'ಟಾಕ್ಸಿಕ್​' ಬಿಗ್​ ಟ್ವಿಸ್ಟ್​: ತಂಗಿಯಾಗಿ ಕರೀನಾ, ಯಶ್​ಗೆ ಜೋಡಿಯಾಗಲಿರೋ ಬಾಲಿವುಡ್​ ಬೆಡಗಿ ಇವರೇ ನೋಡಿ?

Published : Apr 02, 2024, 04:58 PM IST
'ಟಾಕ್ಸಿಕ್​' ಬಿಗ್​ ಟ್ವಿಸ್ಟ್​: ತಂಗಿಯಾಗಿ ಕರೀನಾ, ಯಶ್​ಗೆ ಜೋಡಿಯಾಗಲಿರೋ ಬಾಲಿವುಡ್​ ಬೆಡಗಿ ಇವರೇ ನೋಡಿ?

ಸಾರಾಂಶ

ಯಶ್​ ನಟನೆಗೆ 'ಟಾಕ್ಸಿಕ್​' ಚಿತ್ರಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ತಂಗಿಯಾಗಿ ಕರೀನಾ ಕಪೂರ್​ ನಟಿಸಲಿದ್ದು, ಯಶ್​ಗೆ ಜೋಡಿಯಾಗಲಿದ್ದಾರೆ ಈ ಬಾಲಿವುಡ್​ ಬೆಡಗಿ. ಯಾರವರು?  

ನಟ ಯಶ್​ ಫ್ಯಾನ್ಸ್​   ಟಾಕ್ಸಿಸ್​ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್’ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಚಿತ್ರದಲ್ಲಿ  ಬಾಲಿವುಡ್​ ಬೇಬೋ,  ಕರೀನಾ ಕಪೂರ್​ ಖಾನ್​ ಅವರು  ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಈ ಮೂಲಕ ನಟಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ.  ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿ, ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಯಿತು.  ಈ ವಿಷಯ ತಿಳಿದಾಗಿನಿಂದಲೂ ಅತ್ತ ಕರೀನಾ ಕಪೂರ್​ ಅಭಿಮಾನಿಗಳು ಹಾಗೂ ಯಶ್​ ಅವರ ಫ್ಯಾನ್ಸ್​ ಈ ಸುದ್ದಿ ನಿಜನಾ ಎನ್ನುವ ಗೊಂದಲದಲ್ಲಿದ್ದರು.  ಕಾಫಿ ವಿತ್ ಕರಣ್ ಟಾಕ್‌ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಆಗ ಕರಣ್​ ಅವರು, ಕರೀನಾರನ್ನು ಕುರಿತು ನಿಮಗೆ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಪ್ರಶ್ನಿಸಿದ್ದರು. ಆಗ ಕರೀನಾ ಅವರು,  ತಕ್ಷಣ 'ಯಶ್' ಎಂದಿದ್ದರು.  ನೀವು ಹೇಳಿದ ಎಲ್ಲಾ ಸ್ಟಾರ್​ಗಳೂ ಸೂಪರ್​...  ಆದ್ರೆ ನಾನು ಕೆಜಿಎಫ್​ ಹುಡುಗಿ. ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ ಎಂದಿದ್ದರು. ತಾವು ಈ ಚಿತ್ರವನ್ನು ನೋಡಿರುವುದಾಗಿಯೂ ತಿಳಿಸಿದ್ದರು. ಅದರ ಬೆನ್ನಲ್ಲೇ ಯಶ್​ ಅವರ ಮುಂಬರುವ ಚಿತ್ರದಲ್ಲಿ ನಟಿ ನಟಿಸುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು.
 
