ಆಗಾಗ ಹೊಸ ರೆಸಲ್ಯೂಷನ್ ತೆಗೆದುಕೊಳ್ಳುವ ಯಶ್ ಈ ಹೊಸ ವರ್ಷವನ್ನು ಹೇಗೆ ಬರ ಮಾಡಿಕೊಂಡಿದ್ದಾರೆ?
ಸ್ಯಾಂಡಲ್‌ವುಡ್ (Sandalwood) ರಾಕಿಂಗ್ ಸ್ಟಾರ್, ನ್ಯಾಷನಲ್ ರಾಖಿ ಬಾಯ್ ಯಶ್ (Yash) 2022 ಹೊಸ ವರ್ಷವನ್ನು ಕುಟುಂಬದ ಜೊತೆ ಆಚರಣೆ ಮಾಡಿದ್ದಾರೆ. ಸಹೋದರಿ ನಂದಿನಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಟುಂಬಸ್ಥರ ಜೊತೆ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 (KGF 2) ಸಿನಿಮಾ ರಿಲೀಸ್‌ಗೆ ಕಾಯುತ್ತಿರುವ ಅಭಿಮಾನಿಗಳಿಗೆ ರೆಸಲ್ಯೂಷನ್ (resolution) ಬಗ್ಗೆ ಯಶ್ ಮಾತನಾಡಿದ್ದಾರೆ.
'ನನಗೆ ಜನವರಿ (January) ಅಂದ್ರೆ ಇಷ್ಟ. ಏಕೆಂದರೆ ಡಿಸೆಂಬರ್ ತಿಂಗಳಿನಿಂದ ಆಚರಣೆಗಳು ತುಂಬಿರುತ್ತವೆ. ಜೀವನವನ್ನು ಹೊಸದಾಗಿ ಆರಂಭ ಮಾಡುವುದಕ್ಕೆ ಜನವರಿ ಒಂದು ಸ್ಟಾರ್ಟ್ ನೀಡುತ್ತದೆ ಅಷ್ಟೆ. ನನ್ನ ಹುಟ್ಟುಹಬ್ಬವೂ ಜನವರಿಯಲ್ಲಿದೆ. ಆದರೆ ಹುಟ್ಟುಹಬ್ಬಕ್ಕೆ ನಾನು ಹೆಚ್ಚಿನ ಪ್ರಮುಖ್ಯತೆ ನೀಡುವುದಿಲ್ಲ. ಆದರೆ ನಟನಾಗಿ ನನಗೆ ಸ್ಪೆಷಲ್ ಪ್ರಿವಿಲೇಜ್ ಏನೆಂದರೆ ಅಭಿಮಾನಿಗಳ ಮತ್ತು ನನ್ನ ಆಪ್ತರ ಜೊತೆ ಆಚರಿಸಿಕೊಳ್ಳಬಹುದು,' ಎಂದು ಯಶ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.
'ನಾನು ಹೊಸ ವರ್ಷ ಬರುತ್ತಿದ್ದಂತೆ, ಹೊಸ ರೆಸಲ್ಯೂಷನ್ ಇಟ್ಟುಕೊಳ್ಳುವುದಿಲ್ಲ. ನನಗೆ ನಾನೇ ಆಗಾಗ ರೆಸಲ್ಯೂಷನ್ ಹಾಕಿಕೊಳ್ಳುವೆ. ನಾನು ಒಂದು ಸದಾ ಪಾಲಿಸುವ ರೆಸಲ್ಯೂಷನ್ ಅಂದ್ರೆ ದಿನೇ ದಿನೇ ನಾನು ಉತ್ತಮ ವ್ಯಕ್ತಿಯಾಗಬೇಕೆಂಬುವುದು. ಹೊಸ ವರ್ಷಕ್ಕೆ ಯಾವ ರೆಸಲ್ಯೂಷನ್ ಸೀಮಿತ ಮಾಡಿಕೊಳ್ಳುವುದಿಲ್ಲ. ಬದಲಿಗೆ ಅದನ್ನು ಸದಾ ಇಂಪ್ಲಿಮೆಂಟ್ ಮಾಡಿಕೊಳ್ಳುವೆ,' ಎಂದು ಹೇಳಿದ್ದಾರೆ.
'ಕಳೆದು ಎರಡು ವರ್ಷಗಳಿಂದ ಡಿಪ್ರೆಸಿಂಗ್ ಸಮಯ ಎದುರಾಗಿದೆ. ಯಾವ ಡೈರೆಕ್ಷನ್ ತೆಗೆದುಕೊಳ್ಳಬೇಕು, ಎಂದು ನಿರ್ಧಾರ ಮಾಡಲು ಆಗುತ್ತಿಲ್ಲ. ಯಾವುದೇ ದಾರಿ ಆಗಿರಲ್ಲ. ಎಲ್ಲರೂ ಕುಟುಂಬದ ಬಗ್ಗೆ ಚಿಂತಿಸುತ್ತಿದ್ದಾರೆ. ನಮಗೂ ಕಷ್ಟದ ಸಮಯಗಳು ಎದುರಾಗಿದ್ದವು. ಜೀವನದಲ್ಲಿ ಬಂದ ಕಷ್ಟಗಳನ್ನು ಪ್ರ್ಯಾಕ್ಟಿಕಲ್ (Practical) ಎದುರಿಸಬೇಕು. ನಾನು ಸುರಕ್ಷಿತವಾಗಿರುವುದಕ್ಕೆ ಧನ್ಯವಾಗಳನ್ನು ತಿಳಿಸಬೇಕು. ನಾನು ಸದಾ ಪಾಸಿಟಿವ್ ಆಗಿರುವುದು ಒಳ್ಳೆಯ ವೆಪನ್ ಇದು. ನಾವು ಒಳ್ಳೆಯ ವಿಚಾರಗಳನ್ನುನ್ನು ಅಳವಡಿಸಿಕೊಳ್ಳಬೇಕು. ಆಗಲೇ ಈ ಸಮಯವನ್ನು ಬೇಗ ಸಾಗಿಸುತ್ತೇವೆ,' ಎಂದಿದ್ದಾರೆ.
