ಸಕ್ಸಸ್‌ಫುಲ್ ಆಗಿರುವಾಗ ತುಂಬಾನೇ ಕೇರ್‌ಫುಲ್ ಆಗಿರಬೇಕು; ಹೀಗ್ಯಾಕೆ ಹೀಳಿದ್ರು ರಾಕಿಂಗ್ ಸ್ಟಾರ್ ಯಶ್?

Published : Apr 01, 2024, 07:47 PM ISTUpdated : Apr 01, 2024, 07:52 PM IST
ಸಕ್ಸಸ್‌ಫುಲ್ ಆಗಿರುವಾಗ ತುಂಬಾನೇ ಕೇರ್‌ಫುಲ್ ಆಗಿರಬೇಕು; ಹೀಗ್ಯಾಕೆ ಹೀಳಿದ್ರು ರಾಕಿಂಗ್ ಸ್ಟಾರ್ ಯಶ್?

ಸಾರಾಂಶ

ನೀವು ಯಾವತ್ತೂ ನಿಮ್ಮೊಂದಿಗೆ ಇರಬೇಕು. ಏಕೆಂದರೆ, ಬೇರೆ ಯಾರೂ ನಿಮ್ಮೊಂದಿಗೆ ಯಾವತ್ತೂ ಇರಲು ಸಾಧ್ಯವಿಲ್ಲ. ಸಕ್ಸಸ್ ಬಂದಾಗ ಎಲ್ಲರೂ ಇರುತ್ತಾರೆ, ಆದರೆ ಸೋಲು ನಮ್ಮನ್ನು ಆವರಿಸಿದಾಗ ಎಲ್ಲರೂ ನಮ್ಮಿಂದ ಮಾಯವಾಗುತ್ತಾರೆ.

ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಲೈಫ್ ಲೆಸನ್ ಟಿಪ್ಸ್‌ ಒಂದನ್ನು ಹೇಳಿದ್ದಾರೆ. 'ನಾವು ಯಶಸ್ಸು ಪಡೆದಾಗ ಅತ್ಯಂತ ಹೆಚ್ಚು ಜಾಗರೂಕರಾಗಿರಬೇಕು. ನಮ್ಮವರು, ಆಪ್ತರು, ಸ್ನೇಹಿತರು ಎಲ್ಲರೂ ನಮ್ಮ ಜತೆ ಇರುತ್ತಾರೆ. ಈ ಸಮಯದಲ್ಲಿ ನಾವು ಕೇರ್‌ಫುಲ್ ಆಗಿರಬೇಕು. ನಾವು ಲೈಫ್‌ನಲ್ಲಿ ಫೇಲ್ ಆಗಿರುವಾಗ ಹೇಗೂ ಎಲ್ಲರೂ ನಮ್ಮಿಂದ ದೂರ ಸರಿದಿರುತ್ತಾರೆ. ಈ ಮಾತನ್ನು ನಾನು ನನ್ನ ಬಾಲ್ಯದ ಅನುಭವದಿಂದಲೇ ಹೇಳುತ್ತಿದ್ದೇನೆ' ಎಂದಿದ್ದಾರೆ ನಟ ಯಶ್.

ಮುಂದುವರೆದು ಹೇಳಿರುವ ಯಶ್‌ 'ಹೌದು, ನಾನು ನನ್ನ ಚೈಲ್ಡ್‌ಹುಡ್‌ ಅನುಭವದ ಮೂಲಕ ಹೇಳಬೇಕು ಎಂದರೆ 'ನಾವು ಕಷ್ಟದಲ್ಲಿರುವಾಗ ಯಾರೂ ನಮ್ಮ ಸಮೀಪ ಕೂಡ ಸುಳಿಯುವುದಿಲ್ಲ. ನಮ್ಮ ಹಿತೈಷಿಗಳೇ ನಮ್ಮಿಂದ ಸಾಧ್ಯವಾದಷ್ಟೂ ದೂರ ಇರುತ್ತಾರೆ. ಹೀಗಾಗಿ ನಾವು ಕೇರ್‌ಫುಲ್‌ ಆಗಿ ಇರಬೇಕಾದ ಅಗತ್ಯವೇ ಇರುವುದಿಲ್ಲ. ಆದರೆ, ಯಾವಾಗ ನೀವು ಸಕ್ಸಸ್‌ಫುಲ್ ಆಗಿರುತ್ತೀರೋ ಆಗ ಮಾತ್ರ ನೀವು ತುಂಬಾ ತುಂಬಾ ಜಾಗರೂಕರಾಗಿರಬೇಕು. ಎಲ್ಲರೂ ನಿಮ್ಮ ಬಳಿಯೇ ಇರುತ್ತಾರೆ. ಹೀಗಾಗಿ ನೀವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ.

