ಸ್ಯಾಂಡಲ್‌ವುಡ್‌ನಲ್ಲಿ ಹೀರೋಯಿನ್ಸ್‌ಗೆ ತೂಕ ಇಳಿಸಿಕೊಳ್ಳೋ ಒತ್ತಡ ಇದ್ಯಾ? ರುಕ್ಮಿಣಿ ಹೇಳೋದ ಕೇಳಿ!

Published : Jun 28, 2024, 02:47 PM ISTUpdated : Jun 28, 2024, 02:55 PM IST
ಸ್ಯಾಂಡಲ್‌ವುಡ್‌ನಲ್ಲಿ ಹೀರೋಯಿನ್ಸ್‌ಗೆ ತೂಕ ಇಳಿಸಿಕೊಳ್ಳೋ ಒತ್ತಡ ಇದ್ಯಾ? ರುಕ್ಮಿಣಿ ಹೇಳೋದ ಕೇಳಿ!

ಸಾರಾಂಶ

ರ್ಯಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯೆಸ್ ಅಭಿಮಾನಿಗಳನ್ನು ಸೆಳೆಯುತ್ತಿದೆ. ಅನೇಕ ಕಲಾವಿದರು ಇದ್ರಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈಗ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ್ದ ನಟಿಯೊಬ್ಬರು ಕಾಣಿಸಿಕೊಂಡಿದ್ದು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  

ಚಂದನವನದ ಚಂದದ ನಟಿ ರುಕ್ಮಿಣಿ ವಸಂತ್. ಬೀರಬಲ್ ಟ್ರಯಾಲಜಿ (Birbal Trioogy) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ನಟಿ, ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲಿಂದಲೇ ಸ್ಯಾಂಡಲ್ವುಡ್ ಅಭಿಮಾನಿಗಳು ಅವರನ್ನು ಗುರುತಿಸಿದ್ದು. ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳ ಮನಸ್ಸು ಕದ್ದ ಸಿಂಪಲ್ ನಟಿ ರುಕ್ಮಿಣಿ ವಸಂತ್ ಗಣೇಶ್ ಅಭಿನಯದ ಬಾನ ದಾರಿಯಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಬಾರಿ  ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್ ನ ಅತಿಥಿಯಾಗಿ ಬಂದಿದ್ದ ಅವರು ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ (Rukmini Vasant), ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ನಟಿ. ಹದಿನೈದನೇ ವಯಸ್ಸಿನಲ್ಲೇ ನಟಿಸೋದಾಗಿ ಹಠ ಹಿಡಿದಿದ್ದ ಬೆಡಗಿಗೆ ಅಮ್ಮ ಪಿಯುಸಿ ಮುಗಿಸುವಂತೆ ತಾಕೀತು ಮಾಡಿದ್ರು. ಲಂಡನ್ (London) ಬ್ಲೂಮ್ಸ್ ಬೇರಿಯಲ್ಲಿರುವ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ ನಲ್ಲಿ ಪದವಿ ಪಡೆದಿರುವ ನಟಿ (actress), ನಟನೆಯನ್ನೇ ವೃತ್ತಿ ಮಾಡಿಕೊಳ್ಳುವ ಕನಸು ಹೊಂದಿದ್ದರು. ಬೀರಬಲ್ ಟ್ರಯಾಲಜಿ ನಂತ್ರ ರುಕ್ಮಿಣಿಗೆ ಅವಕಾಶ ಹುಡುಕಿ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಲಕ್ ನಂಬ್ತೇನೆ ಎನ್ನುತ್ತಾರೆ ರುಕ್ಮಿಣಿ. ಹೇಮಂತ್ ಗೆ ನಾನು ಹಾಕಿದ್ದ ಮೆಸ್ಸೇಜ್ ನೋಡಿ ಅವರು ನನ್ನ ಇನ್ಸ್ಟಾ ಪ್ರೊಫೈಲ್ ನೋಡಿಲ್ಲದೆ ಇದ್ರೆ ನಾನು ಸಪ್ತಸಾಗರದಾಚೆ ಎಲ್ಲೋದಲ್ಲಿ ಕಾಣಿಸಿಕೊಳ್ತಿರಲಿಲ್ಲ ಎನ್ನುತ್ತಾರೆ ರುಕ್ಮಿಣಿ. 

ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನದಗಳಿಕೆಷ್ಟು? ಕಲಿಯುಗದೊಂದಿಗೆ ದ್ವಾಪರ ಯುಗದ ಬೆಸುಗೆ ಈ ‘ಕಲ್ಕಿ’!