ತಾಯಿ ಪಕ್ಕ ನಿಂತು ಕಣ್ಣು ಹೊಡೆದು ನೆಟ್ಟಿಗರ ಗಮನ ಸೆಳೆದ Ayra Yash!'ಎರಡು ಮುದ್ದಾದ ಮಕ್ಕಳಿರುವ ಯಶ್ ಪೋಷಕರಾಗಿ ಮಾತ್ರವಲ್ಲದೇ, ಮಗನಾಗಿಯೂ ಜವಾಬ್ದಾರಿ ಹೆಚ್ಚಾಗಿದೆ. ಹಿರಿಯರು ಮತ್ತು ಕಿರಿಯರ ಬಗ್ಗೆ ಚಿಂತೆ ಹೆಚ್ಚಾಗಿದೆ. ನಾವು ನಮಗಾಗಿ ಮಾತ್ರ ಎಂದು ಚಿಂತಿಸುವಂತಿಲ್ಲ. ನಾವು ಏನೇ ಮಾಡಿದರೂ ಅವರು ನಮ್ಮ ಹಿಂದಿರುತ್ತಾರೆ. ನಾವು ಅದರ ಬಗ್ಗೆ ಚಿಂತಿಸುತ್ತೇವೆ. ಇದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ನಾವು ಮಾಡಬೇಕಾದ ಕೆಲಸಗಳಿಗೆ restrict ಮಾಡಿಕೊಳ್ಳುತ್ತೇವೆ. ನಾವು ಪ್ರಯಾಣ ಮಾಡುವುದನ್ನು ಆದಷ್ಟು avoid ಮಾಡಿದ್ದೀವಿ. ಎಲ್ಲಾ ನಾರ್ಮಲ್ ಆಗುತ್ತಿದ್ದಂತೆ, ನಾವು ಬೇಗ ಗೇಮ್ ಶುರು ಮಾಡಬೇಕು ಎಂದುಕೊಳ್ಳುತ್ತಾರೆ. ಈ ಸಮಯದಲ್ಲಿ ನಾವು ನಮ್ಮ ಆಪ್ತರನ್ನು ಕಳೆದುಕೊಂಡು ನೊಂದಿದ್ದೀವಿ. ನಾವು ಪ್ರಕೃತಿ ಎದುರು ಎಷ್ಟು ಚಿಕ್ಕವರು ಎಂದು ತಿಳಿಯುತ್ತದೆ,' ಎಂದು ಯಶ್ ಹೇಳಿದ್ದಾರೆ.
'ನಾನು ಸದಾ ಒಂದು ವಿಚಾರದ ಬಗ್ಗೆ ಮಾತ್ರ ಗಮನ ಹರಿಸುವೆ. ಸಿನಿಮಾ ವಿಚಾರದಲ್ಲಿ multitasking ಮಾಡುವುದಿಲ್ಲ. ನಾನು ಜೀವನದಲ್ಲಿ ಮಲ್ಟಿ ಟಾಸ್ಕ್ ಮಾಡುವಾಗ ಸಿನಿಮಾ ಕ್ಷೇತ್ರದಲ್ಲಿ ಮಾಡುವುದು ಕಷ್ಟ. ಜನರು ಚಿಂತಿಸುವಷ್ಟು ಸುಲಭವಲ್ಲ. ಸಣ್ಣ ನಿರ್ಧಾರ ಮತ್ತು ಹೆಜ್ಜೆ ದೊಡ್ಡ ವ್ಯತ್ಯಾಸ ಮಾಡುತ್ತದೆ. ನಾನು ಓವರ್ ಕಾನ್ಫಿಡೆಂಟ್ ವ್ಯಕ್ತಿ ಅಲ್ಲ. ಸಿನಿಮಾ ವಿಚಾರವಾಗಿ ಸದ್ಯಕ್ಕೆ ನಾನು ಯಾವುದರ ಬಗ್ಗೆಯೂ ಕಾಮೆಂಟ್ ಅಥವಾ ಅನೌನ್ಸ್ ಮಾಡುವುದಿಲ್ಲ. ಪ್ರಾಡೆಕ್ಟ್ ಇಲ್ಲದೆ ಮಾರ್ಕೆಟಿಂಗ್ ಮಾಡುವುದಕ್ಕೆ ಇಷ್ಟವಿಲ್ಲ,' ಎಂದಿದ್ದಾರೆ ರಾಖಿ ಬಾಯ್.