ಹೊಂಬಾಳೆ ಫಿಲ್ಮ್ಸ್‌ಗೆ 6 ನೇ ವರ್ಷದ ಸಂಭ್ರಮ; ಹೀಗಿತ್ತು ಸ್ಯಾಂಡಲ್‌ವುಡ್ ತಾರೆಯರ ಸಮಾಗಮ!

Srilakshmi kashyap   | Asianet News
Published : Dec 24, 2019, 01:10 PM ISTUpdated : Dec 24, 2019, 03:36 PM IST
ಹೊಂಬಾಳೆ ಫಿಲ್ಮ್ಸ್‌ಗೆ 6 ನೇ ವರ್ಷದ ಸಂಭ್ರಮ; ಹೀಗಿತ್ತು ಸ್ಯಾಂಡಲ್‌ವುಡ್ ತಾರೆಯರ ಸಮಾಗಮ!

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಬಿಗ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್‌ಗೆ 6 ನೇ ವರ್ಷದ ಆfಯನಿವರ್ಸರಿ ಸಂಭ್ರಮ. ಈ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು ಭಾಗವಹಿಸಿ ಇನ್ನಷ್ಟು ಜೋಶ್ ತುಂಬಿದ್ದಾರೆ. ಹೇಗಿತ್ತು ಸೆಲಬ್ರೇಶನ್ ಝಲಕ್ ಇಲ್ಲಿದೆ ನೋಡಿ. 

ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಹಾಗೂ ವಿಭಿನ್ನ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್‌ಗೆ ಆರು ವರ್ಷಗಳು ತುಂಬಿದೆ.   ಕಳೆದ ಆರು ವರ್ಷಗಳಿಂದ ಪ್ರೇಕ್ಷಕರನ್ನ ಸಿನಿಮಾ ನಿರ್ಮಾಣದ ಮೂಲಕ ರಂಜಿಸುತ್ತಿರೋ ಹೊಂಬಾಳೆ ಫಿಲ್ಮ್ಸ್ 6 ನೇ ವರ್ಷದ ಸಂಭ್ರಮವನ್ನ ಹಂಚಿಕೊಂಡಿದೆ.ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ವಿಶೇಷ ಪಾರ್ಟಿ ಆಯೋಜಿಸಿದ್ದರು.  ಈ ಪಾರ್ಟಿಯಲ್ಲಿ ಯಶ್, ನಿಖಿಲ್ ಕೂಡ ಭಾಗಿ ಭಾಗಿಯಾದರು. 

'ಅರ್ಜುನ್‌ ರೆಡ್ಡಿ' ನಟಿ ವಿರುದ್ಧ ಕ್ರಿಮಿನಲ್ ಕೇಸ್; ಹಿಂದಿದೆ ಇಂಟ್ರೆಸ್ಟಿಂಗ್ ಟ್ವಿಸ್ಟ್‌!

ಅದ್ದೂರಿ ಸಿನಿಮಾಗಳನ್ನ ನೀಡಿರೋ ಸಂಸ್ಥೆ ಹೊಂಬಾಳೆ 

'ನಿನ್ನಿಂದಲೇ' ಸಿನಿಮಾ ಮೂಲಕ ತನ್ನ ಜರ್ನಿಯನ್ನು ಚಿತ್ರರಂಗದಲ್ಲಿ ಆರಂಭ ಮಾಡಿ ನಂತರ 'ಮಾಸ್ಟರ್ ಪೀಸ್' , 'ರಾಜಕುಮಾರ', 'ಕೆಜಿಎಫ್'  ಹಾಗೂ 'ಯುವರತ್ನ' ಚಿತ್ರವನ್ನು ತೆರೆ ಮೇಲೆ ತಂದಿದೆ.  ಈಗ 'ಕೆಜಿಎಫ್ 2' ಚಿತ್ರವನ್ನ ತೆರೆ ಮೇಲೆ ತರಲು ತಯಾರಿ ನಡೆಸುತ್ತಿದೆ.  ಆರು ವರ್ಷದಲ್ಲಿ ಹೊಂಬಾಳೆ ಫಿಲ್ಮ್ಸ್ಅಡಿಯಲ್ಲಿ ನಿರ್ಮಾಣ ಆದ ಪ್ರತಿ ಚಿತ್ರವೂ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗಿದ್ದು ಹೆಮ್ಮೆಯ ವಿಚಾರ. 