ನಾನು ಪ್ರತಿದಿನವೂ ಹೊಸ ಕೆಲಸವನ್ನು ಮಾಡಲು ಬಯಸುತ್ತೇನೆ; ಸಮಂತಾ ಹೇಳಿಕೆ ಮರ್ಮ ಏನಿರಬಹುದು? 

ಆದರೆ, ಒಂದು ಮಾತನ್ನು ಹೇಳಲೇಬೇಕು. ನೀವು ಯಾವತ್ತೂ ನಿಮ್ಮೊಂದಿಗೆ ಇರಬೇಕು. ಏಕೆಂದರೆ, ಬೇರೆ ಯಾರೂ ನಿಮ್ಮೊಂದಿಗೆ ಯಾವತ್ತೂ ಇರಲು ಸಾಧ್ಯವಿಲ್ಲ. ಸಕ್ಸಸ್ ಬಂದಾಗ ಎಲ್ಲರೂ ಇರುತ್ತಾರೆ, ಆದರೆ ಸೋಲು ನಮ್ಮನ್ನು ಆವರಿಸಿದಾಗ ಎಲ್ಲರೂ ನಮ್ಮಿಂದ ಮಾಯವಾಗುತ್ತಾರೆ. ಆದ್ದರಿಂದಲೇ ನಾನು ಒತ್ತಿ ಒತ್ತಿ ಹೇಳುವುದು, ದಯವಿಟ್ಟು ನೀವು ಯಾವತ್ತೂ ನಿಮ್ಮೊಂದಿಗೆ ಇರಬೇಕು. ನಿಮ್ಮ ಕನಸು, ಆಸೆ-ಆಕಾಂಕ್ಷೆ ಎಲ್ಲವನ್ನೂ ನೀವೇ ಪೂರೈಸಿಕೊಳ್ಳಬೇಕು. ಅದಕ್ಕಾಗಿ ನೀವು ಯಾವತ್ತಿಗೂ ನಿಮ್ಮ ಜತೆ ದಿನಕ್ಕೆ ಸ್ವಲ್ಪವಾದರೂ ಕಾಲ ಕಳೆಯಬೇಕು' ಎಂದಿದ್ದಾರೆ ನಟ ಯಶ್.

ನಟ ದರ್ಶನ್‌ ಪುತ್ರ ವಿನೀಶ್‌ ಕುದುರೆ ಸವಾರಿ ವೀಡಿಯೋ ವೈರಲ್; ಸಿನಿಮಾ ಎಂಟ್ರಿಗೆ ಸಜ್ಜಾದ್ರಾ ಸ್ಟಾರ್ ಕಿಡ್?