ಆಸಕ್ತಿಯಿಂದ ನಟನೆ ಆಯ್ದುಕೊಂಡ ರುಕ್ಮಿಣಿ : ಅಜ್ಜಿ, ಅಮ್ಮ ಭರತನಾಟ್ಯ ಮಾಡ್ತಿದ್ದರು. ಹಾಗಾಗಿ ನನಗೆ ಸ್ಟೇಜ್ ಭಯ ಇರಲಿಲ್ಲ. ಕಲೆಯಲ್ಲಿ ಆಸಕ್ತಿ ನಿಧಾನವಾಗಿ ಹೆಚ್ಚಾಗ್ತಾ ಹೋಯ್ತು ಎನ್ನುವ ರುಕ್ಮಿಣಿ, ಓದಿನಲ್ಲಿ ಮುಂದಿರಲಿಲ್ಲ. ಹಾಗಾಗಿ ದಾರಿ ಬದಲಿಸುವ ನಿರ್ಧಾರಕ್ಕೆ ಬಂದೆ ಎನ್ನುತ್ತಾರೆ. ಸ್ಕೂಲ್ ನಲ್ಲಿ ನಟನೆ ಮಾಡುವಾಗ ಜನರು ಅವರನ್ನು ನೋಡಿ ಖುಷಿ ಪಡೋದನ್ನು ನೋಡಿಯೇ ಖುಷಿಯಾಗ್ತಿದ್ದ ರುಕ್ಮಿಣಿ ಕೊನೆಯಲ್ಲಿ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಅಮ್ಮನನ್ನು ಒಪ್ಪಿಸಿ ಅಮೆರಿಕಕ್ಕೆ ಹೋಗಿ ಮೂರು ಆಡಿಷನ್ ಮಾಡಿ, ಕಾಲೇಜಿಗೆ ಆಯ್ಕೆಯಾದ್ರು ರುಕ್ಮಿಣಿ. 

ರಶ್ಮಿ ಜೊತೆ ಮಾತನಾಡಿದ ನಟಿ ರುಕ್ಮಿಣಿ, ಡಯಟ್, ವರ್ಕೌಟ್ ಗೆ ಆದ್ಯತೆ ನೀಡೋದಾಗಿ ಒಪ್ಪಿಕೊಂಡಿದ್ದಾರೆ. ವೃತ್ತಿಗಾಗಿ ಡಯಟ್ ಮಾಡೋ ಬದಲು ನನ್ನ ಖುಷಿಗೆ, ಫಿಟ್ ಆಗಲು, ಆರೋಗ್ಯವಾಗಿರಲಿ ಡಯಟ್ ಮಾಡ್ತೇನೆ ಎನ್ನುತ್ತಾರೆ. ಇಂಡಸ್ಟ್ರಿ ಬಗ್ಗೆ ಮಾತನಾಡಿದ ರುಕ್ಮಿಣಿ, ಇಲ್ಲಿ ಯಾರೂ ತೂಕ ಇಳಿಸಿಕೊಳ್ಳುವಂತೆ ಒತ್ತಾಯ ಮಾಡಿಲ್ಲ. ನನಗಾಗಿ ಈ ಕೆಲಸ ಮಾಡ್ತೇನೆ ಎಂದಿದ್ದಾರೆ. 

ಇನ್ನು ತಮ್ಮ ಸ್ವಭಾವದ ಬಗ್ಗೆ ಮಾತನಾಡಿದ ರುಕ್ಮಿಣಿ ಇದಕ್ಕೆ ಕಾರಣ ಅಮ್ಮ ಎನ್ನುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಅಮ್ಮ, ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಿದ್ರು. ಮೊದಲ ಬಾರಿ ಕರ್ನಾಟಕದಲ್ಲಿ ಅಶೋಕ ಚಕ್ರ ಪಡೆದ ರುಕ್ಮಿಣಿ ತಂದೆ ಕಾಶ್ಮೀರದಲ್ಲಿ ವೀರಮರಣಹೊಂದಿದ್ದರು. ಇದಾದ್ಮೇಲೆ ಅವರ ತಾಯಿ ಪೌಂಡೇಷನ್ ಶುರು ಮಾಡಿ, ಸೇನೆಯಲ್ಲಿ ವೀರ ಮರಣವನ್ನಪ್ಪಿದ ಸೈನಿಕರ ಕುಟುಂಬದ ಬಳಿ ಹೋಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದರು. ಇದೆಲ್ಲ ನನ್ನ ಜೀವನವನ್ನು ಬದಲಿಸಿತು ಎನ್ನುತ್ತಾರೆ ರುಕ್ಮಿಣಿ. 

ಮದುವೆಯಾದ ನಟರೊಂದಿಗೆ ಪ್ರೀತಿಲಿ ಬಿದ್ದಿದ್ದು ಯಾರೆಲ್ಲಾ? ದರ್ಶನ್ ನಿಖಿತಾ ಬಗ್ಗೆ ಹಬ್ಬಿತ್ತು ಪ್ರೇಮದ ಕಥೆಗಳು !

ಇನ್ನು ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ರುಕ್ಮಿಣಿ, ಅವರಿಬ್ಬರು ಸಹ ಕಲಾವಿದರಿಗೆ ನೀಡುವ ಕಾನ್ಫಿಡೆನ್ಸ್ ಇಷ್ಟವಾಗುತ್ತೆ ಎಂದಿದ್ದಾರೆ. ರಕ್ಷಿತ್ ಶೆಟ್ಟಿ ಪ್ರಾಜೆಕ್ಟ್ ಆಯ್ಕೆ ಮಾಡುವ ರೀತಿ ಇಷ್ಟಪಟ್ಟ ರುಕ್ಮಿಣಿ, ಅವರ ತಾಳ್ಮೆಯನ್ನು ಕಲಿಯಬೇಕು ಎಂದಿದ್ದಾರೆ ರುಕ್ಮಿಣಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?