
ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಂಕರ್ ಅನುಶ್ರೀ ಹಾಗೂ ನಟ ಯಶ್ ಅವರಿಬ್ಬರೂ ಒಂದು ವೇದಿಕೆಯ ಮೇಲೆ ಮಾತನಾಡಿರುವ ಹಳೆಯ ವೀಡಿಯೋ ಅದು. ಆದರೆ, ಆ ವೀಡಯೋ ಹಳೆಯದಾಗಿದ್ದರೂ ಅದು ಎಲ್ಲಾ ಕಾಲಕ್ಕೂ ಸಲ್ಲುವಂತಹ, ಎಲ್ಲರಿಗೂ ಸ್ಪೂರ್ತಿ ನೀಡುವಂಥ ವೀಡಿಯೋ ಆಗಿದೆ. ನಿಜವಾಗಿಐ ಆ ವೀಡಿಯೋದಲ್ಲಿ ನಟ ಯಶ್ ಮಾತನಾಡಿರುವ ರೀತಿ ಎಲ್ಲರಿಗೂ ಮಾದರಿ ಎನ್ನಬಹುದು.
ಹಾಗಿದ್ರೆ ನಟ ಯಶ್ ಅಲ್ಲಿ ಅದೇನು ಹೇಳಿದ್ದಾರೆ ನೋಡೋಣ ಬನ್ನಿ.. ಅನುಶ್ರೀ ಅವರು ನಟ ಯಶ್ ಅವರಿಗೆ ಕೆಲವು ಪ್ರಶ್ನೆಗಳನ್ನುಕೇಳಿದ್ದಾರೆ. ಅದಕ್ಕೆ ರಾಕಿಂಗ್ ಸ್ಟಾರ್ ತಮ್ಮ ಅನಿಸಿಕೆಯಂತೆ ಉತ್ತರ ಕೊಟ್ಟಿದ್ದಾರೆ. ಅನುಶ್ರೀ ಕೇಳಿದ ಪ್ರತಿಯೊಂದು ಪ್ರಶ್ನೆಗೆ ಯಶ್ ಕೊಟ್ಟ ಉತ್ತರಕ್ಕೆ ಅಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ, ಕೇಕೆ ಹಾಕಿದ್ದಾರೆ, ಯಶ್ ಮೆಚ್ಯೂರಿಟಿಗೆ ಅಚ್ಚರಿ ಪಟ್ಟಿದ್ದಾರೆ, ತಲೆದೂಗಿದ್ದಾರೆ.
ನಟ ದರ್ಶನ್ ಖೈದಿ ನಂಬರ್ 6106 ಈಗ ಭಾರೀ ಟ್ರೆಂಡ್, ಬೈಕ್ ಕಾರು ಆಟೋ ಮೇಲೆ ಸ್ಟಿಕ್ಕರ್!
ನಟಿ, ನಿರೂಪಕಿ ಅನುಶ್ರೀ ಪ್ರಶ್ನೆ ಕೇಳುತ್ತ ಹೋಗಿದ್ದಾರೆ. ನಟ ಯಶ್ ಉತ್ತರಿಸುತ್ತ ಹೋಗಿದ್ದಾರೆ. ಅನುಶ್ರೀ 'ಬದಲಾವಣೆ' ಪ್ರಶ್ನೆಗೆ- ಅನಿವಾರ್ಯ ಎಂದಿದ್ದಾರೆ ನಟ ಯಶ್. ಬೆಳವಣಿಗೆ, ಅದೂ ಕೂಡ ನಿರ್ಧಿಷ್ವವಾಗಿ ಇರುವಂಥ ವಿಷಯ, ಬೆಳವಣಿಗೆ ಎಲ್ಲರಲ್ಲೂ ಇರ್ಲೇಬೇಕು. ನಿನ್ನೆಗಿಂತ ಇವತ್ತು ಬೆಳೆದಿರ್ಬೇಕು, ಇವತ್ತಿಗಿಂತ ನಾಳೆ ಸ್ವಲ್ಪ ಜಾಸ್ತಿ ಬೆಳೆದಿರ್ಬೇಕು, ನಾಳೆಗಿಂತ ನಾಡಿದ್ದು ನಾಳೆ ಜಾಸ್ತಿ ಬೆಳೆದಿರ್ಬೇಕು, ಹೀಗೆ ಆಗ್ತಾ ಇರ್ಬೇಕು. ಅದೇ ನನ್ನಹಾದಿ, ಅದೇ ನನ್ನ ಬೆಳವಣಿಗೆ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ, ಜೈಲ್‌ನಿಂದಲೇ ಫ್ಯಾನ್ಸ್‌ಗೆ ನಟ ದರ್ಶನ್ ಮನವಿ!
ಇನ್ನು ಆ್ಯಂಕರ್ ಅನುಶ್ರೀ ಎಂದರೆ ಅವರೊಂದು 'ಬೊಂಬಾಟ್ ಮಾತಿನ ಬೊಂಬೆ' ಇದ್ದಂತೆ ಎಂಬುದು ಬಹಳಷ್ಟು ಜನರು ಹೇಳುವ ಮಾತು. ಸ್ಯಾಮಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾ ಇರುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸಿ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟು ಎಂಜಾಯ್ ಮಾಡುವುದು ಅನುಶ್ರೀ ಕೆಲಸವೋ ಹವ್ಯಾಸವೋ ಗೊತ್ತಿಲ್ಲ.
ಲೇಟ್ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..!
ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.