Kichcha Sudeep: 'ಬಿಲ್ಲಾ ರಂಗ ಭಾಷ' ಹಿಂದೆ ಹೊರಟ ಬಾದ್‌ಷಾ!

Suvarna News   | Asianet News
Published : Feb 28, 2022, 11:30 PM IST
Kichcha Sudeep: 'ಬಿಲ್ಲಾ ರಂಗ ಭಾಷ' ಹಿಂದೆ ಹೊರಟ ಬಾದ್‌ಷಾ!

ಸಾರಾಂಶ

ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರುವ ‘ವಿಕ್ರಾಂತ್ ರೋಣ’ ಚಿತ್ರದ ಹೊರತಾಗಿ ನಟ ಸುದೀಪ್ ಅವರ ಮುಂದೆ ಬೇರೆ ಯಾವ ಸಿನಿಮಾ ಇಲ್ಲ ಎಂದುಕೊಳ್ಳುತ್ತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. 

ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರುವ ‘ವಿಕ್ರಾಂತ್ ರೋಣ’ (Vikranth Rona) ಚಿತ್ರದ ಹೊರತಾಗಿ ನಟ ಕಿಚ್ಚ ಸುದೀಪ್ (Kichcha Sudeep) ಅವರ ಮುಂದೆ ಬೇರೆ ಯಾವ ಸಿನಿಮಾ ಇಲ್ಲ ಎಂದುಕೊಳ್ಳುತ್ತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಕಿಚ್ಚನ ಮುಂದಿನ ಚಿತ್ರ ಯಾವುದು ಎಂಬುದು ಬಹಿರಂಗವಾಗಿದೆ. ಈ ಬಾರಿಯೂ ಅನೂಪ್ ಭಂಡಾರಿ (Anup Bhandari) ನಿರ್ದೇಶನದಲ್ಲೇ ಸಿನಿಮಾ ಮಾಡುತ್ತಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಸೆಟ್ಟೇರುತ್ತಿರುವ ಚಿತ್ರದ ಹೆಸರು ‘ಬಿಲ್ಲಾ ರಂಗ ಭಾಷ’ (Billa Ranga Baashaa). ಹೌದು! ‘ವಿಕ್ರಾಂತ್ ರೋಣ’ ಚಿತ್ರದ ನಂತರ ಮತ್ತೊಮ್ಮೆ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಆಗಿ ‘ಬಿಲ್ಲಾ ರಂಗ ಭಾಷ’ ಸಿನಿಮಾ ಸೆಟ್ಟೇರುತ್ತಿದೆ. 

ನಿರ್ದೇಶಕ ಅನೂಪ್ ಭಂಡಾರಿ ಜತೆ ಮತ್ತೊಂದು ಸಿನಿಮಾ ಮಾಡುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಇತ್ತೀಚೆಗಷ್ಟೆ ಗುಟ್ಟು ಬಿಟ್ಟು ಕೊಟ್ಟಿದ್ದರು ಸುದೀಪ್. ಹೀಗಾಗಿ ಇವರ ಕಾಂಬಿನೇಶನ್‌ನಲ್ಲಿ ‘ಅಶ್ವತ್ಥಾಮ’ (Ashwathama) ಸಿನಿಮಾ ಸೆಟ್ಟೇರಲಿದೆ ಎಂದೇ ಹಲವರು ಭಾವಿಸಿದ್ದರು. ಆದರೆ, ಈಗಷ್ಟೆ ಬಂದಿರುವ ಮಾಹಿತಿ ಪ್ರಕಾರ ಬಾದ್‌ಷಾ ‘ಬಿಲ್ಲಾ ರಂಗ ಭಾಷ’ ಚಿತ್ರದ ಹಿಂದೆ ಹೊರಟಿದ್ದಾರೆ. ಈಗಾಗಲೇ ಶೇ.80 ಭಾಗ ಕತೆ ಬರೆದು ಮುಗಿಸಿದ್ದಾರೆ ಅನೂಪ್ ಭಂಡಾರಿ. ಈ ಸಿನಿಮಾ ಮುಗಿದ ಮೇಲೆ ಎಲ್ಲವೂ ಅಂದುಕೊಂಡಂತೆ ಆದರೆ ಈ ಮೊದಲೇ ಘೋಷಿಸಿರುವ ‘ಅಶ್ವತ್ಥಾಮ’ ಸಿನಿಮಾ ಸೆಟ್ಟೇರಲಿದೆ. ಸದ್ಯಕ್ಕೆ ‘ವಿಕ್ರಾಂತ್ ರೋಣ’ ಚಿತ್ರದ ನಂತರ ಏನು ಎನ್ನುವ ಪ್ರಶ್ನೆಗೆ ಮಾತ್ರ ‘ಬಿಲ್ಲಾ ರಂಗ ಭಾಷ’ ಉತ್ತರವಾಗಿ ನಿಂತಿದೆ.