ರೆಡ್ಡಿಟ್ ಖಾತೆ BollyBlindsNGossip ಕರೀನಾ ತನ್ನ ದಕ್ಷಿಣ ಭಾರತದ ಚಲನಚಿತ್ರದ ಚೊಚ್ಚಲ ಅಭಿನಯದ ಕುರಿತು ಮಾತನಾಡುವ ವಿಡಿಯೋವನ್ನು ಶೇರ್​ ಮಾಡಿಕೊಂಡಿತ್ತು.  ಇದರಲ್ಲಿ ಕರೀನಾ ಕಪೂರ್​, ಇದಾಗಲೇ  ನಾನು ಹೇಳಿದಂತೆ, ನಾನು ದೊಡ್ಡ ಸೌತ್ ಚಲನಚಿತ್ರವನ್ನು ಮಾಡಲಿದ್ದೇನೆ.  ಈ ಚಿತ್ರವು   ಪ್ಯಾನ್-ಇಂಡಿಯಾ ಮಟ್ಟದ್ದಾಗಿದೆ. ಹಾಗಾಗಿ ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ದಕ್ಷಿಣದ ಚಿತ್ರವನ್ನು  ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಫ್ಯಾನ್ಸ್​ಗೆ ತಿಳಿಸಲು ಉತ್ಸುಕಳಾಗಿದ್ದೇನೆ ಎಂದು  ಹೇಳಿದ್ದರು. ಅವರು ಹೇಳಿದಂತೆ ನಟಿಸುತ್ತಿರುವುದು ನಿಜ. ಆದರೆ  ಚಿತ್ರಕ್ಕೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್​ ಒಂದು ಹೊರಬಂದಿದೆ. ಅದೇನೆಂದರೆ, ಕರೀನಾ  ಕಪೂರ್​ ಚಿತ್ರದಲ್ಲಿ ನಟಿಸುತ್ತಿರುವುದು ನಿಜವಾದರೂ ಅವರು ಯಶ್​ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ದರೆ ಯಶ್​ಗೆ ನಾಯಕಿಯಾಗಿ ನಟಿಸ್ತಿರೋದು ಯಾರು? 

ಐಶ್ವರ್ಯ ರೈ ವಿರುದ್ಧ ಅಮಿತಾಭ್​ ಮೊಮ್ಮಗಳು ನವ್ಯಾ ಹೀಗೆಲ್ಲಾ ಹೇಳಿದ್ರಾ? ಫ್ಯಾನ್ಸ್​ ಶಾಕ್​

ಈ ಕುತೂಹಲ ಕೂಡ ಈಗ ತಣಿದಿದೆ. ಯಶ್​ಗೆ ನಾಯಕಿಯಾಗಿ  ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿಬಂದಿದೆ.   ಕರೀನಾ ಕಪೂರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಈಗಾಗಲೇ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ಅವರ ಸಹೋದರಿಯಾಗಿ ಕರೀನಾ ನಟಿಸುತ್ತಿದ್ದಾರೆ, ಕಿಯಾರಾ ನಾಯಕಿಯಾಗಲಿದ್ದಾರೆ ಎಂದು ಸುದ್ದಿಯಾಗುತ್ತಿದ್ದರೂ,  ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

 
ಇದು ನಿಜವಾಗಿದ್ದರೆ, ಕಿಯಾರಾ ಅಡ್ವಾಣಿ ಅವರಿಗೂ ಇದು ಮೊದಲ ಕನ್ನಡ ಸಿನಿಮಾ ಆಗಲಿದೆ. ಅವರು ಈಗಾಗಲೇ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಸದ್ಯ, ಕಿಯಾರಾ ಈಗಾಗಲೇ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಮಧ್ಯೆ ಚಿತ್ರದ ಥೀಮ್ ಹಾಡನ್ನು ಹಾಡಿರುವ ಶ್ರುತಿ ಹಾಸನ್ ಅವರನ್ನು ಮೂರನೇ ನಟಿ ಎಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಸುದ್ದಿಗೆ ಯಶ್ ಮತ್ತು ಗೀತು ಇನ್ನೂ ಪ್ರತಿಕ್ರಿಯಿಸಿಲ್ಲ. ಅಧಿಕೃತ ಘೋಷಣೆ ಬಳಿಕವಷ್ಟೇ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ. ಕಳೆದ ವರ್ಷ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗಿದ್ದರೂ, ನಾಯಕ ನಟಿಯ ಬಗ್ಗೆ ಹಲವಾರು ಊಹಾಪೋಹಗಳು ಇದ್ದವು. ಕರೀನಾ ಹೆಸರು ಸಾಕಷ್ಟು ಹರಿದಾಡುತ್ತಿದ್ದು, ಆದರೆ ಇದೀಗ ಕಿಯಾರಾ ಸದ್ದು ಮಾಡುತ್ತಿದ್ದಾರೆ.

ಸುದೀಪ್​ ಅಮ್ಮನಾಗಿದ್ದ ನಟಿ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಕೇಸ್​ ದಾಖಲು: ಅಷ್ಟಕ್ಕೂ ಆಗಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್