
ರಾಕಿಂಗ್ ಸ್ಟಾರ್ ಯಶ್ (Yash) ನಟಿಸಿರುವ, ಪ್ರಶಾಂತ್ ನೀಲ್ (Prashanth Neel) ಅಭಿನಯಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆದ ಎರಡೇ ವಾರಗಳಲ್ಲಿ 100 ಕೋಟಿ ಕ್ಲಬ್ ಸೇರಿಕೊಳ್ಳುತ್ತಿದೆ. ವಿಶ್ವಾದ್ಯಂತ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಕೆಜಿಎಫ್ (KGF 2) ಸಿನಿಮಾ ಭಾಗ ಮೂರು ಶುರುವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಆದರೆ ಯಾರಿಂದಲ್ಲೂ ಕ್ಲಾರಿಟಿ ಸಿಗುತ್ತಿರಲಿಲ್ಲ. ಈಗ ರಾಖಿ ಭಾಯ್ ಸೈಲೆಂಟ್ ಆಗಿ ಸುಳಿವು ಕೊಟ್ಟಿದ್ದಾರೆ....
ಯಶ್ ಮಾತು:
'ಕೆಜಿಎಫ್ ಚಾಪ್ಟರ್ 3 ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಮತ್ತು ನಾನು ಆಗಲೇ ದೃಶ್ಯಗಳ ಪ್ಲ್ಯಾನಿಂಗ್ ಮಾಡಿದ್ದೀನಿ. ಚಾಪ್ಟರ್ 2ರಲ್ಲಿ ತುಂಬಾ ವಿಚಾರಗಳನ್ನು ತೋರಿಸಲು ಅಗಲಿಲ್ಲ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ kiss ass ದೃಶ್ಯಗಳು ರೆಡಿಯಾಗಿದೆ. ಇದು ನಮಗೆ ಇರುವ ಐಡಿಯಾ ಅಷ್ಟೆ. ಈ ವಿಚಾರವನ್ನು ಸದ್ಯಕ್ಕೆ ಇಲ್ಲಿಗೆ ಬಿಟ್ಟಿದ್ದೀವಿ ಮುಂದಕ್ಕೆ ಯೋಚನೆ ಮಾಡಿಲ್ಲ' ಎಂದು ಯಶ್ ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಭಿಮಾನಿಗಳ ಪ್ರೀತಿ:
'ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಒಂದು ಭಾಗವಾಗಿ ಮಾಡಬೇಕಿತ್ತು ಆದರೆ ಅರ್ಧದಲ್ಲಿ ನೀಲ್ ಅದನ್ನು ಎರಡು ಭಾಗವಾಗಿ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಭಾವನಾತ್ಮಕ ದೃಷ್ಟಿಯಲ್ಲಿ ಕೆಲವೊಂದು ದೃಶ್ಯಗಳನ್ನು ಬೇಗ ಬೇಗ ತೋರಿಸಲಾಗಿದೆ ಎಂದು ನೀಲ್ ಹೇಳುತ್ತಿದ್ದರು. ಸೆಂಟಿಮೆಂಟ್ ವಿಚಾರಗಳು ಇಂಡಿಯಾ ಸಿನಿಮಾ ವೀಕ್ಷಕರು ಇಷ್ಟ ಪಡುತ್ತಾರೆ. ಕೆಜಿಎಫ್ ಬೆಸ್ಟ್ ಭಾಗ ಇರುವುದು ಎರಡನೇ ಭಾಗದಲ್ಲಿ. ಭಾಗ ಒಂದು ಹೇಗಿರಲಿದೆ ಎಂದು ಯೋಚನೆ ಮಾಡುತ್ತಿದ್ದೀವಿ. ಭಾಗ ಒಂದು ವರ್ಕ್ ಆಗಿರಲಿಲ್ಲ ಅಂದ್ರೆ ಭಾಗ ಎರಡು ಮಾಡಲು ಆಗುತ್ತಿರಲಿಲ್ಲ' ಎಂದು ಯಶ್ ಹೇಳಿದ್ದಾರೆ.
ಕೆಜಿಎಫ್-2 ಎರಡನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಶಾಹಿದ್ ಕಪೂರ್ ಜರ್ಸಿ ಸಿನಿಮಾ ಬಿಡುಗಡೆಯಾಗಿದ್ದರೂ ಸಹ ಕೆಜಿಎಫ್-2 ಆರ್ಭಟ ಮುಂದುವರೆದಿದೆ. ಶನಿವಾರ ಮತ್ತು ಭಾನುವಾರ ಹಿಂದಿಯಲ್ಲಿ ಉತ್ತಮ ಕಮಾಯಿ ಮಾಡಿರುವ ಕೆಜಿಎಫ್-2 2ನೇ ವಾರದ ಕಲೆಕ್ಷನ್ ಲೆಕ್ಕವನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಹಂಚಿಕೊಂಡಿದ್ದಾರೆ. ಶನಿವಾರ 18.25 ಕೋಟಿ ರೂ. ಭಾನುವಾರ 22.68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.
ಹಿಂದಿಯಲ್ಲಿ ಕೆಜಿಎಫ್-2 ಗಳಿಕೆ
ಹಿಂದಿಯಲ್ಲಿ ಈಗಾಗಲೇ ಕೆಜಿಎಫ್-2 300 ಕೋಟಿ ರೂ. ಕ್ಲಬ್ ಸೇರಿದೆ. ಅತೀ ಕಡಿಮೆ ಅವದಿಯಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಕೂಡ ಕೆಜಿಎಫ್-2 ಗಳಿಸಿದೆ. ಬಾಕ್ಸ್ ಆಫೀಸ್ ಮಾನ್ಸ್ಟಾರ್ ಆಗಿರುವ ಕೆಜಿಎಫ್-2 ಸಿನಿಮಾವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಹೃತಿಕ್ ರೋಷನ್ ಮತ್ತು ಜಾಕಿ ಶ್ರಾಫ್ ನಟನೆಯ ವಾರ್ ಸಿನಿಮಾ ಬಳಿಕ ಹಿಂದಿಯಲ್ಲಿ 300 ಕೋಟಿ ದಾಟಿದ ಸಿನಿಮಾ ಕೆಜಿಎಫ್-2 ಆಗಿದೆ ಎಂದು ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಹೇಳಿದ್ದಾರೆ. ಇನ್ನು ಹಿಂದಿಯಲ್ಲಿ 300 ಕೋಟಿ ಕ್ಲಬ್ ಸೇರಿದ ದಕ್ಷಿಣ ಭಾರತದ ಎರಡನೇ ಸಿನಿಮಾ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.