'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರಕ್ಕೆ ದೆಹಲಿಯಲ್ಲಿ 'ಸ್ವರ್ಣ ಕಮಲ' ಪಡೆದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಂಭ್ರಮದ ಕ್ಷಣ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಮಾಸ್ಟರ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ನೆನ್ನೆ(ಡಿಸೆಂಬರ್ 23 ರಂದು) ದೆಹಲಿಯಲ್ಲಿ ನಡೆದ 66 ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ 'ಸ್ವರ್ಣ ಕಮಲ' ಪಡೆದಿದ್ದಾರೆ. ಈ ಸಂಭ್ರಮವನ್ನು ಟ್ಟಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
undefined
2018 ರಲ್ಲಿ ತೆರೆ ಕಂಡ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಜನಸಾಮಾನ್ಯರಲ್ಲಿ ಸರ್ಕಾರಿ ಶಾಲೆಗಳ ಮೇಲಿದ್ದ ಅಭಿಪ್ರಾಯವನ್ನು ಬದಲಾಯಿಸಿತ್ತು. ಈ ಚಿತ್ರ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕೆ ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ಮಕ್ಕಳ ಚಿತ್ರ' ಪ್ರಶಸ್ತಿ ಬಂದಿದೆ.
'ಸ್ವರ್ಣ ಕಮಲ ಸ್ವೀಕರಿಸಿ ಖುಷಿಯಾಯ್ತು. ನ್ಯಾಷನಲ್ ಅವಾರ್ಡ್‌ನಲ್ಲಿ SHPSk ಗೆ ಬೆಸ್ಟ್ ಮಕ್ಕಳ ಚಿತ್ರ ಪ್ರಶಸ್ತಿ ಪಡೆದಿದ್ದು ಹೆಮ್ಮೆಯ ವಿಚಾರ. ಥ್ಯಾಂಕ್ ಯೂ' ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಿಂದ, ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಇನ್ನು ಚಿತ್ರರಂಗದಲ್ಲಿ ರಿಷಬ್‌ಗೆ ಚಡ್ಡಿ ದೋಸ್ತ್ ಅಂದ್ರೆ ರಕ್ಷಿತ್ ಶೆಟ್ಟಿ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಚಿತ್ರಗಳೆಲ್ಲಾ ಸೂಪರ್ ಹಿಟ್ ಆಗಿವೆ. ಗೆಳೆಯನ ಸಿನಿಮಾಗೆ ಪ್ರಶಸ್ತಿ ಬಂದ ಖುಷಿಯಲ್ಲಿ 'ನಿನ್ನ ಸಾಧನೆಗೆ ಇಡೀ ತಂಡ ಖುಷಿಪಟ್ಟಿದೆ. ಪ್ರೌಡ್ ಆಫ್ ಯೂ ಮಗಾ. ಇನ್ನು ಮಡಿಲಿಗೆ ಇನ್ನು ಹೆಚ್ಚು ಅವಾರ್ಡ್‌ಗಳು ಬರಲಿ ' ಎಂದು ವಿಶ್ ಮಾಡಿದ್ದಾರೆ.
What an achievement. The whole team is proud of you maga ... Many more to come your way 🤗🤗🤗 pic.twitter.com/oUhKvElbJ9
— Sriman Narayana (@rakshitshetty)