ದೊಡ್ಡ ದಾಖಲೆ: ವಿಕ್ರಾಂತ್‌ ರೋಣ 10 ಕೋಟಿಗೆ ಸೇಲ್‌

Published : May 09, 2022, 09:35 AM IST
ದೊಡ್ಡ ದಾಖಲೆ: ವಿಕ್ರಾಂತ್‌ ರೋಣ 10 ಕೋಟಿಗೆ ಸೇಲ್‌

ಸಾರಾಂಶ

ವಿಕ್ರಾಂತ್‌ ರೋಣ 10 ಕೋಟಿಗೆ ಸೇಲ್‌ ಬಿಡುಗಡೆಗೂ ಮುನ್ನವೇ ಓವರ್‌ ಸೀಸ್‌ ಮಾರುಕಟ್ಟೆಯಲ್ಲಿ ಕಿಚ್ಚನ ಸದ್ದು

ನಟ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ವಿದೇಶಿ ಮಾರುಕಟ್ಟೆಯಲ್ಲಿ ಆಗಲೇ ಸದ್ದು ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಓವರ್‌ ಸೀಸ್‌ನಲ್ಲಿ ಈ ಚಿತ್ರದ ವಿತರಣೆ ಹಕ್ಕುಗಳು 10 ಕೋಟಿಗೆ ಮಾರಾಟಗೊಂಡಿವೆ. ಆ ಮೂಲಕ ಕನ್ನಡ ಚಿತ್ರವೊಂದು ಬಿಡುಗಡೆ ಆಗುವ ಮುನ್ನವೇ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟಗೊಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬುದು ಚಿತ್ರತಂಡದ ಉತ್ಸಾಹದ ಮಾತು. ವಿದೇಶದಲ್ಲಿ ಚಿತ್ರದ ಹಕ್ಕುಗಳನ್ನು ಒನ್‌ ಟ್ವೆಂಟಿ 8 ಮೀಡಿಯಾ ಹೆಸರಿನ ಸಂಸ್ಥೆ ತನ್ನದಾಗಿಸಿಕೊಂಡಿದೆ.

3ಡಿ ತಂತ್ರಜ್ಞಾನದಲ್ಲಿ ಜುಲೈ 8ರಂದು ದೇಶ- ವಿದೇಶಗಳಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್‌ ಮಾಡುತ್ತಿರುವುದರಿಂದ ನಿರ್ಮಾಪಕ ಜಾಕ್‌ ಮಂಜು ಅವರು ಸಂಭ್ರಮದಲ್ಲಿದ್ದಾರೆ. ‘ನಮ್ಮ ಚಿತ್ರದ್ದು ಒಂದು ಭಾಷೆ ಅಥವಾ ಒಂದು ದೇಶಕ್ಕೆ ಸೀಮಿತ ಆಗುವ ಕತೆ ಅಲ್ಲ. ಯೂನಿವರ್ಸಲ್‌ ಕಂಟೆಂಟ್‌ ಸಿನಿಮಾ ಇದು. ಹೀಗಾಗಿಯೇ ಓವರ್‌ ಸೀಸ್‌ನಲ್ಲೂ ವಿಕ್ರಾಂತ್‌ ರೋಣ ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ. ಬಿಡುಗಡುಗಡೆಗೂ ಮುನ್ನವೇ ಅತ್ಯಧಿಕ ಬೆಲೆಗೆ ಮಾರಾಟಗೊಂಡಿರುವ ಕನ್ನಡ ಸಿನಿಮಾ ನಮ್ಮದು ಎನ್ನುವ ಖುಷಿ ಇದೆ. ಸದ್ಯದಲ್ಲೇ ವಿದೇಶಗಳಲ್ಲಿ ಎಲ್ಲೆಲ್ಲಿ ಎಷ್ಟುಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ ಎಂಬುದನ್ನು ಹೇಳುತ್ತೇವೆ’ ಎನ್ನುತ್ತಾರೆ ಜಾಕ್‌ ಮಂಜು.

 

'ಗರುಡ ಗಮನ ವೃಷಭ ವಾಹನ' ನೋಡಿ ದೀರ್ಘ ಪತ್ರ ಬರೆದ ಸುದೀಪ್; ರಾಜ್, ರಿಷಬ್ ಬಗ್ಗೆ ಹೇಳಿದ್ದೇನು?

