Rider Trailer Release: ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಖಡಕ್ ಡೈಲಾಗ್ ಹೇಳಿದ ನಿಖಿಲ್ ಕುಮಾರ್

By Suvarna NewsFirst Published Dec 16, 2021, 9:02 PM IST
Highlights

ಸ್ಯಾಂಡಲ್‌ವುಡ್‌ನ ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ ಅವರ ಬಹು ನಿರೀಕ್ಷಿತ 'ರೈಡರ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೊದಲ ಬಾರಿಗೆ ಬಾಸ್ಕೆಟ್ ಬಾಲ್ ಪ್ಲೇಯರ್ ಆಟಗಾರನಾಗಿ ನಿಖಿಲ್ ಕಾಣಿಸಿಕೊಂಡಿದ್ದಾರೆ.
 

ಸ್ಯಾಂಡಲ್‌ವುಡ್‌ನ (Sandalwood) ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ (Nikhil Kumar) ಅವರ ಬಹು ನಿರೀಕ್ಷಿತ 'ರೈಡರ್' (Rider) ಚಿತ್ರದ ಟ್ರೇಲರ್ (Trailer) ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಮೊದಲ ಬಾರಿಗೆ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಆಟಗಾರನಾಗಿ ನಿಖಿಲ್ ಕಾಣಿಸಿಕೊಂಡಿದ್ದು, ಫಸ್ಟ್‌ಲುಕ್, ಟೀಸರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಜನ ಮನ್ನಣೆ ಪಡೆದುಕೊಂಡಿದೆ. ಡಿಸೆಂಬರ್ 24ಕ್ಕೆ 250ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ರೈಡರ್' ಚಿತ್ರ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ.

ಬಿಡುಗಡೆಯಾದ 'ರೈಡರ್' ಚಿತ್ರದ ಟ್ರೇಲರ್‌ನಲ್ಲಿ ನಿಖಿಲ್ ರಗಡ್ ಲುಕ್‌ನಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ನಿಖಿಲ್ ಸಖತ್ತಾಗಿ ಸ್ಟಂಟ್ಸ್ ಮಾಡಿದ್ದಾರೆ. ಚಿತ್ರದ ನಾಯಕಿ ಕಾಶ್ಮೀರಿ ಪರ್ದೇಸಿ (Kashmira Pardeshi) ಜೊತೆಗಿನ ಲವ್ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಚಿಕ್ಕಣ್ಣ ಹಾಗೂ ಶಿವರಾಜ್ ಕೆ.ಆರ್.ಪೇಟೆ ಹಾಸ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಮುಖ್ಯವಾಗಿ ಈ ಚಿತ್ರದಲ್ಲಿ ನಿಖಿಲ್ ಎದುರಿಗೆ ಖಡಕ್ ಲುಕ್‌ನಲ್ಲಿ 'ಕೆಜಿಎಫ್' ಖ್ಯಾತಿಯ ಗರುಡ ರಾಮ್ (Garuda Ram) ವಿಲನ್ ಆಗಿ ಅಬ್ಬರಿಸಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ (Anusha Rai) ಅಭಿನಯಿಸಿದ್ದಾರೆ.

