ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ ಫಾಲೋವಿಂಗ್ ಇದೆ. ಆದರೆ ಇಂದಿಗೂ ಈ ಪ್ಯಾನ್ ಇಂಡಿಯಾ ಸ್ಟಾರ್ ನಟನ ಮೊದಲ ಆದ್ಯತೆ ಪ್ರೇಕ್ಷಕನಾಗಿ ಆಡಿಯನ್ಸ್ ಸೀಟ್‌ನಲ್ಲಿ ಕೂತು ಸಿನಿಮಾ ನೋಡೋದು. ಇದ್ಯಾಕೆ ಅಂತ ಯಶ್ ಹೇಳಿದ್ದಾರೆ.
ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅಂದರೆ ಸ್ಯಾಂಡಲ್‌ವುಡ್ (Sandalwood) ಏನು, ಇಡೀ ಇಂಡಿಯಾದ ಸಿನಿಮಾ ಇಂಡಸ್ಟ್ರಿ ಇವರ ಕಡೆ ನೋಡುತ್ತೆ. ಆ ಲೆವೆಲ್‌ನ ಸ್ಟಾರ್ ಡಮ್ ಇರುವ ನಟ ಯಶ್. ಬಹಳ ಗಮನ ಸೆಳೆದ ಇವರ ಚಿತ್ರ ಕೆಜಿಎಫ್ 1 (KGF). ಬಾಕ್ಸ್ ಆಫೀಸಲ್ಲಿ 250 ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದ ಚಿತ್ರ. ಇದೀಗ ಎಲ್ಲೆಡೆ ಕೆಜಿಎಫ್ 2ನ ಹವಾ ಶುರುವಾಗಿದೆ. ಯಾವಾಗ ಟ್ರೈಲರ್, ಸಿನಿಮಾ ಅಪ್‌ಡೇಟ್ ಕೊಡಿ ಅಂತ ಹಲವು ತಿಂಗಳುಗಳಿಂದ ಬೇಡಿಕೆ ಇಡುತ್ತಾ ಬಂದಿದ್ದ, ಕೆಜಿಎಫ್ ಟೀಮ್ ಗಮನ ಸೆಳೆಯಲು ಏನೇನೆಲ್ಲ ಟ್ರಿಕ್ ಮಾಡಿದ್ದ ಫ್ಯಾನ್ಸ್ ಗೆ ಟೀಮ್ ಕೆಜಿಎಫ್ ಬಿರಿಯಾನಿ ಊಟವನ್ನೇ ಫಸ್ಟ್ ಕೊಡಲು ನಿರ್ಧರಿಸಿದೆ.
ಸೋ, ಚಿತ್ರದ ಟ್ರೈಲರ್ ಮಾರ್ಚ್ 8ರಂದು ರಿಲೀಸ್ ಆಗಲಿದೆ. ಮಾರ್ಚ್ 8ಕ್ಕೊಂದು ವಿಶೇಷ ಇದೆ. ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನ (women Day). ಕೆಜಿಎಫ್ 2ಗೂ ಮಹಿಳೆಯರಿಗೂ ಏನಾದರೂ ಸಂಬಂಧ ಇದೆಯಾ ಅಂತ ನೋಡಿದರೆ ಇಡೀ ಸಿನಿಮಾ ನಿಂತಿರೋದೆ ತಾಯಿ ಮಗನಿಂದ ಪಡೆದ ಭಾಷೆಯ ಮೇಲೆ, ಅದನ್ನು ಈಡೇರಿಸಿಕೊಳ್ಳುವ ಆತ ಮಾಡುವ ಸಾಹಸದ ಮೇಲೆ ಅನ್ನೋದು ಎಲ್ಲರಿಗೂ ಗೊತ್ತು. ಸೋ, ಅದೊಂದೇ ಅಂಶವನ್ನಿಟ್ಟು ಸಿನಿಮಾ ಟ್ರೈಲರ್‌ನ ಮಹಿಳಾ ದಿನದಂದು ರಿಲೀಸ್ ಮಾಡ್ತಿದೆಯಾ ಟೀಮ್ ಅಥವಾ ಇಲ್ಲಿ ತಾಯಿ ಮಗನ ಸೆಂಟಿಮೆಂಟು ಅಥವಾ ಹೆಣ್ಮಕ್ಕಳಿಗೆ ಸಂಬಂಧಿಸಿದ ಇನ್ನೇನಾದ್ರೂ ಸರ್ಪೈಸ್‌ಗಳಿವೆಯಾ ಅನ್ನೋದನ್ನು ತಿಳಿಯಲು ಇನ್ನೊಂದು ವಾರ ಕಾಯದೇ ವಿಧಿಯಿಲ್ಲ.