ಜುಲೈ 8ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಚಿತ್ರವನ್ನು ದೊಡ್ಡ ಮಟ್ಟಕ್ಕೆ ಪ್ರಚಾರ ಮಾಡಿ ಬಿಡುಗಡೆ ಮಾಡುವುದಕ್ಕೆ ಸಾಕಷ್ಟುಸಮಯ ಇದೆ. ಸದ್ಯಕ್ಕೆ ಓವರ್‌ ಸೀಸ್‌ ಮಾರುಕಟ್ಟೆಯಲ್ಲಿ ನಮ್ಮ ಚಿತ್ರ ಯಶಸ್ಸು ಆಗಿದ್ದು, ಬೇರೆ ರಾಜ್ಯಗಳ ಮಾರುಕಟ್ಟೆಯಲ್ಲೂ ಇದೇ ರೀತಿ ಸದ್ದು ಮಾಡಲಿದೆ. ಎಲ್ಲ ವರ್ಗದ ಹಾಗೂ ಭಾಷೆಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದಾಗಿರುವುದರಿಂದ ‘ವಿಕ್ರಾಂತ್‌ ರೋಣ’ ಯೂನಿವರ್ಸಲ್‌ ಕಂಟೆಂಟ್‌ ಚಿತ್ರ.

- ಜಾಕ್‌ ಮಂಜು, ನಿರ್ಮಾಪಕ

ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರವಿದು. ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್‌ ಭಂಡಾರಿ, ನೀತಾ ಅಶೋಕ್‌ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕ ಜಾಕ್‌ ಮಂಜುನಾಥ್‌ ಅವರ ಜತೆಗೆ ನಿರ್ಮಾಣದಲ್ಲಿ ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್‌ ಪಾಂಡಿಯನ್‌ ಕೂಡ ಸಾಥ್‌ ನೀಡಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಕೆಲವು ಫೂಟೇಜ್ ನೋಡಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಹಾಡಿಹೊಗಳಿದ್ದಾರೆ.ಈ ಬಗ್ಗೆ ರಾಮ್ ಗೋಪಾಲ್ ವರ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕೆಲವು 3ಡಿ ಫೂಟೇಜ್ ನೋಡುವ ಭಾಗ್ಯ ಸಿಕ್ಕುತ್ತು. ಇದು ನೆಕ್ಸ್ಟ್ ಲೆವೆಲ್ ಸಿನಿಮಾ. ಅದ್ಭುತವಾಗಿದೆ. ಜುಲೈ 28ರಂದು ಬರ್ತಿರುವ ಈ ಸಿನಿಮಾವನ್ನು ನೋಡಲು ನಾನು ಕಾಯುತ್ತಿದ್ದೀನಿ' ಎಂದು ಹೇಳಿದ್ದಾರೆ. RGV ಟ್ವೀಟ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ.

ಪ್ರೊ. ನಂಜುಂಡಸ್ವಾಮಿ ಬಯೋಪಿಕ್‌ನಲ್ಲಿ ಕಿಚ್ಚ ಸುದೀಪ್?

ಇನ್ನು ರಾಮ್ ಗೋಪಾಲ್ ವರ್ಮ ಅವರ ಟ್ವೀಟ್ ಶೇರ್ ಮಾಡಿ ನಿರ್ದೇಶಕ ಅನೂಪ್ ಭಂಡಾರಿ ಸಹ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ರಾಮ್ ಗೋಪಾಲ್ ವರ್ಮ ಇತ್ತೀಚಿಗಷ್ಟೆ I am R ಸಿನಿಮಾ ಟೈಟಲ್ ಬಿಡುಗಡೆಗೆ ಬೆಂಗಳೂರಿಗೆ ಆಗಮಿಸಿದ್ದರು. I am R ಸಿನಿಮಾಗೆ ರಾಮ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುತ್ತಿದ್ದು ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಟೈಟಲ್ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹರಿಸಿದರು. ಟೈಟಲ್ ಬಿಡುಗಡೆ ವೇಳೆ ಮಾತನಾಡಿದ್ದ ಸುದೀಪ್ ತನ್ನ ವೃತ್ತಿ ಬದುಕಿನಲ್ಲಿ ಕೆಲವು ನಿರ್ದೇಶಕರು ಪ್ರಭಾವ ಬೀರಿದ್ದಾರೆ ಎಂದು ಹೇಳಿದರು. ಇಲ್ಲಿಂದ ತನ್ನನ್ನು ಕರೆದುಕೊಂಡು ಹೋಗಿ ಮುಂಬೈಗೆ ಪರಿಚಯಿಸಿ ಅಲ್ಲಿಂದ ನನ್ನ ಬದುಕನ್ನು ಬೇರೆ ರೀತಿ ಬದಲಾಗುವಂತೆ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂದು ಸುದೀಪ್ ಹೆಮ್ಮೆಯಿಂದ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