ಕೆಎಫ್ ಬಿಡುಗಡೆಗೆ ವರ್ಷದ ಹರುಷ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಕೆಜಿಎಫ್ ಸಿನಿಮಾ ಬಿಡುಗಡೆ ಆಗಿ ಒಂದು ವರ್ಷ ಕಳೆದಿದೆ. ಭಾರತೀಯ ಸಿನಿಮಾರಂಗದಲ್ಲೇ ಬಿಗ್ ಸಕ್ಸಸ್ ಕಂಡಿರೋ ಸಿನಿಮಾ ಇದಾಗಿರೋ ಕಾರಣ ಸಿನಿಮಾತಂಡ ಅದನ್ನು ಒಟ್ಟಿಗೆ ಸೆಲಬ್ರೇಟ್ ಮಾಡಿತು.

ಅಮಿರ್ ಖಾನ್ ಪುತ್ರಿ ಇರಾ ಕಾಡಿನ ಮಧ್ಯೆ ಅರಬೆತ್ತಲಾಗಿ ಮಲಗಿದ್ಯಾಕೆ?

 

ಸಂಭ್ರಮಕ್ಕೆ ತಯಾರಾಯ್ತು ನರಾಚಿ ಕೇಕ್ 

ಆರು ವರ್ಷ ಪೂರೈಸಿರುವ ಸಂಭ್ರಮವನ್ನುಹೊಂಬಾಳೆ ಫಿಲ್ಮ್ಸ್ ವಿಭಿನ್ನವಾಗಿ ಸೆಲಬ್ರೇಟ್ ಮಾಡಿದೆ. ನರಾಚಿಯ ಕೇಕ್ ಅನ್ನು ಡಿಸೈನ್ ಮಾಡಿಸಲಾಗಿತ್ತು. ಆರ್ಟ್ ಡೈರೆಕ್ಟರ್ ಶಿವಕುಮಾರ್ ಹಾಗೂ ಕೇಕ್ ಆರ್ಟಿಸ್ಸ್ ಶೃತಿ ಸೇರಿ ನರಾಚಿ ಸೆಟ್ ಅನ್ನೇ ಹೋಲುವಂತಹ ಕೇಕ್ ತಯಾರಿಸಿದ್ದರು. 

ಹೊಂಬಾಳೆ ಫಿಲ್ಮ್ಸ್ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ 

ಹೊಂಬಾಳೆ ಸಿನಿ ಸಂಸ್ಥೆಗೆ ಆರು ವರ್ಷ ಹಾಗೂ ಕೆಜಿಎಫ್ ರಿಲೀಸ್ ಆಗಿ ಒಂದು ವರ್ಷದ ಪಾರ್ಟಿಯನ್ನು ಒಟ್ಟಿಗೆ ಸೆಲಬ್ರೇಟ್ ಮಾಡಲಾಯಿತು. ಹೊಂಬಾಳೆ ಸಂಸ್ಥೆಯಲ್ಲಿ ಅಭಿನಯ ಮಾಡಿದ್ದ ಹಾಗೂ ಸಿನಿಮಾರಂಗದ ಸಾಕಷ್ಟು ಕಲಾವಿದರು ಪಾರ್ಟಿಯಲ್ಲಿ ಭಾಗಿಯಾದರು. ಯಶ್, ಪುನೀತ್, ನಿಖಿಲ್ , ಶಿವರಾಜ್ ಕುಮಾರ್, ಉಪೇಂದ್ರ, ರವಿಚಂದ್ರನ್, ಅಭಿಷೇಕ್ ಅಂಬರೀಶ್, ಪ್ರಜ್ವಲ್, ಅನೀಶ್ ಇನ್ನು ಅನೇಕರು ಭಾಗಿಯಾಗಿ ಜೋಶ್ ತುಂಬಿದರು. 

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್