
ಹೀರೋಗಳ ಕೈಗೆ ಲಾಂಗ್ ಕೊಟ್ಟು ಮಾಸ್ ನಿರ್ದೇಶಕ ಎಂದೆನಿಸಿಕೊಂಡಿರುವ ಜೋಗಿ ಪ್ರೇಮ್ 'ದಿ ವಿಲನ್' ಚಿತ್ರದ ನಂತರ 'ಏಕ್ ಲವ್ ಯಾ' ಚಿತ್ರಕ್ಕೆ ಕೈ ಹಾಕಿದ್ದಾರೆ. ನಟಿ ರಕ್ಷಿತಾ ಸಹೋದರ ರಾಣಾ 'ಏಕ್ ಲವ್ ಯಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ರಚ್ಚುಗೂ ಇದ್ಯಂತೆ ಲವ್ ಫೆಲ್ಯೂರ್; ರಿವೀಲ್ ಮಾಡೋಕೆ ಪ್ರೇಮ್ ಬರ್ಬೇಕಾಯ್ತು!
ಚಿತ್ರದ ಟೈಟಲ್ ಟ್ರಾಕ್ ಹಾಡಿಗೆ ಇಡೀ ಚಿತ್ರತಂಡ ಟಿಕ್‌ಟಾಕ್ ಮಾಡಿದೆ ಹಾಗೂ ಟೀಸರ್ ಅತೀ ಶ್ರೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಟ್ಟಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಜೋಗಿ ಪ್ರೇಮ್‌ಗೂ ಜೈಲ್‌ಗೂ ಏನೋ ನಂಟು ಅನಿಸುತ್ತದೆ. ಕೆಲ ದಿನಗಳ ಹಿಂದೆ ಶಿವಮೊಗ್ಗದ ಜೈಲಲ್ಲಿ ಶೂಟಿಂಗ್ ಶುರು ಮಾಡುವ ಮೂಲಕ ಜರ್ನಿ ಸ್ಟಾರ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಸಾಕಷ್ಟು ಹೆಸರು ಮಾಡಿರುವ ಸೂರಜ್ ಹಾಗೂ ಪ್ಯಾಕು ಪ್ಯಾಕು ಅಲಿಯಾಸ್ ಹಿತೇಶ್ ಮತ್ತು ಡಿಫರೆಂಟ್ ಆಗಿ ಟಿಕ್ ಟಾಕ್ ಮಾಡುವ ನಿಖಿಲ್ ಗೌಡ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.