'ಮುಗಿಲ್​ಪೇಟೆ' ಟ್ರೇಲರ್ ರಿಲೀಸ್: ನವೆಂಬರ್ 19ಕ್ಕೆ ಚಿತ್ರ ಬಿಡುಗಡೆ

By Suvarna News  |  First Published Nov 14, 2021, 9:02 PM IST

ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ ಮುಗಿಲ್​ಪೇಟೆ ಕಥಾವಸ್ತು.


ಮನುರಂಜನ್ ರವಿಚಂದ್ರನ್ (Manuranjan Ravichandran) ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಪ್ರಚಾರ (Promotion) ಕಾರ್ಯವು ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಚಿತ್ರತಂಡ ಚಿತ್ರದ ಟ್ರೇಲರ್‌ನ್ನು (Trailer) ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಟ್ರೇಲರ್ ಪ್ರಾರಂಭದಲ್ಲಿ ಚಿತ್ರತಂಡ, ಇತ್ತೀಚೆಗೆ ನಿಧನರಾದ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ನೆನೆದಿದ್ದಾರೆ.  ಹಾಗೂ ಚಿತ್ರದ ಟ್ರೇಲರ್‌ಗೆ ಸಿನಿರಸಿಕರು ಬೊಂಬಾಟ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

'ಮುಗಿಲ್​ಪೇಟೆ' ಚಿತ್ರದ ಟ್ರೇಲರ್‌ನಲ್ಲಿ, ಮನುರಂಜನ್ ಮಾಸ್ ಎಂಟ್ರಿ, ಫೈಟ್ಸ್, ನವೀರಾದ ಪ್ರೇಮಕಥೆ, ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ಒಂದು ಕೌಟುಂಬಿಕ ಚಿತ್ರಕ್ಕೆ ಬೇಕಾದಂತಹ ಅದ್ಭುತ ಕಥೆಯನ್ನೊಳಗೊಂಡಿದೆ. ಗರ್ವ ಇರೋ ಪ್ರತಿ ತಂದೆ ಬೆನ್ನ ಹಿಂದೆ ಕಂಸನ ಎದೆ ಸೀಳೊ ಕೃಷ್ಣ ಇದ್ದೇ ಇರ್ತಾನೋ, ಪೆಟ್ಟು ತಿಂದಿರೋ ಹುಲಿ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಇಳಿಯುತ್ತೆ, ಬದುಕು ಎರಡು ಯುದ್ಧಗಳ ನಡುವೆ ನಡೆಯುತ್ತೆ, ಪ್ರೀತಿ ಆ ಯುದ್ಧದ ಆರಂಭ, ಪ್ರತಿ ಯುದ್ಧಕ್ಕೂ ಪ್ರೀತಿ ಕಾರಣ ಆಗಲ್ಲ, ದೊಡ್ಡ ದೊಡ್ಡ ಯುದ್ಧಗಳು ನಡೆಯೋದು ನಮ್ಮವರು ಅಂದುಕೊಳ್ಳುವವರ ಜೊತೆನೇ, ಪ್ರತಿ ಯುದ್ಧದ ಕೊನೆನೂ ಆ ಒಬ್ಬನಿಂದನೇ ಆಗೋದು. ಅದು ಅವರೇ ಅಂತಾ ಗೊತ್ತಾದ ಮೇಲೆ ಟಚ್ ಮಾಡಬಾರದು ಎಂಬ ಡೈಲಾಗ್‌ಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿವೆ.

Tap to resize

Latest Videos

undefined

Mugilpete Song Release: ದೂರ ಹೋಗೋ ಮುನ್ನ ದೂರಲಾರೆ ಎಂದ ಮನುರಂಜನ್

ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ನಟಿ ತಾರಾ ಸುಶೀಲಾ ಪಾತ್ರದಲ್ಲಿ, ಅವಿನಾಶ್ ರಾಮನಾಥನಾಗಿ, ಸಾಧುಕೋಕಿಲಾ ಜಿಲೇಬಿಯಾಗಿ, ರಂಗಾಯಣ ರಘು ಭಾಗವತರಾಗಿ, ರಿಷಿ ಗೌತಮ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಕಯಾದು ಲೋಹರ್  (Kayadu Lohar) ಅಪೂರ್ವ ಪಾತ್ರಕ್ಕೆ ಬಣ್ಣ ಹಚ್ಚಿದರೆ ಮನುರಂಜನ್ ರಾಜನಾಗಿ ಅಭಿನಯಿಸಿದ್ದಾರೆ. ಇನ್ನು ಇತ್ತಿಚೆಗಷ್ಟೇ ಚಿತ್ರದ  'ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ' ರೊಮ್ಯಾಂಟಿಕ್ ಸಾಂಗ್ ಹಾಗೂ 'ದೂರ ಹೋಗೋ ಮುನ್ನ ದೂರಲಾರೆ' ಎಂಬ ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡುಗಳಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ಭರತ್ ಎಸ್. ನಾವುಂದ  (Bharath S Navunda) ಆಕ್ಷನ್ ಕಟ್ ಹೇಳಿದ್ದು, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮೊದಲಾದ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಹಾಗೂ ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ 'ಮುಗಿಲ್​ಪೇಟೆ' ಕಥಾವಸ್ತು. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ಚಿತ್ರದಲ್ಲಿದೆ ಎಂದು ನಿರ್ದೇಶಕ ಭರತ್ ಎಸ್. ನಾವುಂದ ತಿಳಿಸಿದ್ದಾರೆ.

'ಮುಗಿಲ್​ಪೇಟೆ' ಬಿಡುಗಡೆಗೂ ಮುನ್ನ ಆ ತಾಯಿಯ ದರ್ಶನ ಮಾಡು: ಕ್ರೇಜಿಸ್ಟಾರ್ ರವಿಚಂದ್ರನ್

ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಹೀಗೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. 'ಮುಗಿಲ್‌ಪೇಟೆ'  ಚಿತ್ರವು ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
 

click me!