Yogaraj Bhat ಹಿನ್ನೆಲೆ ಧ್ವನಿ: ಧಮಾಕ ಟೀಸರ್‌ನಲ್ಲಿ ಶಿವರಾಜ್ ಕೆ.ಆರ್.ಪೇಟೆ ಚೇಷ್ಟೆಗಳು

By Suvarna NewsFirst Published Dec 20, 2021, 7:44 PM IST
Highlights

ಈ ಹಿಂದೆ 'ನಾನು ಮತ್ತು ಗುಂಡ' ಹೆಸರಿನ ಚಿತ್ರದಲ್ಲಿ ನಾಯಿ ಜತೆ ತೆರೆ ಮೇಲೆ ಎಂಟ್ರಿ ಕೊಟ್ಟ ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ಈಗ ಕಾಮಿಡಿ ಧಮಾಕ ಎನ್ನುತ್ತಿದ್ದಾರೆ. ಹೌದು, ಅವರ ಮತ್ತೊಂದು ಸಿನಿಮಾ ಹೆಸರು 'ಧಮಾಕ'. ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಈ ಹಿಂದೆ 'ನಾನು ಮತ್ತು ಗುಂಡ' (Nanu Mattu Gunda) ಹೆಸರಿನ ಚಿತ್ರದಲ್ಲಿ ನಾಯಿ ಜತೆ ತೆರೆ ಮೇಲೆ ಎಂಟ್ರಿ ಕೊಟ್ಟ ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ (Shivraj K.R.Pete) ಈಗ ಕಾಮಿಡಿ ಧಮಾಕ ಎನ್ನುತ್ತಿದ್ದಾರೆ. ಹೌದು, ಅವರ ಮತ್ತೊಂದು ಸಿನಿಮಾ ಹೆಸರು 'ಧಮಾಕ' (Dhamaka). ಈ ಚಿತ್ರದ ಟೀಸರ್ (Teaser) ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಆನಂದ್ ಆಡಿಯೋ (Anand Audio) ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ನೋಡಬಹುದಾಗಿದೆ. ನಿರ್ದೇಶಕ ಯೋಗರಾಜ್ ಭಟ್ (Yograj Bhat) ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್‌ನಲ್ಲಿ ಶಿವರಾಜ್ ಕೆ.ಆರ್.ಪೇಟೆ ಅವರ ಕಾಮಿಡಿ ಚೇಷ್ಟೆಗಳು ಸೇರಿಕೊಂಡು ಹಾಸ್ಯದ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. 

ಪಂಚಿಂಗ್ ಡೈಲಾಗ್, ಶಿವರಾಜ್ ಅವರ ಮ್ಯಾನರಿಸಂ ಟೀಸರ್‌ನ ಹೈಲೈಟ್. ಟೀಸರ್​ ನೋಡಿದ ನಂತರದಲ್ಲಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಸಿನಿಮಾದಲ್ಲೂ ಇಷ್ಟೇ ಕಾಮಿಡಿ ಇರಲಿದೆಯೇ ಎನ್ನುವ ಕುತೂಹಲ ಇದೆ. ಸಿನಿಮಾದಲ್ಲಿ ಸಸ್ಪೆನ್ಸ್​, ಕಾಮಿಡಿ ಹೀಗೆ ನಾನಾ ವಿಚಾರಗಳನ್ನು ಹೇಳಲಾಗಿದೆ ಎಂಬುದನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ವಿಶೇಷವಾಗಿ ಟೀಸರ್‌ನಲ್ಲಿ ಯೋಗರಾಜ್ ಭಟ್ಟರ ಟಿಪಿಕಲ್ ಸಂಭಾಷಣೆಗಳು ಸಖತ್ ಎಂಟರ್‌ಟೈನಿಂಗ್ ಆಗಿವೆ. ಸಿನಿಮಾದಲ್ಲೂ ಯೋಗರಾಜ್ ಭಟ್ ಅವರ ಧ್ವನಿ ಇರಲಿದೆಯೇ ಎಂಬುದು ಗೊತ್ತಿಲ್ಲ. 

Ek Love Ya: ಮೀಟ್ ಮಾಡೋಣ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡ ಜೋಗಿ ಪ್ರೇಮ್

ಅಂದಹಾಗೆ ಲಕ್ಷ್ಮೀ ರಮೇಶ್ (Lakshmi Ramesh) 'ಧಮಾಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಸಿಂಪಲ್ ಸುನಿ (Simple Suni) ಬಳಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಇದೊಂದು ಸಂಪೂರ್ಣ ಹಾಸ್ಯಮಯ ಸಿನಿಮಾವಾಗಿದ್ದು, ಕಾಮಿಡಿ ಕಿಲಾಡಿಗಳು ಪ್ರತಿಭೆ ನಯನಾ ಶರತ್ (Nayana Sharat) ಈ ಚಿತ್ರದ ನಾಯಕಿ. ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್ ತುಂಬಿನಾಡು, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್, ಸೇರಿದಂತೆ ಮುಂತಾದವರ ತಾರಾಗಳಗವಿದೆ. 

ಎಸ್‌.ಆರ್.ಮೀಡಿಯಾ ಪ್ರೊಡಕ್ಷನ್ಸ್‌ (SR Media Productions) ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ (Nandi Entertainment) ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು, ಸುನೀಲ್ ಎಸ್.ರಾಜ್ (Sunil S Raj) ಹಾಗೂ ಅನ್ನಪೂರ್ಣ ಬಿ.ಪಾಟೀಲ್ (Annapoorna B Patil) ಚಿತ್ರದ ನಿರ್ಮಾಪಕರು. ಹಾಲೇಶ್ ಕ್ಯಾಮರಾ ಕೈಚಳಕ, ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಹಾಗೂ ವಿನಯ್ ಕುಮಾರ್ ಕೂರ್ಗ್ ಸಂಕಲನ ಈ ಚಿತ್ರಕ್ಕಿದೆ. 'ಧಮಾಕ' ಚಿತ್ರದ ಮೋಷನ್ ಪೋಸ್ಟರನ್ನು ಈ ಹಿಂದೆ ಡಾಲಿ ಧನಂಜಯ್ (Dolly Dhananjay) ರಿಲೀಸ್ ಮಾಡಿದ್ದಾರೆ. 

Kichcha Sudeep: 36 ವರ್ಷದ ಹಳೆಯ ಕನಸನ್ನು ನನಸು ಮಾಡಿಕೊಂಡ ಕಿಚ್ಚ

'ನಮ್ಮ ಗ್ರಾಮೀಣ ಪ್ರತಿಭೆ, ಬೇರೆ ಬೇರೆ ಪಾತ್ರಗಳಿಂದ ನಮ್ಮೆಲ್ಲರನ್ನು ಮೆಚ್ಚಿಸಿ, ಒಳ್ಳೊಳ್ಳೆಯ ಸಿನಿಮಾಗಳಲ್ಲಿ, ಒಳ್ಳೊಳ್ಳೆಯ ಪಾತ್ರಗಳನ್ನು ಮಾಡುತ್ತಿರುವವರು ಶಿವರಾಜ್ ಕೆ.ಆರ್‌. ಪೇಟೆ. ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಅದ್ಭುತ ಪ್ರತಿಭೆ. ಅವರು ಗ್ರಾಮೀಣ ಪ್ರತಿಭೆ ಅನ್ನೋದು ತುಂಬ ಖುಷಿ ನೀಡುತ್ತದೆ. ಅದಕ್ಕೆ ಅದನ್ನು ಒತ್ತಿ ಒತ್ತಿ ಹೇಳುತ್ತೇನೆ. ಅವರ 'ಧಮಾಕ' ಸಿನಿಮಾದ ಮೋಷನ್ ಪೋಸ್ಟರ್ ನೋಡಿದೆ. ಒಂದು ಒಳ್ಳೆಯ ತಂಡ ಸೇರಿ ಮಾಡಿರುವ ಸಿನಿಮಾ. ಈ ಮೋಷನ್ ಪೋಸ್ಟರ್ ನೋಡಿದ್ರೆನೇ ಗೊತ್ತಾಗುತ್ತದೆ, ಇದೊಂದು ಸೆಲೆಬ್ರೇಷನ್ ಅಂತ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯಲಿ. ಸೂಪರ್ ಹಿಟ್ ಆಗಲಿ' ಎಂದು ಡಾಲಿ ಧನಂಜಯ್ ಹಾರೈಸಿದ್ದಾರೆ.
 

click me!