Kichcha Sudeep: ಅಭಿಮಾನಿಗಳಿಗೆ ಡಬಲ್ ಗುಡ್​ನ್ಯೂಸ್ ನೀಡಿದ 'ವಿಕ್ರಾಂತ್ ರೋಣ'

ಅನೂಪ್ ಭಂಡಾರಿ-ಸುದೀಪ್ ಕಾಂಬಿನೇಷನ್‍ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌  'ವಿಕ್ರಾಂತ್ ರೋಣ' ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ರಿಲೀಸ್ ಆಗಬೇಕಿತ್ತು. ಕೋವಿಡ್ ಮತ್ತು ಸರ್ಕಾರದ ಕೆಲವು ನಿಯಮಗಳಿಂದಾಗಿ ಎರಡೆರಡು ಬಾರಿ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿದ್ದರು. ಈ ಬಾರಿ ಪಕ್ಕಾ ದಿನಾಂಕವನ್ನು ಗೊತ್ತು ಮಾಡಿಕೊಂಡು ಅಖಾಡಕ್ಕೆ ಇಳಿಯಲಿದೆಯಂತೆ ಚಿತ್ರತಂಡ. ಈ ಚಿತ್ರದಲ್ಲಿ ಮೊದಲ ಬಾರಿಗೆ ಫ್ಯಾಂಟಸಿ ಶೈಲಿಯಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದು, ನಿರೂಪ್‌ ಭಂಡಾರಿ (Nirup Bhandari) ಹಾಗೂ ನೀತಾ ಅಶೋಕ್‌ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.



'ವಿಕ್ರಾಂತ್ ರೋಣ' ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಈ ಹಿಂದೆ ರೆಸ್ಪಾನ್ಸ್ ಮಾಡಿದ್ದು, ಡಬಲ್ ಧಮಾಕ ನೀಡಿದ್ದರು. ಈ ಬಗ್ಗೆ ಟ್ವೀಟರ್‌ನಲ್ಲಿ (Twitter) 'ವಿಕ್ರಾಂತ್ ರೋಣ ಫ್ಯಾಂಟಸಿ ಶೈಲಿಯಲ್ಲಿ ಮೂಡಿಬರಲಿದ್ದು, 3ಡಿಯಲ್ಲಿ ನೋಡಬಹುದು. 3ಡಿಯಲ್ಲಿ ವಿಕ್ರಾಂತ್ ರೋಣ ನೋಡುವುದಕ್ಕೆ ತುಂಬಾ ಚೆನ್ನಾಗಿದೆ' ಎಂದು ಸುದೀಪ್ ಟ್ವೀಟ್ (Tweet) ಮಾಡಿದ್ದರು. ಮಾತ್ರವಲ್ಲದೇ ರಿಲೀಸ್ ದಿನಾಂಕ ಇನ್ನು ಕೆಲವೇ ಕೆಲವು ದಿನದಲ್ಲಿ ಅನೌನ್ಸ್ ಮಾಡುತ್ತೇವೆ. ಸ್ವಲ್ಪ ಕಾಯಿರಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆಗೆ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಹೇಳಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದರು.

Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

ಇನ್ನು ಸುದೀಪ್ ಇತ್ತೀಚೆಗಷ್ಟೇ ಅಭಿಮಾನಿಗಳ (Fans) ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದರು. ಜೆ.ಪಿ ನಗರದ ಸುದೀಪ್ ಮನೆ ಮುಂದೆ ಸೇರಿದ ಅಭಿಮಾನಿಗಳನ್ನು ಸುದೀಪ್ ಭೇಟಿಯಾಗಿದ್ದು, ಆ ಸಮಯದಲ್ಲಿ ಅವರು ಅಭಿಮಾನಿಗಳ ಫೋಟೋ ಕ್ಲಿಕಿಸಿಕೊಂಡು ಆಟೋ ಗ್ರಾಫ್ ಕೊಟ್ಟಿದ್ದರು. ಸುಮಾರು 11 ಗಂಟೆಗೆ ಮನೆಯಿಂದ ಹೊರಗೆ ಬಂದ ಸುದೀಪ್ ಬಹಳ ಸಮಯ ಅಭಿಮಾನಿಗಳ ಜೊತೆ ಆತ್ಮೀಯವಾಗಿ ಕಾಲ ಕಳೆದು ಸಂಭ್ರಮಿಸಿದ್ದರು. ಆ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡಿದ್ದು, ಸಖತ್ ವೈರಲ್ (Viral) ಆಗಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್