ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ 'ಲವ್ ಯು ರಚ್ಚು' ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ.
ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಅಜಯ್ ರಾವ್ (Ajay Rao) ಮತ್ತು ರಚಿತಾ ರಾಮ್ (Rachita Ram) ಅಭಿನಯದ ಬಹು ನಿರೀಕ್ಷಿತ 'ಲವ್ ಯು ರಚ್ಚು' (Love You Rachchu) ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಗುರು ದೇಶಪಾಂಡೆ (Guru Deshpande) ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶಂಕರ್ ರಾಜ್ (Shankar Raj) ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಲವ್ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ.
ಬಿಡುಗಡೆಯಾದ 'ಲವ್ ಯು ರಚ್ಚು' ಟ್ರೇಲರ್‌ನಲ್ಲಿ ಅಜಯ್ ರಾವ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದ್ದು, ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ ಎಂದು ಚಿತ್ರದ ನಿರ್ದೇಶಕರಾದ ಶಂಕರ್ ರಾಜ್ ಸುಳಿವು ಬಿಟ್ಟುಕೊಟ್ಟಿದ್ದಾರೆ. ಚಿತ್ರದಲ್ಲಿ ರಚಿತಾರಾಮ್ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರೈವರ್ ಅತ್ಯಾಚಾರ ಎಸಗಲು ಬಂದಾಗ ಅವನನ್ನು ಕೊಲೆ ಮಾಡುವ ನಾಯಕಿ. ನಾಯಕಿಯನ್ನು ಬಚಾವ್ ಮಾಡುವ ಸಲುವಾಗಿ ಏನು ಬೇಕಾದರೂ ಮಾಡಲು ಸಿದ್ದನಿರುವ ನಾಯಕನ ಸುತ್ತ ಚಿತ್ರದ ಟ್ರೇಲರ್ ಸಾಗುತ್ತದೆ. ಮುಖ್ಯವಾಗಿ ಆ ಕೊಲೆಯ ಬಗ್ಗೆ ತಿಳಿದ ವ್ಯಕ್ತಿ ಯಾರು ಎಂಬ ಪ್ರಶ್ನೆಯೇ ಚಿತ್ರದ ಸಸ್ಪೆನ್ಸ್.
Love You Rachchu: ಡಿಂಪಲ್ ಹುಡುಗಿಗೆ ಡಾರ್ಲಿಂಗ್ ಎಂದು ಕರೆದ ಅಜಯ್ ರಾವ್
'ಲವ್ ಯು ರಚ್ಚು' ಚಿತ್ರದ ಟ್ರೇಲರ್‌ನ್ನು 'ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಶುಭಕೋರಿದ್ದಾರೆ. ಈಗಾಗಲೇ 'ಲವ್ ಯು ರಚ್ಚು' ಚಿತ್ರದ 'ಮುದ್ದು ನೀನು' (Muddu Neenu) ವಿಡಿಯೋ ಸಾಂಗ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್ ಮಾಡಿತ್ತು. ಇತ್ತೀಚೆಗೆ ಚಿತ್ರದ ಟೈಟಲ್ ಸಾಂಗ್ (Title Track) 'ಓಯ್ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ' ಎಂಬ ಸಾಲಿನ ಹಾಡು ಬಿಡುಗಡೆಯಾಗಿ ಸಂಗೀತ ಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. 'ಭರ್ಜರಿ' ಚೇತನ್ ಕುಮಾರ್ (Chethan Kumar ) ಹಾಡಿಗೆ ಸಾಹಿತ್ಯ ರಚಿಸಿದ್ದು, ನವೀನ್ ಸಜ್ಜು (Naveen Sajju) ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿತ್ತು. ಕದ್ರಿ ಮಂಜುನಾಥ್ (Kadri Manikanth) ಸಂಗೀತ ಸಂಯೋಜನೆ ಈ ಹಾಡಿಗಿತ್ತು.
undefined
'ಲವ್ ಯು ರಚ್ಚು' ಚಿತ್ರದಲ್ಲಿ ಅಜಯ್ ರಾವ್ ಮಗಳು ಚರಿಷ್ಮಾ (Charishma) ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸಬೇಕಾಗಿತ್ತು. ನಮ್ಮ ಚಿತ್ರದ ನಾಯಕ ಅಜಯ್ ರಾವ್ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ಇಡೀ ಚಿತ್ರತಂಡಕ್ಕೆ ಅನಿಸಿತು. ಅದರಂತೆ ಚರಿಷ್ಮಾ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಸಿನಿಮಾದಲ್ಲಿ ಚರಿಷ್ಮಾ ತುಂಬ ಕ್ಯೂಟ್ ಆಗಿ ಕಾಣುತ್ತಾಳೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಈ ಹಿಂದೆ ತಿಳಿಸಿದ್ದಾರೆ.
Love You Rachchu: ಡಿಸೆಂಬರ್ 31ರಂದು ತೆರೆಮೇಲೆ ಬರಲಿದ್ದಾರೆ ಅಜಯ್-ರಚ್ಚು ಜೋಡಿ
ಇನ್ನು 'ಲವ್ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನೊಳಗೊಂಡಿದ್ದು, ಚಿತ್ರದ ಕಥೆಯನ್ನು ಶಶಾಂಕ್ (Shashank) ಬರೆದಿದ್ದಾರೆ. ಈ ಚಿತ್ರಕ್ಕೆ ಶಂಕರ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆಯಿದೆ. ಇದೇ ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿಈ ಚಿತ್ರ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಲಿದೆ.