಮಾದಿಂದ ಡಿಲೀಟ್ ಆಗಿರುವ ಈ ದೃಶ್ಯಕ್ಕೀಗ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ. ಈ ವಿಡಿಯೋವನ್ನು ಅಭಿಮಾನಿಗಳು ಸಹ ಶೇರ್ ಮಾಡಿ ಆದ್ರಿಕಾ ಹುಟ್ಟುಹಬ್ಬ ಸಂಭ್ರಮಿಸುತ್ತಿದ್ದಾರೆ.
ಮುದ್ದಿನ ನಾಯಿಯೊಂದಿಗೆ '777 ಚಾರ್ಲಿ' ಸಿನಿಮಾ ನೋಡಿದ ಜನಾರ್ದನ ರೆಡ್ಡಿ!
25 ದಿನಕ್ಕೆ 125 ಕೋಟಿ
ನಿರೀಕ್ಷೆಗೂ ಮೀರಿದ ಮೆಚ್ಚುಗೆ ಪಡೆದುಕೊಂಡಿರುವ ಚಾರ್ಲಿ ಸಿನಿಮಾ 25 ದಿನಗಳನ್ನು ಪೂರೈಸಿದೆ. ಕೇವಲ 25 ದಿನಗಳಲ್ಲಿ 150 ಕೋಟಿ ಕಲೆಕ್ಷನ್ ಮಾಡಿರುವ ಕಾರಣ ನಟ ರಕ್ಷಿತ್ ಶೆಟ್ಟಿ 15% ಲಾಭವನ್ನು ಹಂಚಲು ಮುಂದಾಗಿದ್ದಾರೆ. 10% ಲಾಭ ತಂಡದಲ್ಲಿ ಕೆಲಸ ಮಾಡಿರುವ ತಂತ್ರಜ್ಞರಿಗೆ, ಶ್ವಾನಗಳನ್ನು ಸಾಕುತ್ತಿರುವ NGO ಗಳಿಗೆ 5% ಲಾಭ ಕೊಡಲು ಮುಂದಾಗಿದ್ದಾರೆ. ರಕ್ಷಿತ್ ಬಂದ ಲಾಭದಲ್ಲಿ ತಂಡಕ್ಕೆ ಹಂಚುತ್ತಿರುವುದು ಇದೇ ಮೊದಲಲ್ಲ. ಕಿರಿಕ್ ಪಾರ್ಟಿ ಸಮಯದಲ್ಲೂ ರಕ್ಷಿತ್ ಬಂದ ಲಾಭದಲ್ಲಿ ತಂಡಕ್ಕೆ ಶೇರ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.