ಎಲೆಕ್ಷನ್ ರಿಸಲ್ಟ್‌ಗೂ ಮೊದ್ಲೇ ರಿಷಿ ಸಿನಿಮಾ ಫಲಿತಾಂಶ; 'ರಾಮನ ಅವತಾರ' ಎಂಟ್ರಿಗೆ ಡೇಟ್ ಫಿಕ್ಸ್!

By Shriram Bhat  |  First Published Apr 1, 2024, 5:17 PM IST

'ರಾಮನ ಅವತಾರ' ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ 'ರಾಮನ ಅವತಾರ' ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.


ತಮ್ಮ ಕಾಮಿಡಿ ಟೈಮಿಂಗ್ನಿಂದಲೇ ಹೆಸರಾದ ಪ್ರತಿಭಾನ್ವಿತ  ನಟ ರಿಷಿ. ಹಾಗಂತ ಅವರು ಬರೀ ಕಾಮಿಡಿಯನ್ನಷ್ಟೇ ಮಾಡುವುದಿಲ್ಲ. 'ಕವಲುದಾರಿ'ಯಂತಹ ಗಂಭೀರ ಸಿನಿಮಾದಲ್ಲೂ ಮನಮುಟ್ಟುವಂತೆ ನಟಿಸಿದ್ದಾರೆ. ಅಂದಹಾಗೆ, ರಿಷಿ ಈಗ 'ರಾಮನ ಅವತಾರ'ದಲ್ಲಿ ದರ್ಶನ ಕೊಡೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ರಿಷಿ ನಟನೆಯ ರಾಮನ ಅವತಾರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮೇ 10ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಏಪ್ರಿಲ್ ತಿಂಗಳಲ್ಲಿ ಸಿನಿಮಾವನ್ನು ಬೆಳ್ಳಿಭೂಮಿ ಅಖಾಡಕ್ಕೆ ಇಳಿಸೋದಿಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದ್ರೆ ಲೋಕಸಭಾ ಚುನಾವಣೆ ಹಿನ್ನೆಲೆ ಚಿತ್ರದ ಬಿಡುಗಡೆ ತಡವಾಗುತ್ತಿದೆ. 'ಎಲೆಕ್ಷನ್ ಮುಗಿದ ತಕ್ಷಣ ಅಥವಾ ಮೇ ತಿಂಗಳಲ್ಲಿ ಪಕ್ಕಾ ನಾವು ಥಿಯೇಟರ್‌ಗೆ ಸಿನಿಮಾ ತರ್ತೀವಿ' ಅಂತಾ ರಿಷಿ ಘೋಷಿಸಿದ್ದಾರೆ. 

Tap to resize

Latest Videos

ನಟ ದರ್ಶನ್‌ ಪುತ್ರ ವಿನೀಶ್‌ ಕುದುರೆ ಸವಾರಿ ವೀಡಿಯೋ ವೈರಲ್; ಸಿನಿಮಾ ಎಂಟ್ರಿಗೆ ಸಜ್ಜಾದ್ರಾ ಸ್ಟಾರ್ ಕಿಡ್?

ರಿಷಿ ಸ್ಪೆಷಲ್ ವಿಡಿಯೋ ಮೂಲಕ ರಾಮನ ಅವತಾರ ಸಿನಿಮಾ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. 'ಮೇಬಿ ಅಲ್ಲ ಪಕ್ಕ ಮೇ 10ಕ್ಕೆ ಬರ್ತೀವಿ. ಎಲೆಕ್ಷನ್ ರಿಸಲ್ಟ್‌ಗೂ ಮೊದ್ಲೇ ನಮ್ಮ ಸಿನಿಮಾ ರಿಸಲ್ಟ್ ಬರಲಿದೆ' ಎಂದಿದ್ದಾರೆ. ಪ್ರಮೋಷನ್ ಅಖಾಡಕ್ಕೆ ಇಳಿಯೋದಿಕ್ಕೆ ಇಡೀ ತಂಡ ಸಿದ್ಧವಾಗಿದ್ದು, ರಾಮರಾಜ್ಯ ಕಟ್ಟೋದಿಕ್ಕೆ ರಾಮನ ಅವತಾರ ಬಳಗ ಸಜ್ಜಾಗಿ ನಿಂತಿದೆ. 

ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!

'ರಾಮನ ಅವತಾರ' ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ 'ರಾಮನ ಅವತಾರ' ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಅವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳ ಮೂಲಕ ರಾಮನ ಅವತಾರ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. 

ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ದುಬೈ ಬಾತ್‌ಟಬ್‌ನಲ್ಲೇ ಬೋರಲಾಗಿ ಬಿದ್ದಿದ್ದು ಯಾಕೆ?

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ಇದನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

click me!