Rider Trailer: ಡಿಸೆಂಬರ್ 16ರಂದು ಟ್ರೇಲರ್‌ನಲ್ಲಿ ದರ್ಶನ ನೀಡಲು ನಿಖಿಲ್‌ ಕುಮಾರ್‌ ರೆಡಿ

ವಿಶೇಷವಾಗಿ ಈ ಚಿತ್ರದ ಟ್ರೇಲರ್‌ನಲ್ಲಿ ನಿಖಿಲ್ ಹಾಗೂ ಗರುಡ ರಾಮ್ ಡೈಲಾಗ್‌ಗಳು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. 'ಹೊಡಿದ್ರೆ ಆನೆನೇ ಹೊಡಿಬೇಕು, ಕೆಡವಿದರೆ ಬೆಟ್ಟನೇ ಕೆಡವಬೇಕು'. 'ಆನೆ ಹೊಡಿಯೋಕೆ ಒಂದು ಬುಲೆಟ್, ಬೆಟ್ಟ ಹೊಡಿಯೋಕೆ ಡೈನಾಮೈಟ್'. 'ಸಿಂಹ ತಿರುಗಿ ನೋಡೋದು ಕಮ್ಮಿ, ಯಾಕಂದ್ರೆ ಅದಕ್ಕೆ ದುಶ್ಮನ್‌ಗಳ ಭಯ ಇರೋಲ್ಲ'. ಎಂಬ ಡೈಲಾಗ್‌ಗಳ ಜೊತೆಗೆ ಕೊನೆಯಲ್ಲಿ ಐ ಲವ್ ಯೂ ಚಿನ್ನು ಎಂದು ನಿಖಿಲ್ ಹೇಳಿದಾಗ ಚಿತ್ರದ ಟ್ರೇಲರ್ ಕೊನೆಗೊಳ್ಳುತ್ತದೆ. 'ರೈಡರ್'​ ಆ್ಯಕ್ಷನ್​ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ (Teaser)​ ಮತ್ತು ಹಾಡುಗಳು (Songs) ಧೂಳೆಬ್ಬಿಸಿವೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಿಖಿಲ್​ ನಟಿಸಿದ್ದು, ಈ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.



ವಿಜಯ್​ ಕುಮಾರ್​ ಕೊಂಡ (Vijay Kumar Konda) ಅವರು 'ರೈಡರ್​' ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದು, ನಿಖಿಲ್‌ ಕುಮಾರ್‌ ಆಪ್ತ ಸುನೀಲ್‌ ಗೌಡ (Sunil Gowda) ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲ್ಮ್ಸ್ (Lahari Films)​​ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. 'ರೈಡರ್' ಬಿಡುಗಡೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ (Pressmeet) ನಿಖಿಲ್‌, ಪುನೀತ್‌ (Puneeth Rajkumar) ಅವರ ಗುಣಗಾನ ಮಾಡಿದರು. ರೈಡರ್‌ ಎಲ್ಲಾ ವರ್ಗದವರಿಗೂ ರೀಚ್‌ ಆಗುವ ಚಿತ್ರ. ಪ್ರೀತಿಯಲ್ಲಿರಬೇಕಾದ ಪ್ರಾಮಾಣಿಕತೆ, ಅನಿರೀಕ್ಷಿತಗಳನ್ನ ಸಿನಿಮಾ ಹೇಳುತ್ತೆ. ಟೀನೇಜ್‌ ಹುಡುಗರಿಗೂ ಮೆಸೇಜ್‌ ಇದೆ. ಆದರೂ ಯಾವ ನಿರ್ದೇಶಕರೂ ನನ್ನ ಕೈಲಿ ಯಾಕೆ ಮಚ್ಚು ಹಿಡಿಸಿಲ್ಲ, ಉದ್ದೂದ್ದ ಡೈಲಾಗ್‌ ಕೊಡಲ್ಲ ಅಂತ ನಿಜಕ್ಕೂ ಗೊತ್ತಾಗ್ತಿಲ್ಲ ಎಂದು ನಿಖಿಲ್ ಹೇಳಿದರು. 

Rider Song Release: ಕಾಶ್ಮೀರಿ ಪರ್ದೇಸಿ ಜೊತೆ 'ಮೆಲ್ಲನೆ' ಬಂದ ನಿಖಿಲ್ ಕುಮಾರ್

ಇನ್ನು 'ರೈಡರ್‌' ಚಿತ್ರಕ್ಕೆ ಕೆ.ಎಮ್.ಪ್ರಕಾಶ್ ಸಂಕಲನ, ಶ್ರೀಶ ಕುದುವಳ್ಳಿ ಕ್ಯಾಮೆರಾ ಕೈ ಚಳಕ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗಿತ ಸಂಯೋಜನೆ ಈ ಚಿತ್ರಕ್ಕಿದೆ.
 

click me!