KGF2: ಟ್ರೈಲರ್ ಮೊದಲಾ, ಸಾಂಗ್ ಮೊದಲಾ.. ಕಾಯ್ತಿದ್ದ ಫ್ಯಾನ್ಸ್‌ಗೆ ಥ್ರಿಲ್ಲಿಂಗ್ ನ್ಯೂಸ್
ಆದರೆ ಈಗ ಮ್ಯಾಟರ್ ಅದಲ್ಲ, ರಾಕಿ ಭಾಯ್ ಕೊಟ್ಟ ಒಂದು ಮಾತು ಅವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ. ಎಲ್ಲರಂತೆ ಯಶ್ ಅವರೂ ಈಗ ಕೆಜಿಎಫ್ 2 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಯನ್ನು ಇಡೀ ದೇಶವೇ ಎದುರು ನೋಡ್ತಾ ಇದೆ. ಇಂಥಾ ಟೈಮ್‌ನಲ್ಲಿ ಯಶ್ ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರಶ್ನೆಯೊಂದು ಎದುರಾಗಿದೆ. 'ನಿಮಗೆ ಓಟಿಟಿ (OTT) ಇಷ್ಟವಾ, ಬಿಗ್ ಸ್ಕ್ರೀನಾ?' ಅಂತ. ಕೋವಿಡ್ (Covid) ಬಂದಾಗಿನಿಂದ ನಟ ನಟಿಯರಿಗೆ ಇಂಥದ್ದೊಂದು ಪ್ರಶ್ನೆ ಮೀಡಿಯಾದವರಿಂದ ಇದ್ದೇ ಇರುತ್ತೆ. ಹೆಚ್ಚು ಕಡಿಮೆ ಅವರ ಉತ್ತರವೂ ಒಂದೇ ರೀತಿ ಇರುತ್ತದೆ. ಯಶ್ ಅವರ ಉತ್ತರ ಎಲ್ಲರ ಉತ್ತರದಂತೆ ಕಂಡರೂ ಅಲ್ಲೊಂದು ವಿಶಿಷ್ಟತೆ ಇತ್ತು. 'ನನಗೆ ನನ್ನ ಸಿನಿಮಾ ಬಿಗ್ ಸ್ಕ್ರೀನ್‌ನಲ್ಲಿ ತೆರೆ ಕಾಣೋದೇ ಇಷ್ಟ. ಜನ ಎಲ್ಲವನ್ನೂ ಮರೆತು ಫ್ಯಾಂಟಸಿ (Fantasy) ಜಗತ್ತಲ್ಲಿ ಮುಳುಗಲು ಥಿಯೇಟರೇ ಬೆಸ್ಟ್. ಓಟಿಟಿ ಅಂದ್ರೆ ಡಿಸ್ಟ್ರಾಕ್ಷನ್ಸ್ ಜಾಸ್ತಿ. ಥಿಯೇಟರ್‌ನಲ್ಲಿ ಸಿನಿಮಾ ನೋಡುವ ತನ್ಮಯತೆ ಇಲ್ಲಿ ಬರಲು ಸಾಧ್ಯವಿಲ್ಲ. ಟಿವಿ ಮುಂದೆ ರಿಮೋಟ್ ಹಿಡಿದು ಕೂತ ಹಾಗೆ ಇರುತ್ತೆ' ಎನ್ನುವ ಮಾತನ್ನು ಅವರು ಹೇಳಿದರು. ಅದರಲ್ಲೂ ಗಮನ ಸೆಳೆವ ಅವರ ಇನ್ನೊಂದು ಮಾತು ಅಂದರೆ, 'ನಾನು ನಟನಾಗುವ ಮೊದಲು ಒಬ್ಬ ಸಾಮಾನ್ಯ ಪ್ರೇಕ್ಷಕ. ನನಗಿವತ್ತಿಗೂ ಥಿಯೇಟರ್‌ನಲ್ಲಿ ಆಡಿಯನ್ಸ್ ಸೀಟಲ್ಲಿ ಕೂತು ಸಿನಿಮಾ ನೋಡೋದು ಬಹಳ ಇಷ್ಟ. ನನ್ನೊಳಗಿನ ಪ್ರೇಕ್ಷಕನಿಗೇ ಯಾವತ್ತೂ ಮೊದಲ ಆದ್ಯತೆ. ಆಮೇಲೆ ನಾನು ನಟ. ನಾನಿವತ್ತು ನಟ ಆಗಿದ್ದೀನಿ ಅಂದರೆ ಅದಕ್ಕೆ ನಾನು ಪ್ರೇಕ್ಷಕನ ಸೀಟಲ್ಲಿ ಕೂತು ಪಾತ್ರದ ಕಣ್ಣಲ್ಲಿ ಕಣ್ಣಿಟ್ಟು ಸಿನಿಮಾ ನೋಡಿದ್ದೇ ಕಾರಣ' ಎಂದಿದ್ದಾರೆ.
KGF 2 ಪ್ರಚಾರ ಆಯ್ಕೆಯನ್ನು ಪ್ರೇಕ್ಷಕರ ಮುಂದಿಟ್ಟ ನಟ ಯಶ್ ಟೀಂ!
ತನ್ನ ಮೊದಲ ಆದ್ಯತೆ ಪ್ರೇಕ್ಷಕರೇ ಅನ್ನೋದನ್ನು ಮನಬಿಚ್ಚಿ ಹೇಳಿದ್ದಾರೆ. ಜೊತೆಗೆ ಒಬ್ಬ ನಟನಾಗಿದ್ದು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಿದಾಗ ಸಿಗುವ ಖುಷಿಯ ಮುಂದೆ ಹಣ, ಐಷಾರಾಮ ಎಲ್ಲ ಲೆಕ್ಕಿಕ್ಕಿಲ್ಲ. ಜನ ನಮ್ಮ ನಟನೆಯನ್ನು ನೋಡಿ ಮೆಚ್ಚಿಕೊಳ್ಳೋದರ ಮುಂದೆ ಯಾವುದೂ ಇಲ್ಲ ಅಂದಿದ್ದಾರೆ. ಇನ್ನೂ 36ರ ಹರೆಯದಲ್ಲಿರುವ ರಾಕಿಬಾಯ್ ತನ್ನ ಇಂಥಾ ಸರಳತೆಯಿಂದಲೂ ಪ್ರೇಕ್ಷಕರ ಮೆಚ್ಚಿನ ನಟರಾಗಿದ್ದಾರೆ ಅನ್ನಲಡ್ಡಿಯಿಲ್ಲ.
ಕೈ ತುಂಬಾ ಬಳೆ, ದೊಡ್ಡ ಮೂಗುತು; ನಟಿ Sruthi Hariharan ಹೊಸ ಸೀರೆ ಲುಕ್ ವೈರಲ್!