ಅಂದಹಾಗೆ, ಸ್ಯಾಂಡಲ್‌ವುಡ್ ಹೀರೋ ಯಶ್ ಈಗ ಭಾರತದ ಅತ್ಯಂತ ಪ್ರಸಿದ್ಧ ನಟ. ಕೆಜಿಎಫ್‌ (KGF) ಖ್ಯಾತಿಯ ಬಳಿಕ ನಟ ಯಶ್‌ ಅವರು ಬಹುಬೇಡಿಕೆ ನಟರಾಗಿದ್ದು, ಬಹುತೇಕ ಇಡೀ ಜಗತ್ತು ಅವರನ್ನು ಗುರುತಿಸುತ್ತದೆ, ಗೌರವಿಸುತ್ತದೆ. ಕೆಜಿಎಫ್‌ ಹಾಗು 'ಕೆಜಿಎಫ್‌ 2' ಬಳಿಕ ನಟ ಯಶ್‌ ಸದ್ಯ ಹೊಸ ಸಿನಿಮಾ 'ಟಾಕ್ಸಿಕ್‌' ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಗೀತೂ ಮೋಹನ್‌ದಾಸ್ (Geethu Mohandas)ನಿರ್ದೇಶನದ ಟಾಕ್ಸಿಕ್ (Toxic) ಸಿನಿಮಾ ಈಗ ಭಾರೀ ಕುತೂಹಲದ ಕೇಂದ್ರಬಿಂಧುವಾಗಿದೆ. 

ಎಲೆಕ್ಷನ್ ರಿಸಲ್ಟ್‌ಗೂ ಮೊದ್ಲೇ ರಿಷಿ ಸಿನಿಮಾ ಫಲಿತಾಂಶ; 'ರಾಮನ ಅವತಾರ' ಎಂಟ್ರಿಗೆ ಡೇಟ್ ಫಿಕ್ಸ್!

ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗೆ ಕೊಂಡೊಯ್ದ ನಟ ಯಶ್ ನಟಿಸುತ್ತಿರುವ ಮುಂದಿನ ಚಿತ್ರ ಟಾಕ್ಸಿಕ್. ಕೆಜಿಎಫ್‌ ಚಿತ್ರದ ಮೂಲಕ ಪ್ರಶಾಂತ್‌ ನೀಲ್ ಹಾಗೂ ಯಶ್ ಜೋಡಿ ಭಾರೀ ಮೋಡಿ ಮಾಡಿತ್ತು. ಈಗ ಅದಕ್ಕಿಂತಲೂ ಹೆಚ್ಚಿನದನ್ನು ಯಶ್ ಹಾಗು ಗೀತೂ ಮೋಹನ್‌ ದಾಸ್‌ ಅವರಿಂದ ನಿರೀಕ್ಷೆ ಮಾಡಲಾಗುತ್ತಿದೆ. ಅದಕ್ಕೆ ಸರಿಯಾಗಿಯೇ ಎಂಬಂತೆ, ಟಾಕ್ಸಿಕ್ ಟೀಮ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್, ಸಾಯಿ ಪಲ್ಲವಿ ಸಹ ನಟಿಸುತ್ತಿರುವುದು ಕನ್ಫರ್ಮ್‌ ಆಗಿದೆ. 

ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ಸತ್ಯವನ್ನು ಬೇಗನೇ ಹೇಳಬಾರದಿತ್ತೇ ಅಂತಿದಾರಲ್ಲ!

ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದ್ದು, ಎಲ್ಲಿ ನಡೆಯುತ್ತಿದೆ, ಶೂಟಿಂಗ್‌ ಶೆಡ್ಯೂಲ್ ಯಾವತ್ತೆಲ್ಲ ಇದೆ ಎಂಬ ಬಗ್ಗೆ ಮಾಹಿತಿ ಸೀಕ್ರೆಟ್ ಆಗಿದೆ. ಆದರೆ, ಕೆಜಿಎಫ್‌ ಬಳಿಕ ನಟ ಯಶ್‌ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎಂಬುದಕ್ಕೆ 'ಟಾಕ್ಸಿಕ್' ಎಂಬ ಉತ್ತರ ದೊರಕಿದ್ದು, ಇದು ಯಶ್ ಅಭಿಮಾನಿಗಳಿಗೆ ಬಹಳಷ್ಟು ಖುಷಿ ಕೊಟ್ಟಿದೆ. ಸದ್ಯ ತೀವ್ರ ಕೂತೂಹಲ ಕೆರಳಿಸುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?