ಕೊನೆಗೂ 'KGF-3' ಬಗ್ಗೆ ಸತ್ಯ ಬಾಯ್ಬಿಟ್ಟ ಯಶ್; ಫ್ಯಾನ್ಸ್‌ಗೆ ಪ್ರಾಮಾಣಿಕ ಉತ್ತರ ಕೊಟ್ಟು ರಾಕಿಂಗ್ ಸ್ಟಾರ್!

Published : Oct 13, 2025, 01:46 PM IST
kgf star yash

ಸಾರಾಂಶ

ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್‌ಗೆ ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ! ಅದು ಬೇರೇನೂ ಅಲ್ಲ, ನಿಮ್ಮ 'ಕೆಜಿಎಫ್ 3' ಯಾವಾಗ ಬರುತ್ತೆ ಅನ್ನೋ ಪ್ರಶ್ನೆ. ಈ ಮೊದಲೆಲ್ಲಾ ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನ್ನಾಡುತ್ತಿದ್ದ ನಟ ಯಶ್ ಅವರಿ ಇದೀಗ ಕ್ಲಿಯರ್ ಪಿಕ್ಚರ್ ಕೊಟ್ಟಿದ್ದಾರೆ..

ಕನ್ನಡದ ನಟ ಎಂಬ ಹಣೆಪಟ್ಟಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದವರು!

ಕನ್ನಡದ 'ರಾಕಿಂಗ್ ಸ್ಟಾರ್' ಖ್ಯಾತಿಯ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಈಗ ಇಂಟರ್‌ನ್ಯಾಷನಲ್ ಪ್ರಸಿದ್ಧಿ ಪಡೆದು ಸಖತ್ ಮಿಂಚುತ್ತಿರೋ ನಟ. ಕೆಜಿಎಫ್ ಖ್ಯಾತಿಯ ನಟ ಯಶ್ ಅವರು ಸದ್ಯಕ್ಕೆ ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್' ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ ಪಾರ್ಟ್-1' ನಲ್ಲಿ ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ನಟ ಎಂಬ ಹಣೆಪಟ್ಟಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದವರು. ಇಂದು ಯಶ್ ಮಾರುಕಟ್ಟೆ ಬಹಳಷ್ಟು ದೊಡ್ಡದಿದೆ.

ಕೆಜಿಎಫ್ ಸಿನಿಮಾದ ಬಳಿಕ ನಟ ಯಶ್ ಅವರು ಜಗತ್ತಿನ ಸಾಕಷ್ಟು ಸಂದರ್ಶನಗಳಲ್ಲಿ ಮಾತನ್ನಾಡಿದ್ದಾರೆ. ಕನ್ನಡ ಭಾಷೆಗೆ ಸೀಮಿತವಾಗಿದ್ದ ನಟ ಯಶ್ ಅವರು 'ಕೆಜಿಎಫ್ ಪಾರ್ಟ್ 1' ಹಾಗೂ 'ಕೆಜಿಎಫ್ ಪಾರ್ಟ್ 2' ಸಿನಿಮಾದ ಬಳಿಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಅಲ್ಲಿಂದ ಮುಂದೆ ಯಶ್ ಸಂದರ್ಶನಗಳು ಹಾಗೂ ಯಶ್ ಈವೆಂಟ್‌ಗಳಿಗೆ ಜನ ಕಿಕ್ಕಿರಿದು ಸೇರುತ್ತಾರೆ. ಯಶ್ ಮಾತಿಗೆ ಚಪ್ಪಾಳೆ ತಟ್ಟಿ ತಲೆದೂಗುತ್ತಾರೆ. ಅಂಥದ್ದೇ ಸಂದರ್ಶನದಲ್ಲಿ ನಟ ಯಶ್ ಅವರು ಈ ಹಿಂದೆ ಆಡಿರೋ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಅದೇನು ಗೊತ್ತಾ?

ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ!

ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್‌ಗೆ ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ! ಅದು ಬೇರೇನೂ ಅಲ್ಲ, ನಿಮ್ಮ 'ಕೆಜಿಎಫ್ 3' ಯಾವಾಗ ಬರುತ್ತೆ ಅನ್ನೋ ಪ್ರಶ್ನೆ. ಈ ಮೊದಲೆಲ್ಲಾ ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನ್ನಾಡುತ್ತಿದ್ದ ನಟ ಯಶ್ ಅವರಿ ಇದೀಗ ಕ್ಲಿಯರ್ ಪಿಕ್ಚರ್ ಕೊಡುತ್ತಿದ್ದಾರೆ. ಬಾಲಿವುಡ್ ಸಂದರ್ಶನದಲ್ಲಿ ನಟ ಯಶ್ ಅವರು ಈ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ರೆ ಅವರೇನು ಹೇಳಿದ್ದಾರೆ ನೋಡಿ..

ಖಂಡಿತವಾಗಿಯೂ ಕೆಜಿಎಫ್ 3 ಸಿನಿಮಾ ಆಗುತ್ತೆ!

ಖಂಡಿತವಾಗಿಯೂ ಕೆಜಿಎಫ್ 3 ಸಿನಿಮಾ ಆಗುತ್ತೆ.. ಆದ್ರೆ ಈಗ ಅಲ್ಲ. ಯಾಕಂದ್ರೆ ಸದ್ಯಕ್ಕೆ ನಾನು ಬೇರೆ ಎರಡು ಪ್ರಾಜೆಕ್ಟ್‌ಗಳಲ್ಲಿ ಫುಲ್ ಬ್ಯುಸಿ ಇದೀನಿ. ಅಷ್ಟೇ ಅಲ್ಲ, ಕೆಜಿಎಫ್ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಬೇರೆಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ನಾವಿಬ್ಬರೂ ಕಾಲ್ ಮಾಡಿ ಮಾತನಾಡುವಾಗ ಈ ಕೆಜಿಎಫ್ 3 ಮಾಡುವ ಬಗ್ಗೆ ಮಾತನ್ನಾಡುತ್ತಿದ್ದೇವೆ. ಇಬ್ಬರಿಗೂ ಕೆಜಿಎಫ್ ಸಿನಿಮಾ ಮಾಡುವ ಬಗ್ಗೆ ತುಂಬಾ ಆಸಕ್ತ ಇದೆ. ಆದರೆ, ಇಬ್ಬರೂ ಆ ಬಗ್ಗೆ ಸಂಪೂರ್ಣ ಗಮನ ಕೊಡಬೇಕಿದೆ. ಆದ್ದರಿಂದ ಸದ್ಉ ನಮ್ಮನಮ್ಮ ಕೈನಲ್ಲಿರುವ ಬೇರೆ ಸಿನಿಮಾಗಳು ಮುಗಿದ ಮೇಲಷ್ಟೇ ಆ ಸಿನಿಮಾ ಶುರುವಾಗಲಿದೆ.

ನಮಗೆ ಕೆಜೆಎಫ್ ಸಿನಿಮಾಗೆ ಇರುವ ಕ್ರೇಜ್ ಹಾಗೂ ಜನರ ನಂಬಿಕೆಯನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಬಗ್ಗೆ ಆಸಕ್ತಿಯಿಲ್ಲ. ಆದರೆ, ಕೆಜಿಎಫ್ ಸಿನಿಮಾ ತೆರೆಗೆ ತಂದಾಗ ಅದು ಈ ಮೊದಲಿನ ಎರಡೂ ಸಿನಿಮಾಗಳನ್ನೂ ಮೀರಿಸುವಂತಿರಬೇಕು. ಅದೆಷ್ಟು ಮಾಸಿವ್ ಆಗಿರಬೇಕು ಎಂದರೆ, ಅದೊಂದು ಹೊಸ ದಾಖಲೆ ಬರೆಯಬೇಕು. ಅಷ್ಟೇ ಅಲ್ಲ, ಜನರ ನಿರೀಕ್ಷೆಯನ್ನೂ ಮೀರಿ ಅದು ಮೂಡಿ ಬರಬೇಕು. ಹೀಗಾಗಿ, ಇಬ್ಬರೂ ಸಮಯ ಮಾಡಿಕೊಂಡು ಆ ಸಿನಿಮಾವನ್ನು ಖಂಡಿತವಾಗಿಯೂ ಮಾಡುತ್ತೇವೆ. ಆದರೆ, ಕಾಲ ಕೂಡಿ ಬಂದಾಗಲಷ್ಟೇ ಅದು ಸಾಧ್ಯ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